ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರ ತರುವಿರೇನೆ ಕೃಷ್ಣನ ಮೇಲೆ ಪ ದೂರ ತರುವಿರೇನೆ ಚೋರಾಗ್ರೇಸರನೆಂದು ಕ್ಷೀರ ತಕ್ರಗಳನ್ನು ಸೂರೆ ಮಾಡಿದನೆಂದು ಅ.ಪ ನೊರೆಹಾಲ ಕುಡಿಬಾ ದೊರೆ ಬಾರೋ ಬಾ ಎಂದು ಕರದಿಂದಲೆತ್ತಿ ಮುತ್ತಿಟ್ಟೆಯಂತೆ ಬಿರುಗಾಳಿ ಬಂತೆಂದು ಬಿಗಿದಪ್ಪಿ ಕೊರಳಿಂಗೆ ಕೊರಳಿಟ್ಟು ಬರಿಗೈಯ ತೋರಿದೆಯಂತೆ 1 ಹಸಿದೆ ಬಾ ಕಂದ ಮೊಸರ ಕುಡಿಯೆಂದು ಹುಸಿನಗೆಯ ಬೀರಿ ಕೈಹಿಡಿದರವಳು ಉಸಿರಾಡದಂತೆ ಅಧರಕಧರವನ್ನಿಟ್ಟು ಹಸಿವಾರಿತಿನ್ನು ನೀ ಹೋಗೆಂದಳಂತೆ 2 ಮಲ್ಲಿಗೆ ಹಾಸಿನಲ್ಲಿ ಮಲಗು ಬಾರೆನ್ನುತ ಬೆಲ್ಲ ತುಪ್ಪವ ನೀ ತಿನ್ನಿಸಿದೆಯಂತೆ ಹಲ್ಲ ತೋರಿಸು ಹೊಂಬೆಳಕ ನೋಡುವೆನೆಂದು ಮೆಲ್ಲನೆ ಬಾಗಿ ಬಾಗಿ ಗಲ್ಲವ ಕಚ್ಚಿದೆಯಂತೆ 3 ಬೆಣ್ಣೆಗಳ್ಳನು ಎಂದು ಹಿಂದೋಡಿ ಓಡಿ ಬಂದು ಸಣ್ಣ ತೋಳನು ಹಿಡಿದು ಎಳೆದಾಡಲವಳು ಕಣ್ಣಿನಲಿ ಕಣ್ಣಿಟ್ಟು ದೃಷ್ಟಿ ದೋಷವ ಬೀರೆ ಚಿಣ್ಣ ಮಾಂಗಿರಿರಂಗ ಕಣ್ಣಬಿಡಲೊಲ್ಲ ನೋಡೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್