ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಭೋಜನ ಮಾಡೈಯ ಶ್ರೀರಾಮಚಂದ್ರ ಪ ರಾಜೀವಾನಯನ ಸ್ವರಾಜಾನುಜ ಮಹಾ ರಾಜ ವಂದಿತ ರಾಜಾರಾಜ ಸಖಾರ್ಚಿತ ಅ.ಪ ಉಪ್ಪು ಉಪ್ಪಿನಕಾಯಿ ಪಚ್ಚಡಿಗಳು ಗೊಜ್ಜು ಹಪ್ಪಳ ಸಂಡಿಗೆ ಶಾಖಗಳೂ ಒಪ್ಪುವ ರಸ ಕೂಟು ಹುಳಿ ಫಳಿದ್ಯವು ಸೂಪ ತುಪ್ಪ ಶಾಲ್ಯೋದನ ಚಿತ್ರಾನ್ನಗಳನ್ನು 1 ಹೊರೀಗೆ ಶಷ್ಕುಲಿ ಹೋಳಿಗೆ ಕಡುಬು ಮು- ಚ್ಚೋರೆಯು ಅತಿರಸ ಹೊಯಗಡಬೂ ಕೀರುಆಂಬೊಡೆ ಬೋಂಡ ಶಾವೀಗೆ ಹುಳಿದೋಸೆ ಕ್ಷೀರ ಶರ್ಕರ ಜೇನು ತುಪ್ಪವೆ ಮೊದಲಾಗಿ2 ಮಂಡೀಗೆ ಲಾಡು ಚಿರೋಟಿ ಘೀವರು ಪೇಣಿ ಬೆಂಡು ಸೋಮಾಶಿಬತ್ತಾಸು ಫೇಡಾ ಖಂಡ ಶರ್ಖರೆ ಕಬ್ಬು ಖರ್ಜೂರ ದ್ರಾಕ್ಷಿಗ- ಳುಂಡು ತ್ರಿಲೋಕಳುದ್ಧರಿಸುವ ಸ್ವಾಮಿ 3 ಪನಸು ಜಂಬೂ ಕದಳಿನಾರಂಗ ಎಳನೀರು ಪಾನಕ ತಕ್ರಬೆಣ್ಣೆಯು ಮೊಸರೂ ಸ್ವಾದೋದಕ ಮೊದಲಾಗಿ ಶ್ರೀ ಯರ್ಪಿಸುವಳು ಭಕ್ತಿಯಿಂದಾ ಕೈಕೊಂಡು ನೀ 4 ಸತ್ಯತಾಂಬೂಲ ವರ್ಪಿಸಲು ಯಥಾಶಕ್ತಿ ವಿತ್ತಸಮೇತವಾದಿದನು ಕೈಕೊಂಡು ನೀ 5 ಭೋಗದ್ರವ್ಯವು ಮುಕ್ತಚೂರ್ಣ ದಕ್ಷಿಣೆ ಸಹ ಈಗ ತಾಂಬೂಲ ವೊಪ್ಪಿಸಲು ಕೈಕೊಂಡು ನೀ6 ನವ್ಯ ಸುಗಂಧ ಪುನರ್ಧೂಪವರ್ಪಿಸಿ ಸೇವ್ಯಸೇವಕನಾಗಿ ಸೇವೆ ಕೈಕೊಳ್ಳೆಂದು ಭವ್ಯಚರಿತ ನಿನ್ನ ಪೊಗಳುತ್ತ ಕುಣಿವರು 7 ಅವ್ಯಯಾನಂತ ಜಗದ ಬದುಕು ನೀನೆಂದು ಸೇವ್ಯಸೇವಕನಾಗಿರುವೆ ಎಂದು ಭವ್ಯಚರಿತ್ರರು ಪೊಗಳುವರೈ ನಿನ್ನ ಸವ್ಯಸಾಚಿಯ ಸೂತ ಗುರುರಾಮ ವಿಠಲನೆ 8
--------------
ಗುರುರಾಮವಿಠಲ
ಸರ್ಪಭೂಷಣನ ಸುತನ ಭಕ್ತಿಯಿಂದ ಬಲಗೊಂಡು ಮತ್ತೆ ಅಜನಸತಿಯ ಪಾದಕ್ಕೆ ಎರಗುವೆ 1 ಎಲ್ಲ ದೇವತೆಗಳಿಗೆ ಎರಗಿ ಭಕ್ತಿಯಿಂದ ಲಕ್ಷ್ಮೀ- ವಲ್ಲಭನ ಕತೆಗಳ ವರ್ಣಿಸುವೆನು 2 ಸ್ವಾಮಿ ಶ್ರೀಕೃಷ್ಣನ ಪ್ರೇಮವನ್ನು ಪಡೆದ ಸು- ದಾಮನೆಂಬೊ ಭಕ್ತ ಬಡವ ಬ್ರಾಹ್ಮಣಿದ್ದನು 3 ಸ್ನಾನ ಹೋಮ ಜಪವಮಾಡಿ ನೇಮ ನಿಷ್ಠೆಲಿಂದ ಉಪ್ಪು ಕಾಲ ಕಳೆಯುತಿದ್ದನು 4 ಅಶನವಿಲ್ಲ ವಸನವಿಲ್ಲ ಹಸಿದ ಮಕ್ಕಳನ್ನು ನೋಡಿ ವ್ಯಸನದಿಂದ ಪತಿಯ ಪಾದಕ್ಕೆರಗಿ ನಿಂತಳು 5 ತಂದೆ ತಾಯಿಗಳ ಕಡೆಯ ಬಂಧು ಬಳಗ ಯಾರು ಹತ್ತಿ ದ್ಹೊಂದಿದವರುಯಿಲ್ಲೆ ನಿಮಗೆ ಎಂದು ನುಡಿದಳು 6 ಪತ್ನಿ ಮಾತು ಕೇಳಿ ಪರಮ ಭಕ್ತಿಯಿಂದ ನುಡಿದ ಧ- ರ್ಮಾರ್ಥ ಕಾಮ್ಯಗಳನೆ ಕೊಡುವೋ ಮೋಕ್ಷದಾಯಕ 7 ಆದಿಮೂರುತಿ ಕೃಷ್ಣ ಓದಿಕೊಂಡ ಗೆಳೆಯನೊಬ್ಬ ಮಾಧವನ ಬಿಟ್ಟು ಮತ್ತೊಬ್ಬರಿಲ್ಲವು8 ಆತನ ಕಂಡು ಬಂದರ್ಯಾತರ ದಾರಿದ್ರ್ಯ ನಮಗೆ ಪ್ರೀತಿಯಿಂದ ಹೋಗಿಬನ್ನಿರೆಂದು ನುಡಿದಳು 9 ವರಮಾಲಕ್ಷ್ಮಿ ಅರಸು ಕೃಷ್ಣನರಮನೆಗೆ ಪೋಗಲಿಕ್ಕೆ ನ- ದರ ಏನುವೊಯ್ಲೆ ನರಹರಿಗೆ ಎಂದನು 10 ಲಕ್ಕುಮೀಶನ್ನ ದರ್ಶನಕ್ಕೆ ಒಯ್ಯಲಿಕ್ಕೆ ಮೂರು ಮುಕ್ಕು ಅವಲಕ್ಕಿ ತಿರಿದು ತಂದುಕೊಟ್ಟಳು 11 ಅದನು ಗಂಟು ಕಟ್ಟಿ ತನ್ನ ಹೆಗಲಮ್ಯಾಲೆ ಇಟ್ಟುಕೊಂಡು ನ- ಗಧರನ್ನ ನಗರಕ್ಕಾಗ ಬರುತಲಿದ್ದನು 12 ಲಕ್ಷಣಾದ ಶಕುನವ ಆ ಕ್ಷಣದಿ ಕಂಡು ವಿಪ್ರ ಲಕ್ಷ್ಮೀಪತಿಯ ದಯವು ನಮಗೆ ಆಗೋದೆಂದನು 13 ಹಾದಿಲ್ಹರಿವೊ ಜಲವ ಕಂಡು ಸ್ನಾನವನ್ನು ಮಾಡಿಕೊಂಡು ವೇದ ಪುಸ್ತಕವ ಹಿಡಿದು ಓದಿಕೊಳುತಲಿ 14 ಮಲ್ಲೆ ಮಲ್ಲಿಗೆ ದವನ ಅಲ್ಲೆಯಿದ್ದ ಫಲಗಳು ಲಕ್ಷ್ಮೀ- ವಲ್ಲಭಗೆ ಅರ್ಪಿತವೆಂದು ನಡೆದನು 15 ಗೋಪುರವ ಕಂಡು ದ್ವಾರಕಾಪುರಕ್ಕೆ ಕೈಯಮುಗಿದು ಶ್ರೀಪತಿಯ ಬಾಗಿಲಲಿ ಬಂದು ನಿಂತನು 16 ದ್ವಾರದಲ್ಲಿ ನಿಂತವರು ದಾರುಯೆಂದ್ವಿಚಾರಿಸಲು ನಾರಾಯಣನ ಸಖನು ನಾನೆಂದ್ಹೇಳುತಿದ್ದನು 17 ನುಡಿದ ನುಡಿಯ ಕೇಳುತ ನಡೆದು ಬಂದು ಚಾರಕರು ಒಡೆಯ ನಿಮ್ಮ ಗೆಳೆಯನಂತೆ ಬಡವ ಬ್ರಾಹ್ಮಣ 18 ಹುಟ್ಟ ಮೊದಲೆ ಅನ್ನ ತನ್ನ ಹೊಟ್ಟೆಗುಂಡ ಮನುಜನಲ್ಲ ಗಟ್ಟಿಗಾಳಿ ಬರಲೀಗ್ಹಾರುವಂತೆ ತೋರುವ 19 ಅಸ್ಥಿ ಚರ್ಮ ಆತನಂಗಕ್ಹತ್ತಿಕೊಂಡ ಹೊಟ್ಟೆಬೆನ್ನು ಮತ್ತೆ ನಡೆಯಲಾರ ಮಾತನಾಡಲಾರನು 20 ಒಡೆದ ಗುಂಡುತಂಬಿಗೆ ಬಡಿದನದರ ಸುತ್ತ ಮ್ಯಾಣ ಹಿಡಿದ ಗಂಟ ಬಿಡದಲ್ಹೊತ್ತು ನಡೆದು ಬಂದನು 21 ಮರದ ಗುಂಡು ಸರದಗುದ್ದಿ ಕೊರಳೊಳಗೆ ಹಾಕಿಕೊಂಡು ಎರಳೆ ಚರ್ಮ ಸುತ್ತಿ ಎಡದ ಬಗಲಲ್ಲಿಟ್ಟನು22 ದೊಡ್ಡನಾಮ ಹಚ್ಚಿಕೊಂಡು ಮುದ್ರೆಮಯ್ಯಲೊತ್ತಿಕೊಂಡು ಶುದ್ಧ ಚಂದ್ರಮನ ಕಾಂತಿ ತೋರುತಿದ್ದನು 23 ಛಿದ್ರವಾದ ಬಟ್ಟೆನುಟ್ಟು ಚಿಗುರು ತುಳಸಿ ಕಿವಿಯಲ್ಲಿಟ್ಟು ಪದ್ಮನಾಭ ಪಾಲಿಸೆನುತ ಕೂಗುತಿದ್ದನು24 ನಾಮಾಂಕಿತÀವ ಕೇಳಲು ಸುದಾಮನೆಂದು ಹೇಳುವ ನಾನಾ ಪರಿಯಲ್ನಿಮ್ಮ ಸ್ತುತಿಯ ಮಾಡುತಿದ್ದನು 25 ಅಪ್ಪುಣಾದರಾತನ ಇತ್ತ ಕರೆದು ತಾವೆನೆನಲು ಭಕ್ತರೊಡೆಯ ಭಾಳ ಸಂಭ್ರಮದಿ ಎದ್ದನು 26 ಕರವ ಪಿಡಿದು ಕುಳ್ಳಿರಿಸಿ ದಿವ್ಯಾಸನದ ಮ್ಯಾಲೆ ತರಿಸಿ ಚಾಮರದ ಗಾಳಿ ಹಾಕುತಿದ್ದನು 27 ಪನ್ನೀರು ತಂದು ಪಾದತೊಳೆದು ದ್ರಾಕ್ಷಿ ಕಿತ್ತಳೆ- ಹಣ್ಣು ಎಳನೀರು ತಂದು ಮೆಲಲು ಕೊಟ್ಟನು 28 ಮದುವೆ ಆಯಿತೇನೊ ಸಖನೆ ಎಂದು ಕೇಳಿದ 29 ಸೋಳಸಾವಿರ ಸತಿಯರಾಳುವೊ ಶ್ರೀರಮಣ ಕೇಳೊ ರಾಣಿವೊಬ್ಬಳಿರುವೊಳಯ್ಯ ನಮಗೆಯೆಂದನು 30 ಇಷ್ಟುದಿವಸ ಇಲ್ಲಿಗೆ ಬಾರದಿದ್ದ ಕಾರಣೇನು ಚಿಕ್ಕಂದಿನ ಸ್ನೇಹವೆಲ್ಲ ಮರೆತ್ಯ ಎಂದನು 31 ಬರದಲಿದ್ದೆ ನಾನು ಪಾಮರನೂ ಆದಕಾರಣ ಕಳುಹಿಕೊಟ್ಟಳೆನ್ನ ಭಾರ್ಯಳೀಗ ಎಂದನು 32 ಅಣ್ಣ ನಮ್ಮತ್ತಿಗೆ ನಮಗೇನು ಕಳಿಸಿದಳು ನಿನ್ನ ಹೆಗಲ ಗಂಟು ಬಿಚ್ಚಿ ತೋರಿಸೆಂದನು 33 ವಿಪ್ರ ನಾಚಿ ನೆಲನ ನೋಡುತಿರಲು ಕೃಷ್ಣ ಸಲಿಗೆಲಿಂದ ಗಂಟನೆಳೆದು ಬಿಚ್ಚಿಸಿದನು 34 ಸುಜನ ಜನರು ಮಾಡುವಂಥ ಭಜನೆಯೊಂದೆ ಸಾಕುಯೆನೆಗೆ ಹೇಮ ರತ್ನಾಭರಣವ್ಯಾತಕೆಂದನು 35 ಕುಂದಣದ ಪಾತ್ರೆಯೊಳಗೆ ತಂದು ಸುರುವೆ ಪ್ರತಕವನ್ನು ಮಂದರೋದ್ಧರನು ಮುಷ್ಟಿ ತೆಗೆದುಕೊಂಡನು36 ಮುಷ್ಟ್ಟಿಗೊಂದು ಬಾರಿ ಶ್ರೀಕೃಷ್ಣ ತೆಗೆದು ಮೆಲ್ಲುತಿರಲು ಕಷ್ಟ ದಾರಿದ್ರ್ಯವೆಲ್ಲ ಹರಿದು ಹೋಯಿತು 37 ಎರಡನೇ ಮುಷ್ಟಿ ಪಾಲ್ಗಡಲಶಯನ ಮುಕ್ಕುತಿರಲು ಸಡ- ಸಡಗರ ವೈಕುಂಠಪದವಿ ಮುಕ್ತಿ ಆಯಿತು 38 ಮೂರನೇ ಮುಷ್ಟಿಗೆ ನಾರಿ ರುಕ್ಮಿಣಿ ಬಂದು ಕೃಷ್ಣಯೇನು ಕೊಡುವಿ ಕರವ ಪಿಡಿದಳು 39 ಭಾವನವರು ತಂದುಕೊಟ್ಟ ದೂರದ ಪದಾರ್ಥವನ್ನು ನೀವೆ ಸವಿಯ ನೋಡುವೋದು ದಾವ ನೀತಿಯು40 ಅಕ್ಕ ಕಳಿಸಿದ್ದು ಅವಲಕ್ಕಿ ನಮಗಿಲ್ಲದ್ಹಾಗೆ ಮುಕ್ಕಿ ಬಿಡುವರೇನೊ ಎಂದು ನÀಕ್ಕಳಾಗಲೆ41 ಇಷ್ಟು ಮಂದಿಯೊಳಗೆ ಎನ್ನ ಮುಷ್ಟಿ ಹಿಡಿದು ನಿಲ್ಲುವಂಥ ದಿಟ್ಟತನಗಳೆಲ್ಲ್ಲಿ ಕಲಿತೆ ಹೇಳೆಯೆಂದನು 42 ಚಿಕ್ಕ ಸತ್ಯಭಾಮೆ ನೋಡಿ ನಕ್ಕಾಳೆಂಬೊ ನಾಚಿಕಿಲ್ಲ ಮುಕ್ಕು ಅವಲಕ್ಕಿಗೆನ್ನ ಕÀರವ ಪಿಡಿವೋರೆ 43 ಸರ್ವರೊಳಗೆ ಅಧಿಕಳೆಂಬೊ ಗರುವಿನ ರುಕ್ಮಿಣಿಗೆ ಬುದ್ಧಿ ಕರೆದು ಹೇಳಬಾರೆ ಸತ್ಯಭಾಮೆಯೆಂದನು 44 ಎನ್ನ ಭಕ್ತರಲ್ಲಿ ಪ್ರೇಮ ನಿನಗೆ ಉಂಟಾದರೆ ಇನ್ನೂ ಒಂದು ಮುಕ್ಕು ನಿನಗೆ ಕೊಡುವೆನೆಂದನು45 ಅಕ್ಕಗಾಡೋ ಮಾತಕೇಳಿ ಚಿಕ್ಕ ಸತ್ಯಭಾಮೆ ತಾನು ಅಕ್ಕರದಿ ಬಂದು ಕೃಷ್ಣನೆದುರು ನಿಂತಳು 46 ರಂಗ ನಿನ್ನ ಪಟ್ಟದರ್ಧಾಂಗಿಯಾದ ರುಕ್ಮಿಣಿಗೆ ಮುಂಗೈ ಹಿಡಿವೋದಕ್ಕೆ ದಾರಭಯವೇನೆಂದಳು47 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ಹಸಿದು ನಾ ಬಳಲಲೇಕೋ ಈಸಮಯದಲ್ಲಿ ಬಿಸಿಯೂಟ ಮಾಡುವೆನು ಪ ಹಸನಾದ ಶೇಷಶಯನ ನಾಮದಡುಗೆಯು ವಸುಮತೀಧವ ನಾಮರಸಾಯನವಿರೆ ಅ.ಪ ಹರಿ ಹರಿ ಪರಮಾನ್ನವು ದುರಿತಾರಿ ಶೌರಿ ಕರಿಗಡುಬು ಗರುಗೊಬ್ಬಟ್ಟು ನರಸಿಂಹ ವಾಮನ ಅಂಬೊಡೆ ಹೂರಿಗೆಗಳು ಕರಿವರದ ರವೆಯುಂಡೆ ಸಜ್ಜಿಗೆಯಿರಲು 1 ದುಷ್ಟಮರ್ದನನೆನ್ನುವ ಇಷ್ಟವಾದ ಹುಳಿಸಾರು ಮೊಸರುಗಳು ವಾಸುದೇವ ಸಣ್ಣಕ್ಕಿಯನ್ನವು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2 ನಾರಾಯಣನೆನ್ನುವ ಸಾರವಾದ ಹುಳಿಯನ್ನ ಮೊಸರನ್ನವು ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3 ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ ಕರಿದೆಡೆ ಮಾಡಿರಲು ಅರಿತು ಸವಿಯನೋಡಿ ಮರೆಯದೆ ಭುಂಜಿಸಿ ನಿರುತ ನಿಜಾನಂದ ಪಡೆಯದೆ ಬರಿದೆ 4 ಗೋಪಾಲನೆಂದೆಂಬೊ ಸೀಪಿನ ಎಳನೀರು ಸೀ ಪಾನಕವಿಹುವು ತಾಪತ್ರಯಹರ ಹೆಜ್ಜಾಜಿಕೇಶವ ಆಪದುದ್ಧಾರಕನೆಂಬಮೃತವುಣದೆ 5
--------------
ಶಾಮಶರ್ಮರು