ಸುಳ್ಳುಗಳ ಬೋಧಿಸಿ ನೀ ಪೊಳ್ಳಾಗದಿರಲೊ ಪ
ನೀರ್ಗುಳ್ಳೆಯಂಥ ದೇಹ ನಂಬಿ ನಿಜಭಕ್ತ ನಾನೆಂದೂ ಅ.ಪ
ಎಳ್ಳುಕಾಳಿನಷ್ಟಾದರೂ ಈಶನಲ್ಲಿ ಭಕ್ತಿಕಾಣೆ
ಡೊಳ್ಳತುಂಬುವದಕೆ ನಾಲ್ಕಲ್ಲಿ ಇಲ್ಲಿ ಕಲಿತುಕೊಂಡು 1
ಪರರಿಗೆ ಹೇಳುವಂತೆ ನೀ ನಡೆಯುವೆಯೇನೊ
ಪರಗತಿಯಾಗದು ನಿಜ ನಿಜ ನಿಜ ಕಾಣೊ 2
ನಿನ್ನಯೋಗ್ಯತಾನುಸಾರ ನೀನರಿಯಲೊ
ಬನ್ನಬಡುವದೆ ಸಾಕ್ಷಿ ಪುಣ್ಯವೇನಿದರೊಳು 3
ಹಿಡಿ ಹಿಡಿ ಹಿಡಿ ಹಿಡಿ ಹಿರಿಯರ ಪಾದವ 4
ಶರಣ ಜನರ ನೋಡಿ ಶಾಂತನಾಗುತ
ಗುರುರಾಮವಿಠಲನ ಗುರುತರಿಯದೇ ನೀ 5