ದೇವರಾಗಬಾರದೇನೆಲೇ ದೆವ್ವಿನಂಥ.......
ದೇವರಾಗಬಾರದೇನೆಲೇ ಪ
ದೇವರಾಗಬಾರದೇಕೋದೇವನ ಪಾದವನಂಬಿ
ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ
ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ
ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು
ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ
ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು
ಬಂಧಕ್ಕೀಡಾಗುವುದಿದೇನೆಲೆ 1
ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ
ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು
ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ
ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ
ನಾಮ ಭಜಿಸಿ 2
ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು.......
ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ
ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ
ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು
ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ 3