ಎತ್ತಣ ಸಂಸ್ಕøತಿ ಎಲ್ಲಿದೀ ಕಾಯಾ ಸುತ್ತಲೂ ಸಂಕಟವೋ
ಮತ್ತೆ ವೈರಿಗಳ ಮತ್ತೆರಡುಪಟಳ ಸುತ್ತೆ ಭೀತಿಮಯವೋ ಕೃಷ್ಣಾ ಪ
ಸುಂದರ ದೇಹವು ಬಂದುದು ಎಂದಾನಂದ ಭರಿತನಾಗಿ
ಬಂಧು ಬಳಗದ ಪೊಂದಿಕೆಯಿಂದಲಿ ಸಂದಣಿ ಹೆಚ್ಚಾಗಿ
ಚಂದದ ಮಂದಿರ ಕುಂದದ ಧನ ಸುಖದಿಂದ ಯುಕ್ತನಾಗಿ
ಬಂದೆಮದೂತರು ನಿಂದು ಯಳೆಯುವಾಗ
ಸುಂದರ ತನುವೆಲ್ಲಿ ಬಂಧು ಬಳಗವೆಲ್ಲಿ 1
ಚತುರ ದೆಶೆಗಳಲಿ ಭರದಿ ಸಾಗುವವು ಗತಿಯ ಅರುಹು ಇಲ್ಲಾ
ಚತುರದ ಮೇಲೊಂದತಿ ಕ್ಲೇಶಗಳೀ ದೇಹ ಮುತ್ತಿದವಲ್ಲಾ
ಚತುರದೊಳುಣವಂದತಿ ತಾಪಗಳ್ಮಿತಿ ಮೀರಿ ಕಾಡಿದವಲಾ
ಚತುರಾನನ ಪಿತ ಗರಿಯಿಲ್ಲದನ್ನ ಹಿತರು ತೋರಲಿಲ್ಲಾ 2
ಪರಿಪರಿ ವಿಷಯಗಳ ಮೆರೆವ ಶಿರಿಯ ಮೇಣರಿವರ್ಗಗಳೆರಗಿ
ಹರಿಯ ನೆನೆವ ಮನ ಕರವಳ ಹೊಯ್ದು ಬೆರಸಿ ಕಾಯವ ತೂಗಿ
ಮರದ ಮೇಲಿಂದ ಕರಬಿಟ್ಟ ತೆರದಂತೆ ಮೆರೆವ ದೇಹಕೆ ಆಗಿ
ಸೊರಗೀ ಕೃಷ್ಣಾ 3