ಗಣಪಾ ನೀ ಪಾಲಿಸೊ ಗಜಮುಖನೆ ವೋ ಪ
ತ್ರಿಣಿಯಸತಿ ಗಿರಿಜಾಸುತನೆ ಕೇಳ್
ಮನುಮುನಿ ಸನಕಾದಿ ವಂದಿತ
ಅಣಿದು ನೀ ರಕ್ಷಿಸಲು ನಿನಗಿ
ನ್ನೆಣೆಯುಗಾಣೆನು ಸರ್ವಸಿದ್ಧಿ ವೋ 1
ವೇದಶಾಸ್ತ್ರ ಪುರಾಣ ವಿದ್ವ
ಕ್ಕಾದಿ ರೂಪನೆ ದಿವ್ಯಪ್ರಣನಾ
ನಾದರೂಪನೆ ಸರ್ವಮಂಗಳ
ಸಾಧು ಶಿಖರನೆ ಸರ್ವಸಿದ್ಧಿ ವೋ 2
ಏಕದಂತನೆ ಷಣ್ಮುಖಾಗ್ರಜ
ವಾಕ್ಕು ಶುದ್ಧಿಯೊಳಾಡಿಸೆನ್ನನೂ
ಬೇಕು ನಿನ್ನಯ ಕರುಣಯಿತರವು 3
ವಾಸವಾರ್ಚಿತ ಶ್ರೀಗುರು ಹಿರಿ
ದಾಸ ತುಲಸೀರಾಮ ನಿನ್ನಯ
ದೋಷ ಅಂತಕನಾಮ ಯತಿಗಣ
ಪ್ರಾಸು ಹೊಂದಿಸೊ ಯೀಶಪುತ್ರನೇ 4