ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಂಡಜ್ಜಿ ಶ್ರೀ ಜನಾರ್ದನ ಸ್ವಾಮಿ ಸ್ತೋತ್ರ ಎಂಥಾ ಸುಂದರನೊ ಶ್ರೀಕಾಂತನೂ ||ಅ|| ಸಂತರ ಮನೋರಥ ಸಂತತ ಪಾಲಿಸಿಪಂಥಾವ ಗೆಲಿಪ ಮಹಾಂತನೋ - ಶ್ರೀಕಾಂತನೂ ಅ.ಪ. ಮಾನಿನೀಯಳ ಬಿಟ್ಟು | ಮೌನಿಯಂದದಿ ನೀನುಕಾನನವನೆ ಸೇರಿ ನೆಲೆಸೀರ್ಪುದೂ | ಮುನಿಜನ ವಂದ್ಯಾ 1 ತೊಂಡ ಜನರು ನಿನ್ನ | ಬಂಡುಣಿಯಂದದಿಪುಂಡು ಮಾಡುವರೆಂದು ಬಂದೆಯಾ | ಪುಂಡರಿಕಾಕ್ಷಾ 2 ಹಿಂಡು ಭಕ್ತರು ತಮ್ಮ | ದಿಂಡು ಮಂಡಿಪರೆಂದು ಕೊಂಡಜ್ಜಿಯಲಿ ನೆಲಿಸೀದ್ಯಾ | ಪಾಂಡವ ಪ್ರೀಯಾ 3 ವೇಲಾಪುರಿಗೆ ಪೋಗ | ಲೊಲ್ಲೆನೆಂದೆನುತಲಿಇಲ್ಲೇ ನೆಲಸಿ ಪೂಜೆಗೊಂಬುದು ಫಾಲಾಕ್ಷ ಪ್ರಿಯನೇ 4 ಎಲ್ಲಿಪೋದರೂ ಬಿಡ | ಲೊಲ್ಲರೂ ನಿನ್ನ ಜನಸಲ್ಲಿಸೆನ್ನಯ ಮನೋಭೀಷ್ಟವ | ಹೇ ಜನಾರ್ಧನಾ 5 ಆರು ಕಾಯುವರಿಲ್ಲ | ಸಾರಿದೆ ತವ ಚರಣಪೋರನಾಮಯ ಹರಿಸಯ್ಯಾ | ನಾರದ ವಂದ್ಯಾ 6 ಗುರುಗಳಂತರ ಗುರು | ಗೋವಿಂದ ವಿಠಲನೆಪರಿಪರಿ ನಿನ ಕೀರ್ತಿ ನುಡಿಸಯ್ಯಾ | ಸುರವರ ವಂದ್ಯಾ7
--------------
ಗುರುಗೋವಿಂದವಿಠಲರು