ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸಕೇಳಲೈ ಸರಸಿಯೊಳಗೆ ತಾ ಸರಸವಾಡುತಾ ಕರಿವರನಿರೆÉ ಪರಮ ಭೀಕರ ಪ್ರಬಲ ನಕ್ರವು ಕರಿಯ ಕಾಲನು ಪಿಡಿದು ಸೆಳೆಯಿತು 1 ಚಕಿತನಾಗುತ ಚತುರ ದ್ವಿಪವರ ಮಕರಿ ವದನದಿಂ ಮುಕ್ತನಾಗಲು ಸಕಲ ಸಾಹಸಗೈದನಕ್ಕಟ ವಿಕಲವಾಯಿತಾ ಯತ್ನವೆಲ್ಲವು 2 ನಕ್ರ ಸೆಳೆತವು ಪ್ರಬಲವಾಗಲು ದಿಕ್ಕು ತೋರದೆ ಕೂಗಿಕೊಂಡನು ಮಿಕ್ಕ ಗಜಗಳು ಕೂಡಿ ಬಿಡಿಸಲು ಶಕ್ತಿಮೀರಿ ಸಾಹಸಗೈದುವು 3 ಆನೆಗಳು ಒಂದೆಡೆ ಎಳೆಯಲು ನೆಗಳು ಒಂದೆಡೆ ಎಳೆಯಲು ಏನನೆಂಬೆ ಹೋರಾಟವೀ ಪರಿ ಏನು ನಡೆದರೂ ವಿಫಲವಾಯಿತು 4 ಹಿಂಡು ಬಳಗಗಳೆಲ್ಲ ನೋಡುತ ದಂಡೆ ಮೇಲೆ ತಾವ್ ನಿಂತುಬಿಟ್ಟವು ಜೊಂಡು ಹುಲ್ಲು ತಾ ಪಿಡಿದು ತನ್ನಯ ಶುಂಡಾಲ ಗೆದ್ದನು 5 ನಕ್ರಬಾಧೆಯು ಬಿಡಿಸಲಾರಿಗೂ ಶಕ್ಯವಾಗದೆ ಹೋಯಿತಕ್ಕಟ ದಿಕ್ಕುಗೆಟ್ಟು ತಾ ದೈನ್ಯದಿಂದಲೇ ದುಃಖಪಡುತ ಭೋರಿಟ್ಟು ಕೂಗಿದ 6 ಉದಿಸಿತಾಗ ಸುಜ್ಞಾನವವನೊಳು ಸುದತಿ ಮಕ್ಕಳು ಸಲಹರೆಂಬುದು ಬದಲು ಬಯಸದ ಬಂಧು ಕರಿಗಿರಿ ಸದನನೆಂದು ತಾನಂಬಿ ನೆನೆದನು 7
--------------
ವರಾವಾಣಿರಾಮರಾಯದಾಸರು
ಎಂದು ನಿನ್ನ ದಯವು ಆಗೋದೋ ಇಂದಿರೇಶ ದುರಿತ ಹಿಂದಕ್ಕ್ಹೋಗೋದೊ ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು ಕರೆಯೆ ಕಂಬದಿ ಬಂದು ನರ- ಹರಿಯ ನಾಮ ಕಾಯ್ತು ಅವನ 1 ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ ಕಂತುನಯ್ಯ ನಿನ್ನ ನಾಮ ಎಂಥಗತಿಯ ಕೊಟ್ಟಿತವಗೆ2 ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ ಪುತ್ರನಿಂದ ರಹಿತನಾಗಲು ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ ಮೆಚ್ಚಿಕೊಟ್ಟ ನಮ್ಮ ಸ್ವಾಮಿ ಹೆಚ್ಚಿನ ಲೋಕ ಪದವಿ ಧ್ರುವಗೆ 3 ಬಂದು ಭರದಿ ಮಡುವ ಕಲಕುವೋ ಮದಡಗಜವ ಕಂಡು ಮಕರಿ ಕಾಲು ಹಿಡಿಯಲು ಬಂಧುಗಳಿಂದ ರಹಿತವಾಗಿ ಒಂದು ಸಾವಿರ್ವರುಷ ಬಾಳಲು ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4 ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ ಪಟ್ಟದ ರಾಣಿ ಸಭೆಗೆ ಎಳೆಯಲು ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ- ಕೃಷ್ಣನ ಮುಟ್ಟಿ ಭಜಿಸೆ ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
--------------
ಹರಪನಹಳ್ಳಿಭೀಮವ್ವ
ಗುರು ಎಂಥಾ ಗಾರುಡಿಗಗುರುವಿನ ನಂಬಿ ಗುಣವೆಲ್ಲ ಕಳಕೊಂಡೆ ಪ ಶರಣು ಮಾಡೆಂದರೆ ಶರಣು ಮಾಡುತ್ತಲಿರ್ದೆಕರದಲ್ಲಿ ಏನಿತ್ತೋ ಜವೆಯ ಬೂದಿಶಿರದ ಮೇಲೆನ್ನ ಮೈಮೇಲೆ ಎಳೆಯಲು ಶರೀರವಮರೆತೆನೆ ಇದಕೆ ಸಾಕ್ಷಿಯಾದನೆ ಗುರು 1 ಆರು ಇಲ್ಲದುದ ನೋಡಿ ಬೇರೆನ್ನ ಕರೆದೊಯ್ದುಮೋರೆಯನು ಕಿವಿಯೊಳಗಿಟ್ಟು ಮಂತ್ರಿಸಿದನಾರಿ ಬದುಕು ಮನಮಕ್ಕಳನೆಲ್ಲವಸೇರಿ ಸೇರದಂತೆ ಮಾಡಿದನೆ ಗುರು2 ಭವಗೇಡಿ ಕುಲಗೇಡಿ ಸಂಗಗೇಡಿಯಾದೆಇವನ ವಿಶ್ವಾಸದ ಫಲದಲಿಂದಇವನ ಮೇಲೆ ಎನ್ನ ವ್ಯಾಕುಲ ಹತ್ತಿದೆವ್ಯವಹಾರವೆಂಬುದು ಎಡವಟ್ಟಾಯಿತು3 ಮಂತ್ರಿಸಿದ ಕ್ರಿಯೆ ಮರಳಲೀಯದೆ ಎನ್ನಮಂತ್ರ ತಂತ್ರಕ್ಕದು ಬಗ್ಗಲಿಲ್ಲಮಂತ್ರದ ಮಹಿಮೆಯು ಮಹಾಮಹಿಮೆಯುಮಾಂತ್ರಿಕರೊಳಗೆ ದೊಡ್ಡವನಹುದೋ ಗುರು 4 ಇವನ ನಂಬಿದ ಮೇಲೆ ಇವನಂತಲ್ಲದೆಭುವನಕ್ಕೆ ತಿರುಗಿ ತಾ ತಾರೆನೆವಿವರಿಸೆ ಹುರುಳಿಲ್ಲ ಹೇಳಿ ಕೇಳೋದೇನುಭುವನ ರಕ್ಷಕ ಚಿದಾನಂದನೆ ಗುರು 5
--------------
ಚಿದಾನಂದ ಅವಧೂತರು