ಎಂಥÀ ಮಗನೆ ನಿಮ್ಮ ಗೋಪಮ್ಮ ಧ್ರುವ
ನವನೀತ ಚೋರ
ಜಾರ 1
ಎಳೆವನು ಹಾದಿ ಬೀದಿ ಯೊಳಗೆ ಸೆರಗ
ಸುಳಹು ಕಂಡಾರೆಂದರೆ ತಾ ತಿರಗ 2
ಹಿಡಿದೇನೆಂದರೆ ಕೈಯೊಳು ಸಿಲುಕ
ಮಾಡಿ ಮಾಡದಿದ್ಹಾಂಗ ಇವ ಬಲು ಠಕ್ಕ 3
ಹೇಳಬೇಕಿನ್ನಾರಿಗೆ ಈ ದೂರ
ತಿಳಿದುಕೊಳ್ಳಮ್ಮ ಮಗನ ವಿಚಾರ 4
ಬಿಡ ಇವನೆಂದೂ ಪಿಡಿದವರ ಕೈಯ
ಬಿಡದೆ ಸಲಹುತಿಹ್ಯ ಮೂಢಮಹಿಪತಿಯ 5