ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಎಲ್ಲಿರುವೆ ಬಾರಯ್ಯದೇವ ಬಲ್ಲಿದ ನೀನೆ ಅನಾಥಜನಜೀವ ಪ ಪುಲ್ಲನಾಭ ನೋಡೆನ್ನ ಪರಿಭವದ ದು:ಖವನು ನಿಲ್ಲದೆ ದಯಮಾಡು ಬೇಗದೊಳಭವ ಅ.ಪ ಕ್ಷಣಕ್ಷಣಕೆ ಒದಗುತಿಹ್ಯ ದಣಿವು ಬೇನ್ಯಾಪತ್ತು ಅನುಪಮ ಬಡತನದ ಘನ ಘನ ವಿಪತ್ತು ದಿನದಿನ ಪರರನು ಮಣಿದುಬೇಡುವ ಹೊತ್ತು ಇನಿತೆಲ್ಲ ಕನಿಕರದಿ ನೀನೆ ಕಳೆಯಭವ 1 ಕನಕ ವಸ್ತ್ರಾಭರಣ ವನಿತೆಗ್ಹಾಕುವ ಚಿಂತೆ ಧನಧಾನ್ಯವಿಲ್ಲೆಂಬ ಎಣಿಕಿಲ್ಲದ ಚಿಂತೆ ಮನಕೆ ತುಸುಗೊಡದ ರಿಣಬಾಧದ್ದತಿ ಚಿಂತೆ ವನಜಾಕ್ಷ ಕೃಪೆಯಿತ್ತು ನೀನೆ ಬಿಡಿಸಯ್ಯ 2 ಧರೆಯಸುಖೆನಗಿಲ್ಲೆಂಬ ಪರಿಪರಿಯು ಉರಿ ತಾಪ ಪರರಸೇವೆಯ ಮಾಡ್ವ ಪರಮ ಪರಿತಾಪ ಜರಜರಕೆ ಬಂದು ಆವರಿಸುವುವು ಮಹಪಾಪ ಪರಹರಿಸೆಲವೋ ಶ್ರೀರಾಮಪ್ರಭು ಭೂಪ 3
--------------
ರಾಮದಾಸರು
ಎಲ್ಲಿರುವೆಯೊ ಎಂದು | ತಲ್ಲಣಗೊಳುತ್ತಿದ್ದೆ ಇಲ್ಲೆ ಬಂದೆಯೊ ದೇವನೆ ಪ. ಪುಲ್ಲಲೋಚನ ಎನ್ನ ಉಲ್ಲಾಸಗೊಳಿಸುತ ನಿಲ್ಲೊ ಹೃತ್ಕಮಲದಿ ನೀ ಬಹು ಮುದದಿ ಅ.ಪ. ಕಪಟನಾಟಕ ದೇವ | ಅಪರಿಮಿತ ಮಹಿಮ ಗುಪಿತರೂಪನೆ ನಿನ್ನನು ವಿಪುಲಮತಿಯಿಂದ ವರ್ಣಿಸಲಾಪೆನೆ ಸಪುತ ಸಪುತ ಭುವನೇಶ ಕೃಪೆಮಾಡೊ ಕೃಪಣವತ್ಸಲ ನಿನ್ನ ಕಾಣದೆ ಅಪರಿಮಿತವಾಗಿ ನೊಂದೆನಯ್ಯ ತಪಿಸುವುದು ನಿನಗುಚಿತವೆ ಹರಿ ಕೃಪೆ ಮಾಡೊ ಬೇಗ ಶ್ರೀನಿವಾಸ 1 ಹರಿ ನಿನ್ನ ಪಾದವ | ನಿರುತದಿ ಧ್ಯಾನಿಪ ವರಮತಿ ಎನಗೆ ನೀಡೊ ಗರುವಿಕೆಯನೆ ಬಿಡಿಸು ಶರಣಳ ಪೋಷಿಸು ಸುರವರ ನಿನ್ನಂಘ್ರಿಗೆರಗಿ ಬಿನ್ನೈಸುವೆ ಕರೆಕರೆಗೊಳಿಸುವುದುಚಿತವೆ ತೊರೆದರೆ ಎನ್ನ ಪೊರೆವರ್ಯಾರೊ ಥರವಲ್ಲ ನಿನಗಿನ್ನು ಕೇಳಿದು ಪೊರೆಯದಿದ್ದರೆ ನಗರೆ ಭಕ್ತರು 2 ಮಂದಮತಿಯಿವಳೆಂದು | ಹಿಂದು ಮಾಡಿದರÉನ್ನ ಕುಂದು ನಿನಗೆ ತಪ್ಪದೊ ಬಂಧನ ಬಿಡಿಸು ನೀ ಬಂಧನದೊಳಗಿಡು ಮಂದಿರ ಹೃದಯದಿ ಎಂದೆಂದಿಗಗಲದೆ ಮಂದಭಾಗ್ಯೆಯ ಮಾತು ಕಿವಿಗೆ ಮಂದಗಮನೆಯ ಮಧ್ಯೆ ಇರುವಗೆ ಮಂದಹಾಸ ಮುಖೇಂದು ವದನನೆ 3 ಅಜಸುರ ವಂದ್ಯನೆ | ಭಜಿಸಲಾಪೆನೆ ನಿನ್ನ ತ್ರಿಜಗದೊಡೆಯ ಹರಿಯೆ ವಿಜಯಸಾರಥಿ ಎನ್ನ ರಜತಮವನೆ ಕಳೆದು ಕುಜನರೊಳಿಡದಲೆ ನಿಜಗತಿ ಪಾಲಿಸೊ ಗಜವರದ ಗಂಭೀರ ದೇವನೆ ಧ್ವಜವಜ್ರೌಕುಶ ಪಾದಕಮಲನೆ ಭಜಿಸಿದವರಿಗೊಲಿವ ದೇವನೆ ಭುಜಗಭೂಷಣನಿಂದ ವಂದ್ಯನೆ 4 ಸೃಷ್ಟ್ಯಾದಿ ಕರ್ತನೆ | ಎಷ್ಟು ಬೇಡಲೊ ನಾನು ಇಷ್ಟ ದೈವÀವೆ ಕೇಳಲೊ ಭ್ರಷ್ಟತನವನೆಣಿಸದೆ ದೃಷ್ಟಿಯಿಂದಲಿ ನೋಡಿ ಕಷ್ಟಬಿಡಿಸಿದರೆ ಮುಟ್ಟಿಪೂಜಿಸುವೆನೊ ದಿಟ್ಟ ಗೋಪಾಲಕೃಷ್ಣವಿಠ್ಠಲ ಇಷ್ಟು ಬಿನ್ನಪ ನಷ್ಟ ಮಾಡದೆ ಕೊಟ್ಟು ಧೈರ್ಯವ ಮೆಟ್ಟಿ ಪಾಪವ ಸುಟ್ಟು ಕರ್ಮವ ಕೃಷ್ಣ ಸಲಹೊ 5
--------------
ಅಂಬಾಬಾಯಿ
ಧ್ಯಾನವ ಕೊಡು ಹರಿಯೆ | ನಿರಂತರ ಧ್ಯಾನವ ಕೊಡು ಹರಿಯೆ ಪ ನೀನೆ ಗತಿಯೆಂದಾನುಪೂರ್ವಕ ಧ್ಯಾನ ಮಾಳ್ವರ ಜನ್ಮಕರ್ಮಗ ಳೇನು ನೋಡದೆ ಪೊರೆವೆ ನಿನ್ನ ಸುನಾಮವೆ ಸುರಧೇನುವೆಂದು ಅ.ಪ. ನಿನ್ನ ನಾಮವ ನೆನೆದು | ಅಜಾಮಿಳನು ಧನ್ಯನು ತಾನಾದನು ಈ ಭುವನದಿ ತನ್ನ ದೇಹಾತುರದೊಳನ್ಯರ ಬನ್ನ ಬಿಡಿಸುತಲಿದ್ದ ಖಳನು ನಿನ್ನ ನಾಮಸ್ಮರಣೆ ಮಾತ್ರದಿ ಘನ್ನ ಮುನಿಪತಿ ಎನ್ನಿಸಿದನು 1 ದುರುಳ ದುಶ್ಯಾಸನನು | ಸಭೆಯೊಳಗಂದು ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ ಮುರಹರನೆ ಹಾ ಕೃಷ್ಣ ದ್ವಾರಕಾ- ಪುರನಿಲಯ ಪರಮಾತ್ಮ ಭಕ್ತರ ಸುರತರುವೆ ಎಲ್ಲಿರುವೆ ಏತಕೆ ಮರೆವೆ ಎನ್ನುತ ಮೊರೆಯೆ ಪೊರೆದೆಯೊ 2 ನರಕ ಕೂಪದೊಳು ಬಿದ್ದು | ಏಳುತ್ತ ಮುಳುಗುತ ಪರಿಪರಿ ಭಾಷೆಯಲಿ ಮುಂದೋರದೆ ಹೊರಳುತ್ಹೊರಳುತ ಮರುಕಗೊಳುತ ಹರಿಹರಿ ನಾರಾಯಣೆನ್ನಲು ಸುರಲೋಕವನ್ನಿತ್ತು ಸಲಹಿದೆ ವರದ ಲಕ್ಷ್ಮೀಕಾಂತ ಶಾಶ್ವತ 3
--------------
ಲಕ್ಷ್ಮೀನಾರಯಣರಾಯರು
ಮಾವಿನಕೆರೆ ಎಲ್ಲಿರುವೆ ಬಾರಂಗ ಬಾ ಮೋಹನಾಂಗ ಎಲ್ಲಿರುವೆ ನೀಲಾಂಗ ಮಾಂಗಿರಿರಂಗ ಪ ಇಲ್ಲಿರುವೆಯಾರಂಗ ಸಲ್ಲಲಿತ ರಂಗ ಮೆಲ್ಲನೇ ರಂಗ ಓ ಮುದ್ದುರಂಗಾ ಅ.ಪ ಅಲ್ಲಿ ನೋಡಿದರಿಲ್ಲ ಇಲ್ಲಿ ಕಾಣಿಸಲಿಲ್ಲ ಬಲ್ಲೆ ನಾನೀ ಚೆಲ್ಲ ವರದಾತನಲ್ಲ ಇಲ್ಲಿ ತಿಳಿಗೊಳವಿಲ್ಲ ಮಲ್ಲಿಗೆಯ ಹೂವಿಲ್ಲ ಇಲ್ಲಿರುವ ಧೃಢವಿಲ್ಲ ನೀ ಬರುವೆ ಅರಿವಿಲ್ಲ 1 ಗಜರಾಜ ಕರೆದನೆ ಅಜಾಮಿಳನು ಕೂಗಿದನೆ ಅಜನು ಬಾರೆಂದನೆ ಲೋಕವಂದಿತನೆ ರಜತಾದ್ರಿ ವಾಸನೆ ಪೂಜಿಸಲು ಕರೆದನೊ ಸುಜನ ವರದಾಯಕನೆ ವಿಜಯ ಪೂರಿತನೇ 2 ವನವನದಿ ಸಂಚರಿಸಿ ದನಿದನಿಯನನುಸರಿಸಿ ಮನದಿ ನೋವನನುಭವಿಸಿ ಕನಸೆಂದು ಭಾವಿಸಿ ಕನವರಿಪ ಯೆನ್ನೊಳಗೆ ಕನಿಕರವ ಸೂಸಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಯುದೇವರು ಎಲ್ಲಿರುವೆ ತಂದೆ ಬಾರೊ ಮಾರುತಿ ಪ ಎಲ್ಲೆಲ್ಲಿನೋಡಿದರು ಅಲ್ಲಿ ನಿನ್ನ ಕೀರುತಿ ಅಲ್ಲಿನಿನ್ನಕೂಡಿರುವ ನಿತ್ಯಾಶ್ರೀಪತಿಅ.ಪ ವಾರಿಧಿಯ ಹಾರಿ ನೀ ಸೇರಿ ತ್ವರದಿ ಲಂಕೆಯ ಕ್ರೂರರನ್ನು ಕೊಂದು ಕುರುಹ ತಂದ ಮಹರಾಯ 1 ದುರುಳ ಕುರುಪನನ್ನು ಕೊಂದು ತರಳೆಯಮಾನ ಹರುಷದಿಂದ ಪೊರೆದು ನೀ ಮೆರೆದ್ಯೊ ಸುಮ್ಮಾನ 2 ಹಿತದಿ ಸತತ ಭಜಿಸಿ ಶೇಷ ವಿಠ್ಠಲನ ಮೋದಿಸಿದಿ 3
--------------
ಬಾಗೇಪಲ್ಲಿ ಶೇಷದಾಸರು
ಶ್ರೀ ರಾಘವೇಂದ್ರರು ಎಲ್ಲಿರುವೆ ತಂದೆ ಬಾರೊ ಗುರುರಾಯನೆ ಪ ಬಳಲುವೆ ಭವದಿ ತಳಮಳಿಸುವೆನೊ ಕಳವಳಿಕೆಯ ಬಿಡಿಸೊ ಗುರುರಾಯನೆ 1 ತಡ ನೀ ಮಾಡಲು ತಡೆಯದಾಗದೋ ಗಡ ಬಾ ಇಡು ದಯವಾ 2 ಸಕಲರಲ್ಲಿ ವ್ಯಾಪಕನೆಂದ್ಹರಿಯನು ಪ್ರಕಟಿಸಿದಿ ಜಗದಿ 3 ಹರಿನಾಮವು ಸರ್ವತಾರಕವೆಂಬÉೂೀದು ಮೆರಸಿದಿ ಧರೆಯೊಳಗೆ 4 ಧೀರನಾದ ಹನುಮೇಶ ವಿಠಲನಾ ಧ್ಯಾನದಿ ಮನ ನಿಲ್ಲಿಸೋ5
--------------
ಹನುಮೇಶವಿಠಲ