ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ ಪ
ಎಲ್ಲಿಂದೆಲ್ಯುರುಳಿದ್ಯೋ | ಎಲೆ ಮನವೇ |
ಬಲ್ಲತನದಲಿಗಿಡ ಕೊನೆಯ ನೇರಿ ಬಿದ್ದಂತೆ 1
ದುರ್ಲಭ ನರದೇಹದಿ ಬಂದು | ಫುಲ್ಲನಾಭನ ನೆನೆಯದೆ |
ಕ್ಷುಲ್ಲಗುಣದಲಿ ನಾನಾ ಹೀನ ಯೋನಿಯ ಮುಖಕ 2
ಅಗ್ರಜನ್ಮದಲಿ ಬಂದು ಸಂತರಾನುಗ್ರಹವ | ಪಡೆದುಕೊಳ್ಳದೆ |
ವ್ಯಗ್ರಬುದ್ಧಿಯಲಿ ಅತಿ ಶೂದ್ರ ನಡುವಳಿವಿಡಿದು 3
ವರಗಳನು ಪಡಕೊಳ್ಳವೆ |
ಶರೀರಾಭಿಮಾನಿ ಗೆಳೆತನ ಕಟ್ಟಿ ವಿಷಯಕ್ಕು 4
ತಂದೆ ಮಹಿಪತಿ ಸ್ವಾಮಿಯಾ ಮೊರೆ ಹೊಕ್ಕು |
ಬಂದ ಸಾರ್ಥಕವ ಮಾಡು | ಇಂದಿನೆಚ್ಚರ ನಾಳೆ
ಸಂಧಿಸಿದು ನಿಜದಿಂದ 5