ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ಪ ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನುಅ ತರಳ ಪ್ರಹ್ಲಾದ ಹರಿ ವಿಶ್ವಮಯನೆಂದುಬರೆದೋದಲವನ ಪಿತ ಕೋಪದಿಂದಸ್ಥಿರವಾದಡೀ ಕಂಬದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ1 ಪಾಪ ಕರ್ಮವ ಮಾಡಿದಜಮಿಳನ ಯಮಭಟರುಕೋಪದಿಂದೆಳೆಯುತಿರೆ ಭೀತಿಯಿಂದತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸನಿಹದಲ್ಲಿಹುದೆ 2 ನೆಗಳು ನುಂಗುತಿರೆ ಭಯದಿಂದಮೊರೆಯಿಡಲು ಕೇಳಿ ತ್ವರಿತದಲಿ ಬಂದುಕರುಣದಲಿ ಬಂಧನವ ಪರಿಹರಿಸೆ ಗಜರಾಜನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ 3 ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆತರುಣಿ ಹಾ ಕೃಷ್ಣ ಎಂದೊದರೆ ಕೇಳ್ದುಭರದಿಂದ ಅಕ್ಷಯಾಂಬರವೀಯೆ ಹಸ್ತಿನಾಪುರಿಗೆ ದ್ವಾರಾವತಿಯು ಕೂಗಳತೆಯೆ 4 ಅಣು ಮಹತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯಗಣನೆಯಿಲ್ಲದ ಮಹಾಮಹಿಮನೆನಿಪಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನುನೆನೆದವರ ಮನದೊಳಿಹನೆಂಬ ಬಿರುದುಂಟಾಗಿ5
--------------
ಕನಕದಾಸ
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |ಬರೆದೋದಲವನ ಪಿತ ಕೋಪದಿಂದ ||ಸ್ಥಿರವಾದೊಡೀ ಕಂಬದಲಿ ತೋರು - ತೋರೆನಲು |ಭರದಿ ಬರಲಾಗ ವೈಕುಂಠವಲ್ಲಿಹುದೊ ? 1ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |ತರುಣಿ ಹಾ ಕೃಷ್ಣ ಎಂದೊದರೆಕೇಳಿ ||ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |ಪುರವು ದ್ವಾರಾವತಿಗೆ ಕೂಗಳತೆಯೆ 2ಕರಿರಾಜನನುನೆಗಳು ನುಂಗುತಿರೆ ಭಯದಿಂದ |ಹರಿಯೆ ಕಾಯೆಂದು ಮೊರೆಯಿಡಲುಕೇಳಿ ||ಕರುಣದಿಂ ಬಂಧನವ ಬಿಡಿಸಲಾ ಗಜರಾಜ - |ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ 3ಪಾಪಕರ್ಮವ ಮಾಡಿದಜಮಿಳನ ಯಮಭಟರು ||ಕೋಪದಿಂದಲಿ ಸೆಳೆಯೆ ಭೀತಿಯಿಂದ ||ತಾ ಪುತ್ರನನು ಕರೆಯೆಕೇಳಿ ರಕ್ಷಿಸಿಶ್ವೇತ -ದೀಪವೀ ಧರೆಗೆ ಸಮೀಪವಾಗಿಹುದೆ ? 4ಅಣು - ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |ಎಣೆಯಿಲ್ಲದ ಮಹಾಗುಣಪೂರ್ಣನು ||ಘನಮಹಿಮನಾದ ಶ್ರೀ ಪುರಂದರವಿಠಲನು |ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು 5
--------------
ಪುರಂದರದಾಸರು