ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನಿರುವುದನು ಕಾಣದವನು ಪ ಮಾನವ ನಾನು ಧ್ಯಾನವರಿಯದ ನರನು ನಾನಾಪರಾಧಗಳ ಮಾಡಿದವನು ಅ.ಪ ಬೆಣ್ಣೆ ಹಾಲಿನೊಳುಂಟು ಎಣ್ಣೆ ಎಳ್ಳಿನೊಳುಂಟು ಕಣ್ಣರಿಯದಗ್ನಿಯು ಶಮಿಯೊಳುಂಟು ಮಣ್ಣಿನಲಿ ಜಲವುಂಟು ಜಲದಿ ಲವಣಗಳುಂಟು ನೀನೆಲ್ಲರೊಳಗುಂಟು ಎಂದೆಂಬುದರಿಯದ 1 ವೇದಶಾಸ್ತ್ರಪುರಾಣ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಮಾಡಿದವನಲ್ಲ ಆದಿ ಕೇಶವಪಾದ ಪೂಜೆಗೈದವನಲ್ಲ ಆದರಿಸಿ ಕಾಯಯ್ಯ ನೀ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್