ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ. ಸಾರಿದೆನೊ ನಿನ್ನ ಪದವ ಅನುದಿನ ಸೇರಿಸೆನ್ನನು ಭಕ್ತಕೂಟದಿ ಗಾರು ಮಾಡುವುದುಚಿತವೇ ಹರಿ ಭವ ಸಮುದ್ರದಿ ಅ.ಪ. ತಾಪ | ನಾನಾರಿಗುಸುರಲೊ ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ ಭವ ಶ್ರೀಪ | ತೋರದಿರು ಕೋಪ ಘುಡು ಘುಡುಸಿ ನೀ ಎನ್ನ ಬೆದರಿಸೆ ತಡೆವೆನೇ ನಿನ್ನ ಕೋಪದಗ್ನಿಗೆ ಬಿಂಕ ಎನ್ನೊಳು ತಡೆಯೊ ಎನ್ನ ದುರುಳತನಗಳ ಕಡುಕರುಣಿ ನೀನಲ್ಲವೆ ಹರಿ ಒಡಲೊಳಗೆ ಪ್ರೇರಕನು ನೀನೆ ನಡಸಿದಂದದಿ ನಡೆವೆನಲ್ಲದೆ ಒಡೆಯ ಎನ್ನ ಸ್ವತಂತ್ರವೇನೊ? 1 ದುರುಳತನದಲಿ ದೈತ್ಯ | ಭೂವಲಯವೆಲ್ಲವ ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ ಕರಕರೆ ಪಿತ ಬಡಿಸುತಿರಲು ದೊರೆಯೆ ನೀ ಪೊರೆ ಎಂದು ಮೊರೆಯಿಡೆ ಸರ್ವವ್ಯಾಪಕನೆಂದು ತೋರಲು ತ್ವರಿತದಲಿ ಕಂಭದಲಿ ಬಂದು ಸರಸಿಜವು ಕಂಗೆಡುವೊ ಕಾಲದಿ ಧರಿಸಿ ತೊಡೆಯ ಮೇಲಸುರ ಕಾಯವ ಕರುಳ ಬಗೆದು ಮಾಲೆ ಧರಿಸಿ ಪೊರೆದೆಯೊ ಸ್ತುತಿ ಕೇಳಿ ಬಾಲನ 2 ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ ನಿಜಮನವ ನೀ ತಿಳಿದು ಸಲಹೊ ಕಮಲ ತೋರಿ ಕುಜನನಲ್ಲವೊ ಹಿರಿಯರೆನಗೆ ಪಥ ತೋರುತಿಹರೊ ರಜ ತಮವ ದೂರಟ್ಟಿ ಶುದ್ಧದಿ ಭಜಿಸುವಂದದಿ ಕೃಪೆಯ ಮಾಡಿ ಸುಜನರೆನ್ನನು ಪಾಲಿಸುತ್ತಿರೆ ನಿಜದಿ ಗೋಪಾಲಕೃಷ್ಣವಿಠ್ಠಲ3
--------------
ಅಂಬಾಬಾಯಿ