ಯಲ್ಲರಮ್ಮನಲ್ಲವೆ ಸಿರಿದೇವಿ | ಎಲ್ಲರಮ್ಮನಲ್ಲವೆ ||
ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಪ
ಆಲದೆಲೆಯ ಮೇಲೆ ತನ್ನ ಪುರುಷನಂದು |
ಕಾಲವರಿತು ಪವಡಿಸಿರಲು ||
ವಾಲಗವನು ಮಾಡಿ ಕೊಂಡಾಡಿ ಜೀವರ |
ಮೂಲ ಕರ್ಮಂಗಳು ತೀರುವಂತೆ ಮಾಡಿದ 1
ಆಮೋಘ ವೀರ್ಯ ಗರ್ಭದಿ ಧರಿಸಿ ತಾ |
ಬೊಮ್ಮಾಂಡವನೆ ಪೆತ್ತ ಲೋಕಾಮಾತಾ ||
ಸುಮನಸರಿಗೆ ಕಡೆಗಣ್ಣ ನೋಟದಿ |
ಆ ಮಹಾ ಪದವಿಯ ಕೊಡುವ ಭಾಗ್ಯವಂತೆ 2
ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ
ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು ||
ನಿತ್ಯ 3