ಹೇಗೆ ಕಳೆಯಬೇಕೋ ಹೊತ್ತು ಹೇಗೆ ಕಳೆಯಬೇಕೋ ಪ
ಹೇಗೆ ಕಳಿಲಿ ಭವಸಾಗರದಲಿ ಮನ
ನೀಗದು ಚಂಚಲ ಸಾಗರನಿಲಯ ಅ.ಪ
ಹುಟ್ಟಬಾರದಿತ್ತು ಇಹ್ಯದಿ ಹುಟ್ಟಿದ್ದೇ ತಪ್ಪಾಯಿತು
ನಿಷ್ಠೆಲಿರಗೊಡದೆನ್ನ ದುಷ್ಟಮನಸು ಘಳಿ
ಗಿಷ್ಟೆಲ್ಲ ಎಲ್ಲಿತ್ತು ಹುಟ್ಟದಿದ್ದರೆ ನಾನು 1
ಕ್ಷಣಕ್ಷಣಕೊಂದು ರೀತಿ ಮನಸಿನ ಗಣನೆಯಿಲ್ಲದ ಭ್ರಾಂತಿ
ಜನಿಸಿದಂದಿನಿಂದ ಘನತರ ಕುಣಿಸ್ಯಾಡಿ
ಜನರ ಸೇವೆಯೊಳು ದಣಿಸಿತು ಪಾಪಿ 2
ಅನುಗಾಲವು ಚಿಂತೆ ಜೀವಕೆ ಇನಿತು ಇಲ್ಲ ಸ್ವಸ್ಥ
ತನುಮನಧನ ನಿನಗರ್ಪಿಸಿ ಬೇಡುವೆ
ಘನ ಬೇಸತ್ತೆ ಪೊರೆ ಚಿನುಮಯ ಶ್ರೀರಾಮ 3