ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಮುಂಡಿಗೆಗಳು ಪೌರಾಣಿಕ ವಾವೆವರಸೆಯ ಮುಂಡಿಗೆಗಳು 254 ಇಂದು ನೀ ಕರೆದು ತಾರೆ - ಬಾರದೆ ಶ್ರೀಗೋ-ವಿಂದ ತಾ ಮುನಿದಿಹರೆ - ವಿರಹ ಬೇಗೆಯಲಿಬೆಂದು ಸೈರಿಸಲಾರೆ - ಸಖಿ, ನೀನು ತಂದು ತೋರೆ ಪ ನೊಂದರೂ ಮನದಾನಂದದಿಂದನಂದನಂದನನೆಂದು ಸೈರಿಸಿಎಂದಿಗೂ ಅಗಲಿರಲಾರೆ ಕರೆತಂದುಹೊಂದುಗೂಡಿಸೆ ಮಂದಗಮನೆ ಅ ಅಮೃತ ಗಜ ಉನ್ಮತ್ತಕಾಲಿನಿಂದಲಿ ಕೊಲುವ ರೂಪದಿಕಾಲಿನಲಿ ರಿಪುವನು ಸೀಳಿದಕಾಲಿನಲಿ ತಾನಳೆದ ಮೇದಿನಿಕಾಲಿನಲಿ ನಡೆದ ಭಾರ್ಗವಕಾಲಿನಲಿ ವನವಾಸ ಪೋದನಕಾಲಿನಲಿ ಕಾಳಿಯನ ಮರ್ದಿಸಿದನಕಾಲಿನಲಿ ತ್ರಿಪುರರ ಗೆಲಿದನಕಾಲಿಗೆರಗುವೆ ತೇಜಿರೂಢನ 1 ಎವೆಯಿಕ್ಕದೆ ನೋಡಿದ - ತಲೆಯ ತಗ್ಗಿಸಿಕವಲು ಕೋರೆದಾಡೆಯೊಳಾಡಿದ - ಕಂಬದಿ ಮೂಡಿದತವಕದಿಂದಲಿ ಬೇಡಿದ - ಭೂಭುಜರ ಕಡಿದಶಿವನ ಬಿಲ್ಲನು ಮುರಿದ _ ದೇವಕಿಕುವರ ನಗ್ನ ಹಯವನೇರಿದವಿವಿಧಾಬ್ಧಿಯೊಳಾಡಿ ಗಿರಿಧರಸವಿದು ಬೇರನು ಬಾಲಗೊಲಿದನಅವನಿ ಬೇಡಿ ಕೊಡಲಿ ಪಿಡಿದನಸವರಿ ದಶಶಿರನ ಬೆಣ್ಣೆ ಕದ್ದನಯುವತಿಯರ ವ್ರತಗೆಡಿಸಿ ಕುದುರೆಯ ಹವಣುಗತಿಯಲಿ ಏರಿದಾತನ2 ಮತ್ಸ್ಯ ಸೂಕರ ವಿಪ್ರ ಕೂರ್ಮ ವರಹನರಹರಿ ದ್ವಿಜ ಕೊರಳ ಕೊಯ್ದವನ ನೆಲಮಗಳ ವರಶೌರಿ ಬುದ್ಧನ ತುರಗವೇರಿದ ಆದಿಕೇಶವನ3
--------------
ಕನಕದಾಸ
ತನು ನಿನ್ನದು ಜೀವನ ನಿನ್ನದು ರಂಗ ಪ ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಅ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ 1 ರುಚಿ ನಿನ್ನದಯ್ಯ 2 ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಕಾಯ ಪಂಚೇಂದ್ರಿಯಂಗಳು ನಿನ್ನವುಕಾಯಜಪಿತ ಕಾಗಿನೆಲೆಯಾದಿಕೇಶವರಾಯ ನೀನಲ್ಲದೆ ನರರು ಸ್ವತಂತ್ರರೆ 3
--------------
ಕನಕದಾಸ
ನರಹರಿ ಶರಣರಸುರತರು ಶ್ರೀಕರ ಹರಿ ನಿಮ್ಮ ಪಾದಸ್ಮರಣೆ ಮರೆಯಲಾರೆನೆಂದೆಂದು ಪ ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ ಅರಲವ ಬಿಡದವರ ಸ್ಮರಣೆಯೋಳ್ನೆಲೆಗೊಂಡು ತೆರೆದು ಕರುಣಚಕ್ಷು ಪೊರೆವೆ ಎವೆಯಿಕ್ಕದೆ 1 ವೇದವೇದಾದಿ ನಮಿತ ಸಾಧುಸಜ್ಜನ ವಿನುತ ಪಾದದಾಸರ ಭವಬಾಧೆಗೆಲಿಸಿ ಸು ಹಾದಿ ತೋರಿಸಿ ಬಹು ಮೋದದಿಂ ಸಲಹುವಿ 2 ನೀ ಮಾಡಿದುಪಕಾರ ನಾ ಮರೆಯಲಾರೆ ದೇವ ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ 3
--------------
ರಾಮದಾಸರು
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು