ಮುಳಿಯ ಬೇಡಿರಿ ಎನ್ನಪ್ಪಗಳಿರೆ ಕೇಳಿ ಪ.
ಎಳದಂಗೆ ನುಡಿದುದನು ಹಳಿವಿರೇ ಪೇಳೀ ಅ.ಪ.
ಶೃತಿ ಸ್ಮøತಿ ಪುರಾಣ ಇತಿಹಾಸ ಶಾಸ್ತ್ರಗಳ ಗತಿಮಿತಿ ತತ್ವಮದೊಂದನರಿಯೆ
ಅತಿಶಯಿತ ಪಾಂಡಿತ್ಯ ಪ್ರಭೆಯಿಂ ರಾಜಿಪರಲ್ಲಿ
ಕ್ಷಿತಿನಾಥನಾಡಿಸಿದ ಪರಿಯಿದೆಂದೆನುವೆ ವಿನಯದಲಿ 1
ಅಪ್ಪಗಳಿರೆ ನಿಮ್ಮಡಿಯೊಳೊಪ್ಪಿಸಿರುವೀ ಕೃತಿಯ
ತಪ್ಪೊಪ್ಪುಗಳ ಸಲೆ ನೋಡಿ ನಲವಿಂ
ತಪ್ಪುಳ್ಳೊಡದನೊಪ್ಪದಿಂಸಾವರಿಸಿ ಮುಂ
ದೊಪ್ಪುತಿಹ ಜಸವನಪ್ಪುಗೊಳ್ಳಿರಿ ದಿಟದಿಂ2
ಕಕ್ಕುಲತೆಯುಳ್ಳೆನ್ನ ಅಕ್ಕತಂಗಿಯರಿಗಿದನು
ಅಕ್ಕರತೆಯಿಂದೊಪ್ಪಿಸಿಹೆನೆಂದರಿಯಿರಿನ್ನು
ಕಕ್ಕಸದಿ ನೋಡದಿರಿ ಧಿಕ್ಕರಿಸಿ ನುಡಿಯದಿರಿ
ಚಿಕ್ಕಮಕ್ಕಳ ನೋಡಿ ತಕ್ಕೈಸಿ ನುಡಿಗಲಿಸಿರಿ
ಸುಕೃತಕೆ ಸಾಕ್ಷಿಯೆಂಬೆ ಸಾರಿ] 3