ತತ್ವಚಿಂತನೆ
ಅತಿಭಯಪುಟ್ಟುವುದಡವಿಯ ನೋಡಲ್ ಪ
ಮತಿ ಮಂದವಾಗಿಯೆ ಮಾರ್ಗತಪ್ಪುವುದು ಅ.ಪ
ಹುಲಿಸಿಂಹಶಾರ್ದೂಲ ಗಂಡಭೇರುಂಡ
ಬಲುದುಪ್ಪೆ ಆನೆ ಕಾಡ್ಗೋಣದ ತಂಡ 1
ಝಿಲ್ಲಿಕದಿಂದೆದೆ ತಲ್ಲಣಿಸುವದು
ಎಲ್ಲೆಲ್ಲಿಗಿಡಮರ ಮುಳ್ಳುಕಲ್ಲುಗಳು 2
ನಿಲ್ಲಗೊಡದ ದುಷ್ಟಕೀಟಕ ವೃಂದ 3
ಸಂಸಾರಟವಿಯನ್ನು ಸೇರಿ ನಾ ಕೆಟ್ಟೆ
ಬಟ್ಟೆ 4
ದೇಹ ಸಂಬಂಧ ಮೋಹ ಕಾಡ್ಗಿಚ್ಚು
ದಾಹಗೊಳಿಸಿ ಕೊಲ್ಲುತಿರುವುದು ಹೆಚ್ಚು 5
ಹಗಲು ಇರುಳು ಇದರೊಳಗಿದೆಚಿಂತೆ 6
ದಾರಿಯ ತೋರುವ ಗುರುರಾಮ ವಿಠಲಾ
ಕಾರಣ ಕರ್ತನ ನಾ ನೋಡಲಿಲ್ಲ 7