ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ್ತಿ ಹರಿ ಎಲ್ಲ ಕೇಳುವುದೆಲ್ಲ ನಿನ್ನ ಕೀರ್ತಿ ಪ ಎಲ್ಲ ಸಾರುವುದೆಲ್ಲ ನಿನ್ನ ವಾರ್ತಿ ಎಲ್ಲೆಂದರಲ್ಲೆ ನಿನಗೆ ಶರಣಾರ್ಥಿ ಅ.ಪ ಕಲ್ಲಿನಲ್ಲಿ ನಿನಗೆ ಶರಣಾರ್ಥಿ ನೆಟ್ಟ ಮುಳ್ಳಿನಲ್ಲಿ ನಿನಗೆ ಶರಣಾರ್ಥಿ ಕಳ್ಳರಲ್ಲಿ ನಿನಗೆ ಶರಣಾರ್ಥಿ ಮಹ ಕುಳ್ಳರಲ್ಲಿ ನಿನಗೆ ಶರಣಾರ್ಥಿ ವೈರಿ ಕೊಲ್ಲಲುಬರಲವ ರಲ್ಲೆ ನಿನಗೆ ಬಹು ಶರಣಾರ್ಥಿ 1 ಊರೊಳು ನಿನಗೆ ಶರಣಾರ್ಥಿ ಮಹ ದಾರಣ್ಯದಲಿ ನಿನಗೆ ಶರಣಾರ್ಥಿ ಘೋರತಾಪದಿ ನಿನಗೆ ಶರಣಾರ್ಥಿ ಬಿಡದಾ ಪಾರ ಸೌಖ್ಯದಿ ನಿನಗೆ ಶರಣಾರ್ಥಿ ಸಾರವಿಲ್ಲದ ಸಂಸಾರದಿ ನಿನಗೆ ಬಾರಿಬಾರಿಗೆ ಬಹು ಶರಣಾರ್ಥಿ 2 ನಿನಗೆ ಜಾಗ್ರದಲಿ ಶರಣಾರ್ಥಿ ಬಿದ್ದ ಕನಸಿನಲಿ ನಿನಗೆ ಶರಣಾರ್ಥಿ ಘನ ನಿದ್ರದಿ ನಿನಗೆ ಶರಣಾರ್ಥಿ ಬಿಡ ದನುದಿನದಲಿ ನಿನಗೆ ಶರಣಾರ್ಥಿ ತನುಮನಧನದಲಿ ಜನಕ ಶ್ರೀರಾಮ ನಿನಗೆಣಿಕಿಲ್ಲದ ನಿಜ ಶರಣಾರ್ಥಿ 3
--------------
ರಾಮದಾಸರು