ಅರುಕ್ಯುಳ್ಳ ಗುರುಪಾದವಾಶ್ರೈಸೊ ಎನ್ನ ಮನವೆ
ಎgವಾಗ್ಯನುಭವ ಸುರಕಿ ಕೊಳ್ಳೊ ಧ್ರುವ
ಮರಹುಮರದೀಡ್ಯಾಡಿ ಅರಹುವಿನೊಳರಿತು ಗೂಡಿ
ಕುರುಹ ಗುರುತುಮಾಡಿ ಸ್ಥಿರವು ಕೂಡಿ 1
ತಿರಹು ಮರ್ಹವಿನ ಖೂನ ಅರಹು ಮರ್ಹವಿನ ಸ್ಥಾನ
ಇರಹು ಆಗೀಹ್ಯ ಘನ ಬೆರಿಯೋ ಧ್ಯಾನಾ 2
ಜೀವ ಶಿವರಸಂದು ಠಾವಮಾಡಲು ಬಂದು
ಭವಕ ಬೀಳುವನೆಂದು ಭಾವಿಕನೆಂದು 3
ಅಗ್ರಗುರು ಸುವಿದ್ಯ ಶೀಘ್ರಸಾಧ್ಯ 4
ಕೀಲು ತಿಳಿದರೆ ಸಾಕು ಜಾಲವ್ಯಾತಕೆ ಬೇಕು
ಮೂಲಗುರುಪಾದ ಮಹಿಪತಿ ನೀ ಸೋಂಕು 5