ಒಟ್ಟು 5 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ಧ್ರುವ ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು 1 ತರಳಗುಂಟೆ ಭಯವು ಘಟಸರ್ಪದ ಎರಳೆಗುಂಟೆ ಖೂನ ಮೃಗಜಲವೆಂಬುವದ ಸೋರೆಗುಂಟೆ ಮಾತು ಚಾರ್ತುಯದ 2 ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ ಮನದಿಚ್ಛೆಯಿದ್ದವಗೆ ಎಲ್ಲಿ ಧ್ಯಾನ ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳದೆ ಜನ್ಮಕೆ ಬಂದಿದೇನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೂತ ಬಡೆದಿತೊ | ಬ್ರಹ್ಮಭೂತವ ಬಿಡಿಸುವರಾರಮ್ಮ ಪ ಪೃಥ್ವಿ ಆಪ ತೇಜಂಗಳನೆಲ್ಲ ನುಂಗಿತು |ಮತ್ತೆ ಸಮೀರ ಸಹ ಆಕಾಶವ |ಚಿತ್ತ ಹಂಮಿನ ಮೂಲಕ ಹವಣಿಸುತಿದೆ |ಕರ್ತು ತಾನಾಗಿ ಸುಮ್ಮನೆ ಕೂತಿತಮ್ಮಾ 1 ಕಳವಳ ಕಳೆದೀತು ಒಳ್ಳೆ ಬೆಳಗಾದೀತು |ಸುಳದ್ಹಾಂಗೆ ಸುಳದೀತು ಅಳಿವಿಲ್ಲದೆ |ಮೂಲ ಪ್ರಕೃತಿಯ ಮೇಲೇರಿ ನಿಂತಿತು |ಸೊಲ್ಲದಿಂ ಸೋಂಕಲು ಬಲು ಭಯವಮ್ಮಾ 2 ದಿಮ್ಮನೆ ಬಡದೀತು ಹಂಮನೆ ನುಂಗೀತು |ನಮ್ಮಗೆ ಎಲ್ಲಿಹುದು ಉಲಗಡೆಯಮ್ಮಾ |ಬ್ರಹ್ಮಾಂಡದಾಚೀಲಿ ಭೂತ ಕುಣಿಯುತಿದೆ |ಭೀಮಾಶಂಕರನ ಮನಿ ದೈವವಮ್ಮಾ 3
--------------
ಭೀಮಾಶಂಕರ
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು ಭೇದಿಸದಲ್ಲದೆ ಹೊಳೆಯದಿದು ಧ್ರುವ ತೆಂಗಿನ ಫಲದಂತವರ ಸಂಗದಸುಖ ಹಿಂಗದಂತನುದಿನ ಅನುಭವಿಸುವದಲ್ಲದೆ 1 ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ 2 ಅಂತರಾತ್ಮದ ಸುಖ ಮಹಾತ್ಮರಗಲ್ಲದೆ ಮೂಢಾತ್ಮರಿಗಿದು ಎಲ್ಲಿಹುದು 3 ಸಾಧು ಸಂತರ ನಿಜದಾಸ ಮಹಿಪತಿಗಿನ್ನು ಸಾಧು ಸಂಗತಿ ಜೀವನ್ಮುಕ್ತಿಯು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು