ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ
ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು
ಎಲ್ಲರೊಳಗೆಲ್ಲ ತಾನಾಗಬೇಕು
ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ
ಬೆಲ್ಲ ಸವಿದ ಮೂಕನಂತಾಗಬೇಕು 1
ಬಲ್ಲವತವನು ನೀಡಿ ಬಲ್ಲನೆತಾನಾಗಿ
ಬಲ್ಲರಿಯೆನೆಂಬುದನು ಈಡ್ಯಾಡಬೇಕು
ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು
ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2
ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು
ದೇಹ ವಿದೇಹದಲ್ಲಿ ಬಾಳಬೇಕು
ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3