ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವುದು ಖರೆಯೆಲೊ ಜೀವನೆ ಆವುದು ನಿಜವೆಲೊ ಪ ಆವುದು ಖರೆಯಲೋ ಜೀವ ಜಗದ ಸುಖ ಮಾಯದೆಲ್ಲನು ಭಾವಿಸಿ ನೋಡೋಅ.ಪ ಬಡತನ ನಿಜವೇನೋ ನಿನಗೀ ಕಡುಸಿರಿ ಸ್ಥಿರವೇನು ಮಡದಿ ಮಕ್ಕಳು ನಿನ್ನ ಸಂಗಡ ಕಡೆತನಕಿಹ್ಯರೇನೊ ಹೆಡತಲೆ ಮೃತ್ಯು ಬಂದು ಪಿಡಿದು ಎಳೆಯುವಾಗ ಅಡರಿಕೊಂಡು ನಿನ್ನ ಬಿಡಿಸಿಕೊಂಬುರೇನು 1 ರಾಜ್ಯ ಭಂಡಾರವೆಲ್ಲ ನಿನಗೆ ಸಹಜವಾದದ್ದಲ್ಲ ಗೋಜುಪ್ರಪಂಚ ನಿಖಿಲವಂ ದಿನಮಾಜಿಹೋಗುವುದೆಲೊ ಸೋಜಿಗವಾಗಿ ಮಿಂಚು ತೇಜದಡಗುವಂತೆ ಈ ಜಗ ಸಮಾಜ ನಿಜವಿನಿತಿಲ್ಲೆಲೊ 2 ಕತ್ತೆಯಂತೆ ಕೂಗಿ ಜನ್ಮವ್ಯರ್ಥ ಕಳೆಯಬೇಡೊ ಉತ್ತಮರಿಗೆ ಬಾಗಿ ಸತ್ಯಪಥಕೆ ಹೊಂದು ಪಾಡೊ ನಿತ್ಯ ನಿರ್ಮಲ ಸರ್ವೋತ್ತಮ ಶ್ರೀರಾಮಪಾದ ಭಕ್ತಿಯಿಂ ಪಾಡಿ ಮುಕ್ತಿಯ ಪಡೆಯೊ3
--------------
ರಾಮದಾಸರು
ಇದೇ ಪರಮಸುಖವೆಂದಿರಬೇಡಿ ಮುಂದಿನ ಗತಿ ನೋಡಿ ಪ ಒದಗಿ ಯಮನವರು ಎಳೆಯುವಾಗ ನಿಮ ಗಿದರಿಂದೇನು ಪ್ರಯೋಜನ | ಜನರೇ ಅ.ಪ ಜಿಹ್ವೋಪಸ್ಥಪರಾಯಣರಾಗುತ ಬಹ್ವಾಶನರೆನಿಸಿ ಗತಿಶೂನ್ಯರಾಗಿ 1 ದೈವಕಾಪಾಡುವುದೆನ್ನುತ 2 ಆಟಪಾಟದಲಿ ಕಾಲವ ಕಳೆಯುತ ಪೋಟಿಗಾರರಾಗಿ ಅತಿಗರ್ವದಿನೀವು 3 ಎಷ್ಟು ಜನ್ಮಗಳು ಕಳೆದುಹೋಯಿತು ಈ ಅಜ್ಞಾನದಲೀ ಶಿಷ್ಟರು ಬÉೂೀಧಿಸೆ ಉಪಹಾಸಿಸುತಲಿ ನಷ್ಟಜ್ಞಾನವುಳ್ಳತರಾಗುತ4 ಸೊಬಗಿಗೆ ಹಿಗ್ಗುತ 5
--------------
ಗುರುರಾಮವಿಠಲ
ಯಾಕೆ ಜೀವನೆ ಒಣ ಉಸಾಬರಿ ನಿನ ಗ್ಯಾಕೆ ಲೋಕದ ಸುಳ್ಳೆ ಕಿರಿ ಕಿರಿ ಪ ಪಾದ ಬಿದ್ದು ಮೊರಿ ಪರ ಲೋಕ ಪದವಿ ಸಂಪಾದಿಸಿ ಮೆರಿ ಅ.ಪ ಇಷ್ಟಬಂಧು ಸತಿಸುತರೆಲ್ಲ ನೀನು ಬಿಟ್ಟು ಹೋಗ್ವಾಗ್ಯಾರು ದಿಕ್ಕಿಲ್ಲ ಎಷ್ಟು ಸಂಪಾದಿಸಿದ ಗಳಿಕೆಲ್ಲ ನೀನು ಕಟ್ಟಿಕೊಂಡು ಸಂಗಡೊಯ್ಯೋಣಿಲ್ಲ ಕುಟ್ಟಿ ಯಮದೂತರು ಕಟ್ಟಿ ಎಳೆಯುವಾಗ ನೀ ಗಟ್ಟಿ ಮಾಡಿದ್ದು ಎಲ್ಲ ಬಟ್ಟಬೈಲೆ 1 ಯಾರು ಮೆಚ್ಚಿದರು ಫಲವಿಲ್ಲ ನಿನ ಗ್ಯಾರು ಮುನಿದರೇನು ಕೆಡುಕಿಲ್ಲ ನೀರಮೇಲಿನ ಲಿಪಿಯಂತೆಲ್ಲಜಗ ಸಾರ ಸುಳ್ಳು ಖರೆವೊಂದಿಲ್ಲ ತೋರುವ ಬಿಸಿಲಿನ ವಾರಿಯಂತೆ ಮಾಯಾ ಕಾರ ತಿಳಕೋ ತೋರುವುದೆಲ್ಲ 2 ಬಂದಿ ಇಲ್ಲಿಗೆ ಬಹಳ ಲಗುಮಾಡಿ ಮತ್ತೆ ಮುಂದೆ ಹೋಗುವುದೆಲ್ಲಿ ತಿಳಿ ಮಂದನಾಗದೆ ಚಾಚಿ ಜ್ಞಾನಕುಡಿ ಅಲ್ಲಿ ನಿಂದು ನೋಡು ನಿಜ ಹುಡುಕಾಡಿ ಇಂದಿನ ಸಮಯವು ಮುಂದೆ ಸಿಗುವುದೇನೋ ತಂದೆ ಶ್ರೀರಾಮಪಾದಕ್ಹೊಂದಿ ಮುಕ್ತಿಯ ಪಡಿ3
--------------
ರಾಮದಾಸರು
ಸಾಕು ಸಾಕು ರಂಗನಾಥ ಮನುಜ ಜನ್ಮವು ಲೋಕ ದೊಳಗೆ ಜನಿಸಲಾರೆ ಸಾಕು ಭವದಬೇಗೆಯಿನ್ನು ಬೇಕು ನಿನ್ನ ನಾಮವೊಂದೆ ಸಾಕುರಂಗ ಪಾಲಿಸೋ ಪ ಸುದತಿ ಸುತರ ಪೊರೆವುದಕ್ಕೆ ತಿರುಗಿ ಹೋಯಿತು ಸದನಕೈದಿ ಬರಲುಹಸಿದು ದಣಿದುಸ್ನಾನ ಜಪವ ತೊರೆದು ಕುಡಿದು ತಿಂದು ಒಡಲ ಹೊರೆದು ಬಿಟ್ಟುದಾಯಿತು1 ಕೊಂಡ ಭ್ರಷ್ಟ ಹಣವ ಕೊಟ್ಟು ಹೋಗು ಎಂಬುದಾಯಿತು ಕಷ್ಟ ಬೇಡವೆಂದು ಗಡುವ ಕೊಟ್ಟು ಕಳುಹಲವರ ಬಳಿಕ ಹೊಟ್ಟೆ ಹಸಿದು ನೇಮಗಳನು ಬಿಟ್ಟುದಾಯಿತು 2 ಮನೆಯ ಮಾಡಿಯಿರಲು ತಿಂದು ಅಸ್ತಿಮಾಂಸವನ್ನು ಅಂದ ಗೆಡಿಸಿತು ಹಿಂದೆ ಹಮ್ಮಿನೊಳಗೆ ತಂದು ತಿಂದುದನ್ನು ನೆನೆದು ನೆನೆದು ಮಂದನಾಗಿ ಮುಂದೆ ಗತಿಯು ಕುಂದಿಹೋಯಿತು 3 ಕಣ್ಣು ಕಾಣ ಬೆನ್ನದುಡುಗಿ ಬಣ್ಣಗೆಟ್ಟು ದಂತಬಿದ್ದು ಉಣ್ಣಲಿಕ್ಕು ಆಗದಾಗಿ ಕಿವಿಯು ಕೇಳದಾಯಿತು ತಿಣ್ಣ ಯಮನ ದೂತಬಂದು ಎನ್ನ ಕೊರಳ ಎಳೆಯುವಾಗ ಅಣ್ಣ ತಮ್ಮದಿರರು ಬೆನ್ನ ಬರುವರಿಲ್ಲವೋ 4 ಮುಪ್ಪು ಹರಯ ಬಾಲಕತ್ವ ಒಪ್ಪದಿಂದ ಮರಳಿಮರಳಿ ಬಪ್ಪ ಭವದ ಶರಧಿಗೊಂದು ತೆಪ್ಪವಿದ್ದಿತು ಅಲ್ಪಹೊತ್ತು ಆದರೇನು ಚಿಪ್ಪಳಿಯ ಗೋಪಿವರನ ಸ್ವಲ್ಪಮಾತ್ರ ಭಜಿಸೆ ಜನ್ಮ ತಪ್ಪಲಾಯಿತು 5
--------------
ಕವಿ ಪರಮದೇವದಾಸರು