ಮಾಡುವುದೆಲ್ಲ ವಿವಾದಕೆ ಕಾರಣ | ಸಾಧಿಸುವದೆ ಬ್ರಹ್ಮಾ ಪ
ಸಾಧು ಜನರ ಸುಸಮಾಧಿಯ ಬೋಧವು ಬಾಜಾರವೇನೋ ತಮ್ಮಾ ಅ.ಪ
ಮನದೊಳು ತನದೊಳು ನಯನಗಳಿರುತಿರೆ | ಮನ ಬಯಸಿದದೊಂದು | ಘನ ಜ್ಯೋತಿಯ ತಾ ತಾರದೆ ತೋರದು | ಸನ್ಮುಖದಲಿ ನಿಂದೂ 1
ಅರಿವುದು ಕರಣದಿ ಬೆರೆವುತ ನಿನ್ನ | ಅರಿಯದಲಿರುತಿಹುದೂ | ಪರಮ ಪುರುಷರಾಚರಿಸುವ ಪರಿಯಲಿ | ಗುರುಪದ ಸಾರುವದೋ2
ತಪ್ಪದೆ ನೆಲಕೆ ಭಗುರಿಯನೆ ಎಸೆವರೆ | ಜಪ್ಪಿಸುವರೆ ಹೇಳಾ | ದಪ್ಪನೆ ಗುರು ಭವತಾರಕ ತ್ರಯ ಜಗದಪ್ಪನ ನೀ ಕೇಳಾ 3