ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕರುಣವೊ ಕೃಷ್ಣ ಎಮ್ಮ ಮೇಲೆ ಪ ನಾನಾಪತ್ತುಗಳ ಕಳೆದು ಸಲಹಿದೆಯೊ ಅಕಳಂಕ ಅ.ಪ. ಕೌರವ ಕೊಟ್ಟ ಪರಿಪರಿಯ ಕಷ್ಟಗಳ ಪರಿಹರಿಸಿ ನೀ ಕಾಯ್ದೆ ಪರಮ ಕರುಣಿ ಅರಗಿನ ಮನೆಯಲಿ ಉರಿದುಪೋಗದ ತೆರದಿ ಭರದಿಂದ ರಕ್ಷಿಸದೆ ಭೀಮನೊಳು ನೀನಿದ್ದು 1 ಕಾನನದಿ ನಾವ್ ನಿದ್ರೆಗೈಯುತಿರೆ ಕಡುಘೋರ ದಾನವ ಹಿಡಿಂಬಕನು ಕೊಲ್ಲ ಬರಲು ಪ್ರಾಣಸುತ ನಮ್ಮ ಈ ಭೀಮನಿಗೆ ಬಲಕೊಟ್ಟು ಹೀನಖಳನನು ಸೋಲಿಸಿ ಕಾಯ್ದೆ ಸ್ವಾಮಿ 2 ಲೋಕಕಂಟಕನಾದ ಭೀಕರ ಬಕಾಸುರನ ನೀ ಕೊಂದು ಈ ವೃಕೋದರನಲಿ ನಿಂದು ಏಕಚಕ್ರಪುರದ ಲೋಕವನು ನೀ ಕಳೆದೆ ಏಕಮೇವಾದ್ವಿತೀಯ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು