ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಂಗಳೂರಿನ ಗಣೇಶನನ್ನು ನೆನೆದು) ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ. ಬಾಗುವೆ ಶಿರ ಶರಣೌಘಶರಣ್ಯ ಸು- ರೌಘಸನ್ನುತ ಮಹಾಗುಮ ಸಾಗರ ಅ.ಪ. ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭ ಕಟಿ ವಿಗತಲೋಭ ಹೃದ್ಯಜನದುರಿತಭಿದ್ಯ ವಿನಾಯಕ ವಿದ್ಯಾದಿ ಸಕಲ ಬುದ್ಧಿಪ್ರದಾಯಕ 1 ಏಕದಂತ ಚಾಮೀಕರ ಖಚಿತ ವಿಭೂಷ ಗಣೇಶ ಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸ ಶೋಕರಹಿತ ನಿವ್ರ್ಯಾಕುಲ ಮಾನಸ ಲೇಖಕಾಗ್ರಣಿ ಪರಾಕೆನ್ನ ಬಿನ್ನಪ 2 ವರಮಂಗಲಪುರ ಶರಭಗಣೇಶ್ವರ ಧೀರ ಉದಾರ ಸುರುಚಿರ ಶುಕ್ಲಾಂಬರಧರ ವಿಘ್ನವಿದಾರ ಹರಿ ಲಕ್ಷ್ಮೀನಾರಾಯಣಶರಣರ ಗುರು ಗುಹಾಗ್ರಜ ಮನೋಹರ ಸುಚರಿತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗಣೇಶ ಪ್ರಾರ್ಥನೆ ನಿರ್ವಿಘ್ನ ನೀಡೋ ನಭದೀಶಾ ಪ ಗಜಮುಖ ಅಗಜ ಅಂಗಜ ಮೃದ್ಭವ ಗಜವರದನ ನಿಜ ದಾಸ 1 ನಾಕಪವಂದ್ಯ ಪಿನಾಕಿಧರನುತ ಏಕದಂತ ದ್ರಿತ ಪಾಶಾ 2 ಶಿರಿಗೋವಿಂದ ವಿಠಲನ ದಾಸರಿಗೆ ನಿಖಿಳ ಭಯ ನಾಶ 3
--------------
ಅಸ್ಕಿಹಾಳ ಗೋವಿಂದ
ಗೌರಿನಂದನ ಗಜವಂದನ ಗೌರಿನಂದನ ಸೂರಿ ವಿಘ್ನಹರಣ ಪ. ಯೋಗಿವರ್ಯ ಗುರುವೆ ಬಾಗಿ ಬಿನ್ನವಿಸುವೆ ಭಾಗವತರ ಸಂಗವಾಗಲಂತರಂಗ 1 ಲೋಕೈಕಶರಣ್ಯ ಲೇಖಕಾಗ್ರಗಣ್ಯ ಏಕದಂತ ಶಾಂತ ಶ್ರೀಕರ ನಿಶ್ಚಿಂತ 2 ಅನಘ ಲಕ್ಷ್ಮೀನಾರಾಯಣ ಪದಾಬ್ಜಭ್ರಮರ ಪ್ರಣತಕಲ್ಪಭೂಜ ಪಾಹಿ ವಿಘ್ನರಾಜ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗೌರಿನಂದನ ಗಜವಂದನ ಗೌರಿನಂದನ ಸೂರಿ ವಿಘ್ನಹರಣ ಪ. ಯೋಗಿವರ್ಯ ಗುರುವೆ ಬಾಗಿ ಬಿನ್ನವಿಸುವೆ ಭಾಗವತರ ಸಂಗವಾಗಲಂತರಂಗ 1 ಲೋಕೈಕಶರಣ್ಯ ಲೇಖಕಾಗ್ರಗಣ್ಯ ಏಕದಂತ ಶಾಂತ ಶ್ರೀಕರ ನಿಶ್ಚಿಂತ 2 ಅನಘ ಲಕ್ಷ್ಮೀನಾರಾಯಣ ಪದಾಬ್ಜಭ್ರಮರ ಪ್ರಣತಕಲ್ಪಭೂಜ ಪಾಹಿ ವಿಘ್ನರಾಜ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಪ ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ 1 ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ 2 ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ 3
--------------
ವಿಜಯದಾಸ
ವಿಘ್ನೇಶ ಪಾಹಿಮಾಂ ವಿಘ್ನ ನಿವಾರಕ ನಿರ್ವಿಘ್ನದಾಯಕ ಪ ಭಗ್ನದಂತಾಕಾಶಾಭಿಮಾನಿ ಮಗ್ನಂ ಕೃತ್ವಾವೋ ಮನ ಅಗ್ನಿ ನೇತ್ರಸುತ ತವ ಪದದೆ ಅ.ಪ ಕುಕ್ಷಿ ಮಹಾಲಂಬೋದರ ಇಕ್ಷುಚಾಪಹರ ಅಕ್ಷತ ಶೋಭಿತ ಗಜಪಾಲ ರಾಕ್ಷಸ ಮದಹರ ಅಂಕುಶಪಾಶ ಕಿನ್ನರ ವಂದಿತ ಚರಣ 1 ಗಜಾನನ ಮನೋಹರ ಗಾತ್ರ ಅಜಿನ ಬದ್ಧ ಪ್ರಲಂಬ ಪವಿತ್ರ ಭಜಕೇಷ್ಟದ ಪರಮ ಸೂತ್ರ ಸುಜನ ಪಾಪ ಪರ್ವತ ವೀತಿ ಹೋತ್ರ 2 ಮೂಷಕ ಗಮನ ವಾಯಭುಗ್ ಭೂಷ ಆದಿಪೂಜ್ಯ ವಿತತ ಮಹಿಮ ಏಕದಂತ ಗಂಧಲೇಪಿತ ವಕ್ಷ ಪತಿತ ಪಾವನ ವಿಶ್ವೋಪಾಸ್ಯ 3 ವ್ಯಾಸೋಕ್ತ ಪುರಾಣ ಲಿಖಿತನೆ ಶೂರ ವಿಂಶತ್ಸೇಕ ಮೋದಕ ಭಕ್ಷ ಕಟಿ ವಿರಾಜಿತ ಕ್ಲೇಶನಾಶನ ಸುಂದರ ಆಶಾಪಾಶ ರಹಿತ ಭೂತ ಗಣೇಶ 4 ಹಾಟಕ ಮಣಿಮಯ ಮಕುಟ ತಟಿತ್ತೇಜ ನಿತ್ಯವಹಿರೂಪ ಪಟಪಟ ಶಬ್ದಘಟಿತ ಗಜಕರ್ಣ ನಿಟಿಲಾಕ್ಷ್ಯವಂದ್ಯ ವಿಜಯರಾಮಚಂದ್ರ ವಿಠಲ ಪೂಜಕ ಶತಸ್ಥ 5
--------------
ವಿಜಯ ರಾಮಚಂದ್ರವಿಠಲ
ಶರಣು ಗಜಾನನನೆ ಶರಣು ಲಂಬೋದರನೆ ಶರಣು ಪಾರ್ವತಿ ಪುತ್ರ ಶುಭಗಾತ್ರ ಪ ಆದಿಯಲಿ ನಿನ್ನ ಪಾದಭಜನೆಯ ಮಾಡೆ ಸಾದರದಿ ಸಲಹುವೆ ಮೋದವಿತ್ತು ಮೇದಿನಿಯಲಿ ನಿನ್ನಾರಾಧನೆಯ ಮಾಡದವ ನ- ರಾಧಮನೆನಿಸುವನಿದು ಪುಸಿಯಲ್ಲ 1 ಆಖುವಾಹನನೆ ನೀ ಕಳೆ ವಿಘ್ನಗಳ ಸಾಕು ಲಾಲಿಸೆನ್ನ ಏಕದಂತ ಮಣಿ ಭೂಷಣ ಕಾಕುಜನ ಕುಠಾರ ಲೋಕೈಕ ವೀರ 2 ಸಿತಿಕಂಠ ವರಪುತ್ರ ಪ್ರತಿ ವಾಸರವು ನಾ ನುತಿಸಿ ಬೇಡುವೆ ನಿನ್ನ ಸತಿರಹಿತನೇ ಸಿರಿ ರಂಗೇಶವಿಠಲನ ಅತಿಪ್ರೀತಿಯಿಂದ ಭಜಿಪ ಮತಿಯ ನೀಡೋ 3
--------------
ರಂಗೇಶವಿಠಲದಾಸರು
ಶರಣು ಶ್ರೀ ಗಣನಾಥ ಮೂಷಿಕೇಂದ್ರ ವರೂಢ ಶರಣು ವಿದ್ಯದ ಸತ್ರ ಲಂಬೋದರ ಶುಭಗಾತ್ರ ಶರಣು ವರದೋರ್ದಂಡ ಶುಂಡ ಮಂಡಿತ ಗಂಡ ಕುಂಡಲ ವಕ್ರತುಂಡಾ ಶರಣೂ ಸುರನರಧೇಯ ಸಿದ್ದೀಂದಿರಾ - ಪ್ರೀಯ ಶರಣು ವಿಘ್ನವಿನಾಶ ಏಕದಂತ ಪ್ರಕಾಶ ಶರಣು ಮಹಿಪತಿ ನಂದನಗ ನೀಡುವಾನಂದ ಶರಣು ಪಾರ್ವತಿಯ ಕಂದಾ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ವದೈವ ಸ್ತುತಿಗಳು 1. ಶ್ರೀ ಗಣಪತಿ ಸ್ತುತಿಗಳು 163 ಗಜಮುಖ ಗಣಪ ಪಾಹಿಮಾಂ ಪ ತ್ರಿಜಗಾಧಿಪ ಸಂಪೂಜಿತ ಅಜವಂದಿತ ಏಕದಂತಂ ಅ.ಪ ಗಿರಿಜಾಸುತ ಸುಖವರ್ಧನ | ಉರಗಾಧಿಪ ಕಟಿಬಂಧನ ವರದಾ ಮೌಕ್ತಿಕ ರದನ [ವರಮಾಷಿಕವಾಹನಾ] 1 ಗಂಗಾಧರ ಮನಮಂದಿರ ಇಂಗಿತೇಷ್ಟದಾತಾರ ಮಂಗಳ ಪಾಶಾಂಕುಶಧರ ಮಾಂಗಿರೀಶ ಪ್ರಿಯಶಂಕರ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಂಬಿದೆ ನಿನ್ನ ಗಣೇಶ ಜಗ-ದಂಬಿಕಾತನಯ ವಿಶ್ವಂಭರದಾಸ ಪ.ಲಂಬೋದರ ವಿಘ್ನೇಶ ಶರ-ಣೆಂಬುದು ಸುರನಿಕುರುಂಬ ಮಹೇಶ ಅ.ಪ.ತರುಣಾದಿತ್ಯಪ್ರಕಾಶ ನಿನ್ನಶರಣಾಗತನಾದೆ ಮೋಹನ ವೇಷಸುರುಚಿರಮಣಿಗಣಭೂಷ ಜಗದ್ಗುರುವೆ ಗುಹಾಗ್ರಜ ಪೊರೆಯೋನಿರ್ದೋಷ1ಸಂತಜನರ ಮನೋವಾಸ ಮೋಹಭ್ರಾಂತಿಯಜ್ಞಾನಧ್ವಾಂತವಿನಾಶಶಾಂತಹೃದಯ ಸುಗುಣೋಲ್ಲಾಸ ಏಕದಂತ ದಯಾಸಾಗರ ದೀನಪೋಷ 2ಲಕ್ಷ್ಮೀನಾರಾಯಣನೆ ವ್ಯಾಸಗುರುಶಿಕ್ಷಿತ ಸುಜ್ಞಾನ ತೇಜೋವಿಲಾಸಅಕ್ಷರಬ್ರಹ್ಮೋಪದೇಶವಿತ್ತುರಕ್ಷಿಸು ದನುಜಾರಣ್ಯಹುತಾಶ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ