ಧೀರತನವ ಪಾಲಿಸೋ ಪ
ಭವ ತೀರಕ್ಕೆನ್ನನು ಸೇರಿಸೋ ಅ.ಪ
ತೊಳಲುತ ಖಿನ್ನನಾಗಿ
ವರ್ಣಶ್ರೇಷ್ಠರಕುಲದಿಬಹು ಪುಣ್ಯದಿ
ಇನ್ನು ಪುನರಪಿ ಜನ್ಮವಿಲ್ಲ ನಿನ್ನ ಕಿಂಕರನನ್ನು ಸೇರಿಸಿ
ಪಾಲಿಸಿ ||ನಾರಾ|| 1
ಅಷ್ಟಯೋನಿಗಳಲ್ಲಿ ಹುಟ್ಟಿಸಾಯುತ ಬಲು
ಮೊರೆಯಿಟ್ಟು ಬೇಡಲಿ
ಎಳ್ಳಿನಷ್ಟು ಕಾರುಣ್ಯವು ಪುಟ್ಟದೇನೋ
ಸೃಷ್ಟಿಗೈಯುವೇ ಪುಷ್ಠಿಗೈಯುವೆ ಕಟ್ಟಕಡೆಯೊಳು ನಷ್ಟಪಡಿಸುವೆ
ಸೃಷ್ಟಿಯೊಳು ಜೊತೆಗಟ್ಟಿನೋಡುವ ದಿಟ್ಟರಾರೈ ವಿಷ್ಟಮೂರುತಿ2
ಧರೆಯ ರಾಜ್ಯವನೊಲ್ಲೆ ಸಿರಿಯಸಂಪದ ವೊಲ್ಲೆ
ಸುರರು ಭೋಗಿಪ ಸುರಪುರವಾನೊಲ್ಲೆ
ನಿನ್ನ ಹೊರತಾದಕೈವಲ್ಯ ಸ್ಥಿರವೊಲ್ಲೆನು
ನಾನಾ ತೆರದಿ ಭಕ್ತಿಯೊಳಿರಲಿ
ಯನ್ನಯ ಕರಣವೃತ್ತಿಯು ಪರಮ ಪುಲಿಗಿರಿ ವರದ ವಿಠಲ 3