(ಅ) ಆತ್ಮನಿವೇದನಾ ಕೃತಿಗಳು
ಏನು ಹೇಳಲಯ್ಯ ರಂಗ ಎಲ್ಲಿ ಹೋಗಲಯ್ಯ
ನನ್ನಮನಸು ಮಂಗವಾಗಿ ದೂರ ತಳ್ಳಿಹುದಯ್ಯ ಪ
ಎಲ್ಲೆಯಿಲ್ಲದ ಎನ್ನವನು ನೀ ಎಂತುನಿಂತಿಹೆ ಸುಮ್ಮನೆ
ಎಲ್ಲವಾಗಿಕೂಡಿಕೊಂಡಿಹೆನಿನ್ನಚರಣಭರಿಸುಮಾಪತೇ ಕ-
ಮಲಾಪತಿ ನೀ ಕರುಣದಿಂದಲಿ ನಡೆಸಲಾರೆಯಾ ನನ್ನನು ಅ.ಪ
ನಡೆಯಲಾರದೆ ಕಾಲುಬಿದ್ದಿದೆ
ಕೋಪಗೊಳ್ಳದೆ ಬಂದು ನನ್ನಲಿ ನಿಂತು ಸಲಹೈ ದೇವನೇ
ಅಪ್ಪಶೆಲ್ವನೆ ನಿನ್ನ ಬಿಟ್ಟರೆ ಕಾದು ಕುಳಿತಿಹರಾರಯ್ಯ 1