ಶಿವಮಂತ್ರವ ಜಪಿಸೋ ಮೂಢಶಿವಮಂತ್ರವ ಜಪಿಸೋಶಿವನೇ ನೀನಾಗುವೆಯೆಂದು ನಂಬುತ ಪ
ಸ್ನಾನ ಬೇಡ ಸಂಧ್ಯಾಕರ್ಮವು ಬೇಡಧ್ಯಾನ ಬೇಡ ಧಾರಣೆ ಬೇಡಮೌನ ಬೇಡ ಮಣಿಮಾಲಿಕೆ ಬೇಡಧ್ಯಾನ ಬೇಡ ಪಶುವಧೆಗಳು ಬೇಡ 1
ದೇಶಕಾಲ ಪಾತ್ರವ ನೋಡಬೇಡಕಾಷಾಯಾಂಬರ ಧಾರಣೆ ಬೇಡಭಾಸುರ ಜಡೆಯನು ಬೆಳೆಸಲು ಬೇಡಈ ಶರೀರವನೆ ದಂಡಿಸಬೇಡ 2
ಕಾಲನ ದೂತರು ಎಳೆಯದ ಮುನ್ನನಾಲಿಗೆ ತನ್ನಾಧೀನವಾಗಿರುವಾಗಏಳುಕೋಟೆ ಮಂತ್ರಕೆ ಮಣಿಯಾದ ವಿ-ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು 3