ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಗರ ಎಂಥನಗರ ನಿಂತು ವರ್ಣಿಸಬೇಕುಶ್ರೀಕಾಂತೆಯಿಂದ ಇಂತು ರಮಿಸುವುದು ಪ. ಮುಂದಕ್ಕೆ ನೋಡಲು ಹೊಂದಿದ್ದ ಮನೆಗಳುಹಂದರದ ಜಗಲಿ ಸುಳಿಗೊಳಹಂದರದ ಜಗಲಿ ಸುಳಿಯೆಲಿ ಬೀದಿಯಲಿತುಂಬಿದ ಜನರು ಕಡೆಯಿಲ್ಲ 1 ಅತ್ತಿತ್ತ ನೋಡಲು ಕಾಣುವ ಗೋಪುರಮುತ್ತಿನಂಗಡಿ ಎಡಬಲಮುತ್ತಿನಂಗಡಿ ಎಡಬಲ ನೋಡುತ ಕತ್ತೆತ್ತಿ ನೋಡಿದರೂ ಕಡೆಯಿಲ್ಲ 2 ಕೋಗಿಲದ ಸ್ವರದಂತೆ ಮಕ್ಕಳ ಜೋಗುಳಹಾಡುತೆ ಮನೆ ಬಾಗಿಲ ಮುಂದೆಹಾಡುತೆ ಮನೆಮುಂದೆ ಮಕ್ಕಳಲಾಲಿ ಪಾಡುವರು ಕಡೆಯಿಲ್ಲ3 ನವನೀತ ಭಾರವ ವಹಿಸಿ ಕೆಲರುಭಾರವ ವಹಿಸಿ ಕೆಲರು ಅಲ್ಲಲ್ಲಿಸಾರಿ ಮಾರುವವರು ಕಡೆಯಿಲ್ಲ4 ಹಸಿರು ಬಳೆತೊಟ್ಟು ಕುಸುರಿನ ಸಿಂಬೆಯಲಿಮೊಸರ ಗಡಿಗೆ ಎಸಗುತಮೊಸರ ಗಡಿಗೆ ಎಸಗುತ ಮಾರುವ ಬಿಸಜನೇತ್ರಿಯರು ಕಡೆಯಿಲ್ಲ 5 ಬಿಳಿಯ ದಟ್ಟಿಯುಟ್ಟು ಸಣ್ಣ ಬುಟ್ಟಿಹೊತ್ತುಕಣ್ಣು ಕಜ್ಜಲದ ಕೆಲದೆಯರು ಕಣ್ಣು ಕಜ್ಜಲದ ಕೆಲದೆಯರು ಕೂಗುತಹಣ್ಣು ಮಾರುವವರು ಕಡೆಯಿಲ್ಲ 6 ಅಮ್ಮಮ್ಮ ರಮಿಯರಸು ಒಮ್ಮೊಮ್ಮೆ ಬೀದಿಲೆಸುಮ್ಮನೆ ಸುಳಿವ ಯಮಕದಿಸುಮ್ಮನೆ ಸುಳಿವ ಯಮಕದಿ ಶ್ರೀಕೃಷ್ಣತನ್ನ ಭಕುತರನ ಸಲುಹಲಿ 7
--------------
ಗಲಗಲಿಅವ್ವನವರು
ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ. ಸಾರಿದೆನೊ ನಿನ್ನ ಪದವ ಅನುದಿನ ಸೇರಿಸೆನ್ನನು ಭಕ್ತಕೂಟದಿ ಗಾರು ಮಾಡುವುದುಚಿತವೇ ಹರಿ ಭವ ಸಮುದ್ರದಿ ಅ.ಪ. ತಾಪ | ನಾನಾರಿಗುಸುರಲೊ ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ ಭವ ಶ್ರೀಪ | ತೋರದಿರು ಕೋಪ ಘುಡು ಘುಡುಸಿ ನೀ ಎನ್ನ ಬೆದರಿಸೆ ತಡೆವೆನೇ ನಿನ್ನ ಕೋಪದಗ್ನಿಗೆ ಬಿಂಕ ಎನ್ನೊಳು ತಡೆಯೊ ಎನ್ನ ದುರುಳತನಗಳ ಕಡುಕರುಣಿ ನೀನಲ್ಲವೆ ಹರಿ ಒಡಲೊಳಗೆ ಪ್ರೇರಕನು ನೀನೆ ನಡಸಿದಂದದಿ ನಡೆವೆನಲ್ಲದೆ ಒಡೆಯ ಎನ್ನ ಸ್ವತಂತ್ರವೇನೊ? 1 ದುರುಳತನದಲಿ ದೈತ್ಯ | ಭೂವಲಯವೆಲ್ಲವ ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ ಕರಕರೆ ಪಿತ ಬಡಿಸುತಿರಲು ದೊರೆಯೆ ನೀ ಪೊರೆ ಎಂದು ಮೊರೆಯಿಡೆ ಸರ್ವವ್ಯಾಪಕನೆಂದು ತೋರಲು ತ್ವರಿತದಲಿ ಕಂಭದಲಿ ಬಂದು ಸರಸಿಜವು ಕಂಗೆಡುವೊ ಕಾಲದಿ ಧರಿಸಿ ತೊಡೆಯ ಮೇಲಸುರ ಕಾಯವ ಕರುಳ ಬಗೆದು ಮಾಲೆ ಧರಿಸಿ ಪೊರೆದೆಯೊ ಸ್ತುತಿ ಕೇಳಿ ಬಾಲನ 2 ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ ನಿಜಮನವ ನೀ ತಿಳಿದು ಸಲಹೊ ಕಮಲ ತೋರಿ ಕುಜನನಲ್ಲವೊ ಹಿರಿಯರೆನಗೆ ಪಥ ತೋರುತಿಹರೊ ರಜ ತಮವ ದೂರಟ್ಟಿ ಶುದ್ಧದಿ ಭಜಿಸುವಂದದಿ ಕೃಪೆಯ ಮಾಡಿ ಸುಜನರೆನ್ನನು ಪಾಲಿಸುತ್ತಿರೆ ನಿಜದಿ ಗೋಪಾಲಕೃಷ್ಣವಿಠ್ಠಲ3
--------------
ಅಂಬಾಬಾಯಿ