ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನೆ ಹರಿಯ ದೂಷಿಸದಿರು ಯಮ- ಧರ್ಮನಾಳ್ಗಳು ನಿನ್ನ ಎಳದೊಯ್ವರೊ ಪ ಇಷ್ಟೂನು ವಿಷ್ಣು ಮಾಯವು ಎಂದು ಈ ಸೃಷ್ಟಿ ಕರ್ತನು ಶ್ರೀಹರಿ ಎಂದು ಸ್ಪಷ್ಟದಿ ಮನದಲ್ಲಿ ತಿಳಿಯದೆ ದುರುಳ ಮಾತನಾಡಬಹುದೆ 1 ಲೋಕನಾಯಕ ಲಕ್ಷ್ಮೀಲೋಲನಾ ಜಗದೇಕ ವಿನುತರಾಮ ದೇವರನಾ ಶ್ರೀ ಕರುಣಾಂಬುದಿ ಶಾಂತನಾ ಇನ್ನು ನೀ ಕಾಣದೆ ಈ ಪರಿನಿಂದೆಯೆನೆ 2 ಹರಿಶರಣರ ಕೊಂಡಾಡುತಿರು ಘೋರ ನರಕದೊಳಗೆ ಬಿದ್ದು ನರಳದಿರು ಪರಮಭಕ್ತರ ಬಾಯಿಲೆ ಬೊಗಳದಿರು ಅತಿ ಪಾಪಿಯಾಗಿರುವರ ಸೇರಿ ಹೋಗದಿರು 3 ಶೃತಿ ಶಾಸ್ತ್ರಗಳು ಸುಜ್ಜನ-------- ಇಂಥ ಕೃತಕ ಶಾಸ್ತ್ರಗಳ ನೋಡಿ ಕೂಗಬೇಡಾ ಸದ್ಗತಿ ಮಾರ್ಗಕೆ ಹೊರಗಾಗ ಬೇಡಾ 4 ಹರಬ್ರಹ್ಮ ಇಂದ್ರಾದಿಗಳೆಲ್ಲ ಶ್ರೀಹರಿಯ ಸೇವಕರೆಂಬುದು ಬಲ್ಲ 'ವರಹೆನ್ನ ವಿಠ್ಠಲನ ’ ನೀನೆ ಬಲ್ಲ ಅವರ ಚರಣಕ್ಕೆ ಎರಗುವದು ಅಲ್ಲಾ 5
--------------
ಹೆನ್ನೆರಂಗದಾಸರು