ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾರಾಧ್ಯನೆ ಬಂದು ನಿಲ್ಲೊ ಪ ಇಂದೆನ್ನ ಸಲಹೊ ಮಂದನಾನೊಂದನರಿಯೆ ಏ- ನೆಂದು ಕರೆಯಲೋ ಗೊವಿಂದ ಅ.ಪ ಜಲದೊಳಾಡುವ-ಕಲ್ಲಹೊರುವ ಎಲ್ಲಕಾಡಿನೊಳಾಡುವ ಭಳಿರೆ ಎರಡಂಗವ ತಳೆವ ವನಳಿವಗೋವನೆ ಕಾಯ್ದ ಮರೆವ ನಿನ್ನಯ ರೂಪವಾ ಸಲಿಲ ಹೊಕ್ಕು ಅಸುರನ ಸಂಹರಿಸಿ ಕಲಕಿಶರಧಿಯ ಸುಧೆಯನು ತರಿಸಿ ನೆಲಗಳ್ಳನ ಮದವನೆ ಮರ್ದಿಸಿ ಚೆಲುವಚೆಳ್ಳುಗುರಿನಿಂದುದರವ ಛೇದಿಸಿ ಸುಲಭದಿಂದ ಶುಕ್ರನ ಕಣ್ಮರಿಸಿ ಬಲುಕೊಬ್ಬಿದ ಕ್ಷತ್ರಿಯರನೊರೆಸಿ ಶಿಲೆಯ ಮೆಟ್ಟಿ ಮುನಿಸತಿಯರನುದ್ಧರಿಸಿ ಲೀಲೆಯಿಂದ ವ್ರಜನಾರಿಯರೊಲಿಸಿ ಸಲೆದಿಗಂಬರರೂಪವ ಧರಿಸಿ ಮಾಧವ 1 ಜಲದೊಳು ನಿಂದು ಕಣ್ಣಬಿಡುವ ಶೈಲವ ತಳೆವಾ ಕಲಕೀ ಮಣ್ಣ ಮೆಲುವ ಕಲ್ಲಕಂಭವ ಒಡೆವಾ ಬಲಿಯನೆ ಬೇಡುವ ಪರಶುವ ತೊಳೆದು ವನವನಗಳ ಚರಿಸುವ ಬಾಲೆಯರನಾಳ್ವ ಎಲ್ಲನಾಚಿಕೆಯ ಬಿಡುವ ಸಲ್ಲುವಹಯವೇರಿ ಮೆರೆವಾ ನಿನ್ನಯ ರೂಪವಾ ಎಲ್ಲವೇದವನುದ್ಧರಿಸಿ ವಾರಿಧಿಯಲಿ ತಳೆದು ಅಮೃತಮಥನಕೆ ಶಿಲೆಯ ಝಲಿಸಿ ನಿಲಸಿದೆ ನಿಜಕೆ ಧರಣಿಯ ಬಲ್ಲಿದ ಬಲಿಯ ಬಂಧಿಸಿ ಭಕ್ತಿಯ ಸಲ್ಲಿಸಿದೆ ಪಿತ ಪೇಳ್ದ ಆಜ್ಞೆಯ ಬಿಲ್ಲನೆತ್ತಿ ವರಿಸಿದೆ ಸೀತೆಯ ಮಲ್ಲರ ಮಡುಹಿ ತೋರಿದೆ ಚರಿಯ ಜಳ್ಳುಮಾಡಿತೋರ್ದೆ ಧರ್ಮಕೆ ಮಾಯ ಹುಲ್ಲುಣಿಸುವ ಹಯವೇರಿ ಮೆರೆದ ಶ್ರೀ ವಲ್ಲಭ ನಿನ್ನಯ ರೂಪವ ಸೊಲ್ಲಿಪರಾರೋ ಶ್ರೀಧರ 2 ನಿಗಮತಂದಿತ್ತೆ ನಗವಾನೆ ನೆಗವಾ ಮೊಗದೊಳು ಭೂಮಿಯ ಬಗೆವಾ ಉಗುರಿಂದುದರವ ಸೀಳ್ವ ತ್ಯಾಗಿಯನ್ಯಾಚಿಸುವ ಭೃಗುವಿಗೆ ಮುದವ ತೋರ್ವ ಸಾಗರಕೆ ಸೇತುಕಟ್ಟುವ ನೆನೆದಮೃತವ ಮೆಲುವ ಎಂದೆನಿಸಿ ಮೆರೆವ ನಿನ್ನಯ ರೂಪವಾ ಪೊಗಲಳವೇ ಭೂಧವ ನಿಗಮಕಾಗಿ ನೀ ತಮನ ಮರ್ದಿಸಿ ನಗವ ಬೆನ್ನಲಿ ಪೊತ್ತು ಸುಧೆಯನು ಸಾಧಿಸಿ ಹಗೆಯ ಹಿರಣ್ಯನ ಅಸುವನೆ ಹರಿಸಿ ಮಗುವಿನ ಭಕ್ತಿಗೆ ವ್ಯಾಪ್ತಿಯ ತೋರಿಸಿ ಬಾಗಿಲ ಕಾಯ್ದು ನೀ ಬಲಿಯ ರಕ್ಷಿಸಿ ಆ ಗರ್ವಿಸಿದರಸರ ಪರಶುವಿಂದ ವರೆಸಿ ಯಾಗರಕ್ಷಣೆಗೆ ನೀ ರಕ್ಷಕನೆನಿಸಿ ನೀಗಲು ಕುರುಕುಲ ಕಲಹವೆಬ್ಬಿಸಿ ಆಗಮ ಶಾಸ್ತ್ರಕೆ ಮಾಯವ ಕಲ್ಪಿಸಿ ಬೇಗ ಬಂದು ಹಯವೇರಿ ಮೆರೆವ- ಬೇಗದಿ ತೋರೋ ಶ್ರೀಪಾದವಾ 3
--------------
ಉರಗಾದ್ರಿವಾಸವಿಠಲದಾಸರು
ಮಧ್ವರಾಯರ ಶುದ್ಧಸಿದ್ಧಾಂತ ಪದ್ಧತಿಯಲಿ ಇದ್ದ ಮನುಜಗೆ ಕರಸಿದ್ಧವೈಯ್ಯಾ ಮುಕುತೀ ಪ ಬಿದ್ದು ಪೋಗುವುದಘ ವೃಂದಗಳೆಲ್ಲವು ಶುದ್ಧಜ್ಞಾನದಿ ಸತ್ಯ ಉದ್ಭರಿಪ ಹರಿ ವೇದಸಿದ್ಧವಿದುಕಾಣೋ ಅ.ಪ. ಖ್ಯಾತಿಯಿಂದಲಿಲಂಕೆ ಸುಟ್ಟು ಪ್ರೀತಿಲಿ ರಾಮನ ಭಜಿಸಿದರೋ ವ್ರಾತಖಳಕುಲ ಘಾತಿ ಮಾಡಿಸಿ, ವೀತಿಹೋತ್ರಗೆ ತುತ್ತು ನೀಡುತ ನಾಥರಾಮನ ವರದಿ ಮುಂದಿನ ಧಾತನಾಗಿ ಬರುವ ನಮ್ಮ 1 ದ್ವಾಪರದಲಿವರು ಪಾಪಿ ದುರ್ಯೋಧನನ ಭೂಪನಂದದಿ ಅಳಿಸಿ ಶ್ರೀಪತಿಸೇವೆನಡಿಸಿದರೋ ಶ್ಯಾಮಸುಂದರ ಕೃಷ್ಣರಾಯನ ನೇಮದಿಂದಲಿನಾಮ ಪಠಿಸುತ ತಾಮಸಾರನು ಯಮಗೆ ಕಳಿಸಿ ಕಾಮವಿಲ್ಲದೆ ಯಜ್ಞವನಡೆಸಿದ ಭಾಮೆ ದ್ರೌಪದಿ ಪ್ರೇಮ ಪತಿಯಾದ2 ಕಲಿಯುಗ ಕಳ್ಳರು ಸಲ್ಲದರ್ಥಗಳನ್ನು ಸುರರು ಮೊರೆಯಿಡಲು ವಲ್ಲಭನು ಶ್ರೀನಲ್ಲ ನಲ್ಲದೆ ಇಲ್ಲ ಜಗದೊಳು ಎಂದು ಸ್ಥಾಪಿಸಿ ಎಲ್ಲವೇದದ ಎಲ್ಲನಾದವು ನಲ್ಲ ಹರಿ ಯಂತೆಂದು ತೋರಿದ 3 ಜೀವೇಶ ಬೇಧವು ಪಂಚಬೇಧವು ಸುಳ್ಳು ತಾವೆ ನಾಥರು ಜಗಕೆ ತಾರತಮ್ಯವು ಠಕ್ಕೂ ಶಿವನೆ ಸರ್ವೋತ್ತಮ ಬ್ರಹ್ಮನಿರ್ಗುಣನು ಈ ವಿಧವಾದವ ವೇದವ್ಯಾಸರ ಕಂಡು ಬದರಿಲಿ ಸೂತ್ರ ಭಾಷ್ಯವ ಮಾಧವನೆ ಜಗದಾದಿಕಾರಣ ಮೋದ ನೀಡಿದ 4 ಮಧ್ವರಾಯರವಾಣಿ ಶುದ್ಧವೇದದಸಾರ ವೇದವ್ಯಾಸರ ಮತವು ಇದುಸಿದ್ಧ ಹರಿ ಆಣೆ ಕೇಳಿ ಗದ್ದರಾಗದೆ ಬಿದ್ದು ಇವರಡಿ ತಿದ್ದಿ ಮನವನು ಒದ್ದುದುರ್ಮತ ಪದ್ಮನಾಭನ ಪಾದಧ್ಯಾನದಿ ಅದ್ದಿ ಚಿತ್ತವ ಸಿದ್ಧಮಾಡಿರೋ ಮುಕ್ತಿಪಥವ 5 ಪರಿಸರನೀತನು ಪರಮಾಪ್ತನುಹರಿಗೆ ಗುರುವೊ ಜಗಕೆಲ್ಲ ಬರುವ ಬ್ರಹ್ಮನು ಕಾಣೋ ಓಡಿಸುಮಾರಿಮತಗಳ ಇಲ್ಲವೊ ಹರಿಯ ಧಾಮವು 6 ಮೂರುಹತ್ತು ಎರಡು ಗುರುಲಕ್ಷಣ ಕಾಯರು ನಿರುತ ಹಂಸೋಪಾಸನೆ ಮೂರುವಿಧದಲ್ಲಿ ಮಾಳ್ವರು ಭಾರತೀಶನ ಸಾರಗುಣಗಳ ಸೂರಿಗಳಿಗಳವಲ್ಲ ಅರಿಯಲು ಚರಣಪಿಡಿಯಿರೋ 7 ದಶದಿಶೆಗಳ ವಳಗೆ ಬಿಸಜನಾಭನ ಕೀರ್ತಿ ಎಸೆದು ಹಿಗ್ಗುವ ನಮ್ಮ ಅಸಮ ಮಧ್ವರನೋಡೋ ನಾಶಮಾಡುತ ಭಾಸಕರು ಎಂದೆನಿಸಿದ 8 ಅನಿಲದೇವನ ನಾಮ ಕನಸಿಲಾದರು ಒಮ್ಮೆ ನೆನೆದವನೇ ಧನ್ಯ ಮಾನ್ಯನೋ ಜಗದೊಳಗೆ ದೀನನೆನಿಸುತಲಿ ದಾನಿ ಜಯಮುನಿ ಅನಿಲನಂತರ ಶ್ರೀನಿವಾಸ ಕೃಷ್ಣವಿಠಲಗೆ ಶರಣು, ಶರಣು, ಶರಣೆಂದು 9
--------------
ಕೃಷ್ಣವಿಠಲದಾಸರು
ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಪ ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ ಲಕ್ಷಕ್ಕೊಂದಾದರು ಮೊದಲೇ ಇಲ್ಲಾ ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ ಅಕ್ಷಿ ಉಂಟಾದವಗೆ ಅದರಿಂದ ಫಲವೇನು 1 ಜ್ಞಾನ ಕರ್ಮರ ಲಂಬನ ಮಾಡಿ ತಿಳಿದಂಥ ಮಾನವನು ನಾನಲ್ಲ ಎಂದೆಂದಿಗೂ ಜ್ಞಾನಿಗಳ ಮನೆಯ ತೊಂಡರ ಪಾದರಕ್ಷೆಯಾ ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ 2 ರಾಗತಾಳ ಭೇದ ಜತೆ ಜಾಣತನದಿಂದ ವಾಗರ ನಿಮಿತ್ಯ ಪೇಳಲಿಲ್ಲಾ ಹ್ಯಾಗಾದರೇನು ನಾರಾಯಣಚ್ಯುತನೆಂದು ಕೂಗಿ ಕಾಲವ ಕಳದೆ ಜನುಮ ಸಾಧನಕೆ 3 ಬೆಲ್ಲ ಕರದಲಿ ಪಿಡಿದು ಆವನಾದರೇನು ಎಲ್ಲಿ ತಂದರೆ ಅದು ಸೀ ಎಲ್ಲವೇ ಬಲ್ಲನವ ನರಿಯನಿವನೆಂದು ಆಡದಿರಿ ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ 4 ಹರಿದೈವವೆಂದು ತಾ ಉತ್ತರೋತ್ತರ ತಿಳಿದು ಗುರುಮಧ್ವಮತದಲ್ಲಿ ಲೋಲಾಡಲು ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ5
--------------
ವಿಜಯದಾಸ