ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಹನು ದೇವನೆಂದೆಲ್ಲು ಜನ ನುಡಿವರು ಸಲ್ಲುವುದೆ ಆಲಿಸಲು ಬಲ್ಲಗೀ ನುಡಿಯು ಇಲ್ಲೆಂದು ನುಡಿವರ್ಗೆ ಬಲ್ಲನಿತು ಪೇಳುವೆನು ಪುಲ್ಲನಾಭನ ಚರಿತವಾ ಹಿತವಾ ಪ ಕಲ್ಲಾಗಿ ಬಿದ್ದಿಪ್ಪಹಲ್ಯೆ ತಾ ಬಲ್ಲಳು ಎಲ್ಲ ಜಗ ಪಾವನನ ಸುಳ್ಳೆನ್ನಬಹುದೇ ಅಲ್ಲೆಂದರೀ ನುಡಿಗೆ ಹೊಲ್ಲ ಜಗವ ತುಂಬುವನು ಕಲ್ಲು ಮುಳ್ಳನು ಉದರದಿ ಜವನಿ 1 ತೋರೆಲವೊ ಹರಿಯನೆಂದೊದರಾಡೆ ರಕ್ಕಸನು ಘೋರ ಕಂಭದಿ ತೋರೆ ಹಾರಿ ತಲ್ಹಣವು ಘೋರ ರೂಪವ ತಾಳಿ ನಾರಸಿಂಹಾಖ್ಯದಿ ಚೂರ ಮಾಡಿದವನÀನು ಪರನು 2 ಧsÉೀನಿಪರ ಮನದೊಳಗೆ ಸಾನುರಾಗದಿ ಹರಿಯು ಸ್ಥಾನಗೊಳಿಪನು ಮನಕೆ ಆನಂದವೀವಾ ದಾನವಾಂತಕ ಶ್ರೀ ನರಸಿಂಹವಿಠಲನು ಆನತರ ನೆರೆ ಪೊರೆವನು ಬಿಡನು 3
--------------
ನರಸಿಂಹವಿಠಲರು
ಕೇಳೋನಂದ ಇದು ಏನು ಚೆಂದ ಹಾಲಿನ್ಹರವಿಯ ಒಡೆದೋಡಿ ಬಂದು ಬಾಲರನು ಕೂಡ್ಯಾಡಿ ಗೋವಿಂದ ಬವಣೆಬಡಿಸುವ ಬಲುಬಗೆಯಿಂದ ಪ ಕಣ್ಣ ತೆರೆದು ಉದಕದೊಳಾಡುವನು ಸಣ್ಣ ಮೋರೆಯ ಮಾಡಿ ಬಗ್ಗುವನು ಮಣ್ಣಕೆದರುತ ಕ್ರೋಡಾಗಿ ತಾನು ಚಿನ್ನಸುರ ಎಲ್ಲೆ ಕರುಳ್ಹಾರ್ಹಾಕುವನು 1 ತಿರುಕನಂದದಿ ಬೇಡಿಕೊಂಬುವನೊ ಗುರುತದಾರದರಿಯ ತಾಯ್ಹಂತಕನು ದೊರೆತನವ ಬಿಟ್ಟಡವಿಲಿರುವವನು ಶರತಮಾಡಿ ಮಾತುಳನ ಕೊಲ್ಲುವನು 2 ಬËದ್ಧರೂಪದಿ ಲಜ್ಜೆಗೆಡಿಸುವನು ಎದ್ದು ತುರುಗನೇರ್ಯೋಡಿ ಪೋಗುವನು ಕದ್ದು ಬೆಣ್ಣೆಯ ಮೆಲ್ಲುವ ತಾನು ಮುದ್ದು ಭೀಮೇಶಕೃಷ್ಣ ಎಲ್ಲಿಹನು 3
--------------
ಹರಪನಹಳ್ಳಿಭೀಮವ್ವ