ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮಶೋಧನೆ ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ ಪ ಇಲ್ಲಿ ಯಾರಿಲ್ಲೆಂದು ಮೆಲ್ಲನೆ ಪರಸತಿಯ ಕಳ್ಳತನದಲಿ ಕೂಡಿ ಸುಳ್ಳು ಹೇಳಿ ಎಲ್ಲ ಕಡಿ ದಿಗ್ದೇವ ತತ್ವೇಶರಲ್ಲಿರುವ ಪುಲ್ಲನಾಭನೆ ನಿನ್ನ ವ್ಯಾಪಾರವರಿಯೆ 1 ಅರುಣನುದಯದಲೆದ್ದು ಪರರ ವಂಚನೆಗಾಗಿ ಅರಿಯದೆ ದ್ರವರೂಪ ಮನರೂಪ ಮೊದಲಾದ್ದು ಅರಿಷಟ್ಕರಿಂದ ಪರರೊಡವಿಯನು ಬಯಸುವೆನು 2 ಅಂಗಡಿಯ ತೆರದಿ ನಾನ್ಹಿಂಡುಗೊಂಬೆಗಳ್ಹೂಡಿ ಅಂಗ ಚಲಿಸದೆ ಮೂಗು ಹಿಂಡುತಲೆ ಕುಳಿತು ಅಂಗಜ ಜನಕ ಶ್ರೀ ನರಹರಿಯ ಧ್ಯಾನಿಸದೆ ಭಂಗಕೆ ಗುರಿಮಾಳ್ವ ಮಣ್ಣು ಚಿಂತೆಪೆನೊ 3
--------------
ಪ್ರದ್ಯುಮ್ನತೀರ್ಥರು
ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ಮುದ್ದುತಂಗಿಯರು ಕರೆಯಲು ಬಂದಾರೆ ಪ. ಸಾಲು ದೀವಿಗೆಯಂತೆ ಬಾಲೆಯರು ನಿಂತಾರೆ ಮ್ಯಾಲೆ ಸುಭದ್ರೆ ದ್ರೌಪತಿಯೆ ಇಂದೀವರಾಕ್ಷಿಮ್ಯಾಲೆ ಸುಭದ್ರೆ ದ್ರೌಪತಿ ನುಡಿದಳು ಮೇಲೆಂದು ನಿಮ್ಮ ದೊರೆತನ ಇಂದೀವರಾಕ್ಷಿ 1 ಕೃಷ್ಣನ ಮಡದಿಯರು ಎಷ್ಟು ದಯವಂತರು ಅಷ್ಟೂರಲ್ಲಿದ್ದ ಗರುವನೆಅಷ್ಟ್ಟೂರಲ್ಲಿದ್ದ ಗರುವನೆ ತುರುಬಿಗೆ ಮಲ್ಲಿಗೆ ಮಾಡಿ ಮುಡಿದಾರೆ2 ಫುಲ್ಲನಯನರ ದೈವ ಎಲ್ಲಿವರ್ಣಿಸಬೇಕುಎಲ್ಲರಲ್ಲಿದ್ದ ಗರುವನೆ ಎಲ್ಲರಲ್ಲಿದ್ದ ಗರುವನೆ ತಮ್ಮಲ್ಲಿಟ್ಟುಕೊಂಡಾರೆವಿನಯದಿ ಸಖಿಯೆ ಇಂದೀವರಾಕ್ಷಿ 3 ಹಿರಿಯ ಅತ್ತಿಗೆ ತಾನು ಗರುವಿನ ಸೀರೆಯನುಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಕರೆಯಲಿ ನಮ್ಮ ಇದುರಿಗೆ ಇಂದೀವರಾಕ್ಷಿ4 ಮಡದಿ ಸತ್ಯಭಾಮೆ ಬಡಿವಾರದ ಸೀರೆಯನುಟ್ಟುಕಡುಕೋಪವೆಂಬೊ ಕುಪ್ಪುಸವಕಡುಕೋಪವೆಂಬೊ ಕುಪ್ಪುಸವ ತೊಟ್ಟುಒಡಗೂಡಿ ನಮ್ಮ ಕರೆಯಲು ಇಂದೀವರಾಕ್ಷಿ5 ಅಷ್ಟು ಮಡದಿಯರು ಅತಿ ಸಿಟ್ಟಿನ ಸೀರೆಯನುಟ್ಟುಅಷ್ಟ ಮದವೆಂಬೊ ಕುಪ್ಪುಸವಅಷ್ಟ ಮದವೆಂಬೊ ಕುಪ್ಪುಸವ ತೊಟ್ಟುಧಿಟ್ಟಯರು ನಮ್ಮ ಕರೆಯಲು ಇಂದೀವರಾಕ್ಷಿ6 ಭಾಪುರಿ ಅತ್ತಿಗೆಯರು ಕೋಪದೊಸ್ತಗಳಿಟ್ಟುಭೂಪರಾಮೇಶನ ಮಡದಿಯರುಭೂಪರಾಮೇಶನ ಮಡದಿಯರು ಬಂದರೆದ್ರೌಪತಿ ದೇವಿಯ ಕರೆಯಲು ಇಂದೀವರಾಕ್ಷಿ 7
--------------
ಗಲಗಲಿಅವ್ವನವರು
ಸುಮ್ಮನಿರಬಾರದೆ ಮನವೆ ನೀನು ಸುಮ್ಮನಿರಬಾರದೆ ಹಮ್ಮುಅಹಂಕಾರ ಹೆಮ್ಮೆಗಳೆದು ಪನ್ನಗಾದ್ರಿಯ ಧ್ಯಾನಮಾಡುತ್ತ ಪ ಚಿಂತೆಯನು ತೊರೆದು ಮನವೆ ಲಕ್ಷೀಕಾಂತನೊಳು ಬೆರೆದು ಅಂತರಂಗದಿ ಕಂತುಜನಕನ ಸಂತತವಿಟ್ಟು ಪಂತವನು ಬಿಟ್ಟು 1 ಆಸೆಯನು ತೊರೆದು ಮನವೆ ನೀ ಶ್ರೀಶನೋಳು ಬೆರೆದು ಘಾಸಿಯಾಗದೆ ವಾಸುದೇವನ ದಾಸನಾಗಿ ಉಲ್ಲಾಸದಿಂದಲೆ 2 ಯಾರು ಬೈದರೇನು ಈ ದೇಹ ಇನ್ಯಾರು ಕೊಯ್ದರೇನು ಘೋರಮಾಯೆ ದೂರಮಾಡಿ ನೀ ವಾರಿಜಾಕ್ಷನ ಪಾದವನು ಸೇರಿ 3 ಎಲ್ಲರಲ್ಲಿ ವಾಸುದೇವನಿಲ್ಲದಿಲ್ಲೆನುತ ಹುಲ್ಲು ಹುಳುವಿನೊಳು ಸೊಲ್ಲು ಪಾಡುತ್ತ 4 ಸೃಷ್ಟಿಯೊಳಗಧಿಕ ಮೂಡಲಗಿರಿ ಬೆಟ್ಟದೊಳಗಿರುವ ದಿಟ್ಟವೆಂಕಟನ ಮುಟ್ಟಿ ಭಜಿಸಿ ನೀ ಮಾಡಿದಷ್ಟು ಪಾಪವ ನಷ್ಟ ಮಾಡುತ್ತ 5
--------------
ಯದುಗಿರಿಯಮ್ಮ