ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತ್ಸ್ಯಾದಿ ದಶಾವತಾರಗಳು ಮತ್ಸ್ಯಾದ್ಯವತಾರವನು ತಾಳ್ದು ನೀ ಪರದೇವ ಮನ್ವಂತರ ಪ್ರಳಯಜಲಧಿಯನು ಪೊಕ್ಕು ಸೂರ್ಯಪುತ್ರನ ಮನುವ ದೋಣಿಯಲ್ಲಿರಿಸಿ ನೀನ್ ನೀರಾಟವಾಡಿದೆಯ ಲೀಲೆಯಿಂದಲಿ ನೀಂ 33 ಮಂದರ ಪೊಕ್ಕೆ ಕೂರ್ಮರೂಪವ ತಾಳ್ದು ಕಡಲಿನಡಿ ಸೇರಿ ದೇವತೆಗಳಿಗೆಯಮೃತ ಕಲಶವನು ತೆತ್ತು ನೀನ್ ದೈತ್ಯರನು ವಂಚಿಸಿದೆ ಮೋಹಿನಿಯದಾಗಿ34 ಸೂಕರದ ರೂಪವನು ತಾಳ್ದು ನೀನ್ ಸಿರಿವರನೆ ಚಿನ್ನ ಕಣ್ಣಿನ ದೈತ್ಯಸೇವಕನ ಕೊಂದು ದೈತ್ಯನಾತ್ಮಜ್ಯೋತಿಯನು ತನ್ನಲಿಯಿರಿಸಿ ವಾರಾಹ ರೂಪದಿಂದಲಿ ಆಟವಾಡ್ದೆ35 ಶಿಲ್ಪಿಯಿಂ ರೂಪುಗೊಂಡಿಹ ಕಂಬದಲಿಯಿದ್ದು ವಿಷ್ಣುವೇ ಪ್ರಹ್ಲಾದ ಮಗುವನುದ್ಧರಿಸೆ ನಂಬಿದೆಡೆಯೆಲ್ಲೆಲ್ಲು ಇರುವೆನೆಂಬುದ ತಿಳಿಸೆ ನರಸಿಂಹ ರೂಪವನು ತಾಳ್ದೆ ಪರಮಾತ್ಮ 36 ಇಂದ್ರಾವರಜನೊಮ್ಮೆ ವಟುವಾಮನನು ಬಂದು ಬಲಿಯ ಯಾಗದ ಸಮಯ ಮೂಹೆಜ್ಜೆ ಬೇಡೆ ರಾಜ ಕೊಡಬಯಸಲದ ಗುರು ಶುಕ್ರತಡೆದಾಗ ದಾನಿ ಬಲಿ ಕೊಟ್ಟವನು ಸಿದ್ಧಿಯನು ಪಡೆದಾ 37 ಸಂಹಾರ ಲೀಲೆಯನು ತೋರಲವ ಪರಮಾತ್ಮ ಪಿತೃವಾಕ್ಯಪಾಲನೆಗೆ ತಾಯ ತಲೆ ಕಡಿದು ಮಾತೆಯನು ಬದುಕಿಸುತ ದುಷ್ಟರಾಜರ ತರಿದು ರಾಜವಂಶವನು ನಿರ್ವಂಶ ಮಾಡಿದನು 38 ಎದೆಯೊಳಿಹ ಸೀತೆಯನು ಕಾಡೆಲ್ಲ ಹುಡುಕುತ್ತ ಜಲಧಿಗೇ ಕಟ್ಟಿ ಸೇತುವೆಯ ಸಿರಿವರನು ಕಪಿ ಸೈನ್ಯದೊಡಗೂಡಿ ಲಂಕೆಯನ್ನೈದುತ್ತ ರಾವಣನ ಕೊಂದು ಸೀತೆಯ ಮರಳಿ ತಂದೆ 39 ಇಬ್ಬರನು ತಾಯಂದಿರನು ರಮಿಸಿ ಮಗುವಾಗಿ ಪದಿನಾರು ಸಾಸಿರದ ಸತಿಯರನು ಒಲಿಸಿ ಏಕಕಾಲದಲಿ ಎಲ್ಲರನು ಮೆಚ್ಚಿಸಿದ ಹರಿ ಆನಂದರೂಪದವ ಪರಮಾತ್ಮ ನಿಜವು 40 ತಾಮಸದ ಜೀವರನಧೋಗತಿಗೆಯಿಳಿಸುತಲಿ ಬುದ್ಧ ರೂಪದಲಿ ತ್ರಿವಿಧ ಜೀವಂಗಳಿಗೆ ಯೋಗ್ಯತೆಗೆ ತಕ್ಕಂತೆ ಗತಿಯಾಗಿಸುವದೆ ನಿನ್ನ ಸಂಕಲ್ಪವದಲಾ 41 ಧರ್ಮವದು ನಶಿಸುತಲಿ ದುಷ್ಟರಾಜರು ತುಂಬೆ ಕಲಿಯುಗದ ಕೊನೆಯಲ್ಲಿ ಕಲ್ಕಿ ರೂಪದಲಿ ಅಶ್ವವನ್ನೇರುತಲಿ ದುಷ್ಟರನು ಸಂಹರಿಸಿ ಕೃತಯುಗವ ಮಾಡಿದೆಯ ಪರಮಾತ್ಮ ನೀನು 42 ಕಾಣದಾ ದೇವರಿಗೆ ಭಕ್ತಿಯಿಂ ಪೂಜಿಸಲು ಹತ್ತು ರೂಪಗಳಿವುಗಳೇ ಮುಖ್ಯವದರಿಂ ಅವತಾರ ರೂಪಗಳ ಪ್ರತಿಮೆಗಳ ಪೂಜಿಸುತ ಸರ್ವಾರ್ಥಸಿದ್ಧಿಗಳ ಪಡೆಯುವರು ಜನರು 43 ವೇದೋಕ್ತ ಪದಗಳಿಗೆ ಮುಖ್ಯಾರ್ಥ ಹರಿಯಿಹನು ಅಗ್ನ್ಯಾದಿ ನಾಮಗಳು ದೇವರಿಗೆಯಿಹವು ದೇವತೆಗಳಿಗೆಲ್ಲ ಅಗ್ರಣಿಯು ತಾನಾಗಿ ಅಗ್ನಿನಾಮವು ನಿನಗೆ ಒಪ್ಪುವುದು ಹರಿಯೆ 44 ಇಂದ್ರಿಯಂಗಳೆ ಕುದುರೆ ಬುದ್ಧಿಯೇ ಸಾರಥಿಯು ಮನವೆಂಬ ಕಡಿವಾಣ ಹಿಡಿದೋಡಿಸುವವನು ಜೀವನೇ ರಥಿಕನವ ವಿಷಯಬೇಟೆಗಳಲ್ಲಿ ಪರಮಾತ್ಮನರಿವೆಂತು ಮೂಡುವುದು ಅವಗೆ 45 ವಾಸದಿಂ ಬೆಳಗಿಸುವ ವಾಸುದೇವನು ತಾನು ವರುಣನಂತರ್ಗತನು ಶಿರದಲ್ಲಿಯಿಹನು ಸಪ್ತರಂಧ್ರಗಳಲ್ಲಿ ವಿದ್ಯುತ್ತ ಹರಿಸುತಲಿ e್ಞÁನವನ್ನೊದಗಿಪನು ಶ್ರೀಕೃಷ್ಣನವನು 46 ವಿe್ಞÁನಿ ಭಗವಂತ ಹೃದಯ ಗುಹೆಯಲ್ಲಿಹನು ಅನಿರುದ್ಧ ಯಜ್ಞೇಶ ಮೊದಲಾದ ಪೆಸರಿಂ ಪ್ರಾಣವಾಯುಗಳ ಜೊತೆ ಪಾಕವನು ಗೈಯುತ್ತ ರಕ್ತರೂಪವ ಮಾಡಿ ಪಾಲಿಸುವ ನಮ್ಮ47 ಪ್ರಾಕೃತ ಜ್ಯೋತಿಯಾದೊಡೆ ದೇಹ ಸುಡದಿರದು ಅಪ್ರಾಕೃತ ಜ್ಯೋತಿ ಯಜ್ಞೇಶಗಿಹುದು ಭಕ್ಷ್ಯಭೋಜ್ಯಗಳೆಂಬ ಲೇಹ್ಯಪೇಯಗಳೆಂಬ ನಾಲ್ಕುವಿಧ ವಸ್ತುವಿನ ಪಾಕ ಮಾಡುವನು 48 ವಾಯುವಂತರ್ಗತನು ನೀಲರೂಪದ ದೇವ ಪ್ರದ್ಯುಮ್ನನಾಮಕನು ನಾಭಿಯಲ್ಲಿಹನು ಕಾಮರೂಪಿಯು ಅವನಪಾನಕ್ಕೆ ಒಡೆಯನವ ಪುರುಷರಿಂದಲಿ ಸೃಷ್ಟಿಗವನೆ ಕಾರಣನು 49 ಪೃಥ್ವಿವಿಯಪ್ ತೇಜಸ್ಸು ಮೂರು ದೇಹದ ಮೂಲ ಶ್ರೇಷ್ಠ ವಾಯುವು ಸೇರಿ ದೇಹಕ್ಕೆ ಚಲನೆ ಹೃದಯದಲ್ಲಾಗಸವು ಇರುವ ಕಾರಣದಿಂದ ಪಂಚಭೂತಂಗಳಿವು ದೇಹದಲ್ಲಿಹವು 50 ವಾಯುವಿನ ಜೊತೆಗೂಡಿ ದೇಹಚಾಲಕನು ಯಂತ್ರರೂಪದಲ್ಲಿದ್ದು ಯೋಗ್ಯತೆಗೆ ತಕ್ಕಂತೆ ಕಾರ್ಯವನು ಮಾಡಿಸುತ ಫಲವನ್ನು ಕೊಡುವ 51
--------------
ನಿಡಂಬೂರು ರಾಮದಾಸ