ಕೊಡುವುದನೆ ಕೊಡುಮತ್ತೆ ಎಷ್ಟಾದರಭವ ಪ
ಅಸುವನೀಗಲು ನಾನ್ಹಸಗೆಟ್ಟು ಬೇಡದ
ಅಸಮಶುಚಿಮನ ನೀಡೊ ಕುಸುಮಾಕ್ಷ ಹರಿಯೆ 1
ಅತಿಶಯದ ಬಡತನವು ಸತತ ಪೀಡಿಸಲೆನಗೆ
ಗತಿಯಿಲ್ಲದವವೆನುತ ಸತಿಸುತರು ಜರಿಲಿ
ಧೃತಿಗುಂದಿ ಮತಿಗೆಟ್ಟು ವ್ಯಥೆಬಡುವ ಸ್ಥಿತಿಯನ್ನು
ಹಿತದಿಂದ ತೊಲಗಿಸೈ ರತಿಪತಿಪಿತನೆ 2
ಬಿರುಕಿನೊಳು ಬಂದು ಈ ಮುರುಕು ಕಾಯದ ಇರುವು
ಹರಕೊಂಡು ಹೋಗಲಿ ಹರಿ ಕರುಣದೋರೊ
ನರಕಿಯೆನಿಸುವ ಮಹ ತಿರಕಿ ಸಂಸಾರದ
ಮರುಕವನು ಪರಿಹರಿಸೊ ಪರಕೆ ಪರತರನೆ 3
ಊರು ನಾ ಸೇರಿರಲಿ ಅರಣ್ಯದೊಳಗಿರಲಿ
ಮೀರಿದ ರೋಗದಿಂ ಘೋರ ಬಡುತಿರಲಿ
ಆರೈಸದಾರನ್ನು ಸಾರಸಾಕ್ಷನೆ ನಿನ್ನ
ಪಾರನಾಮದ ಸವಿ ಸುಸಾರ ಎನಗಿರಲಿ 4
ಕೊಡೋಧರ್ಮ ನಿನ್ನದಿದೆ ಬೇಡುವುದು ನನ್ನ ಧರ್ಮ
ಕೊಡುವುದಾದರೆ ನೀನೆ ಕೊಡು ಎನಗೆ ಇದನು
ಪೊಡವಿಯವರಿಗೆ ಬಾಗಿ ಬೇಡದ ಪದವಿಯನು
ಪಿಡಿವೆ ತವಪಾದ ಎನ್ನೊಡೆಯ ಶ್ರೀರಾಮ 5