ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ನ್ಯಾಯವೋ ಭಾವಜರಿಪುವಿನುತ ನಿಂದು ದಾವ ನ್ಯಾಯವೊ ಪ ಆವ ನ್ಯಾಯವೋ ದೇವ ದೇವ ಮಾವಕಂಸಜೀವಘಾತಕ ಅ.ಪ ಕಪ್ಪು ವರ್ಣನು ಭಕ್ತಜನರ ಲ್ಲಿರ್ಪೆ ಸದಾ ನೀನು ನಿ ನ್ನ ಪಾದದಿ ತಪ್ಪು ಎಲ್ಲನು ಒಪ್ಪಿಬಂದಿಹ್ಯ ಭಕ್ತಜನರ ತಪ್ಪು ಒಪ್ಪಿ ಕ್ಷಮಿಸಿ ದಯದಿ ದುರಿತ ನಿವೃತ್ತಿಗೈದು ಅಪ್ಪಿಕೊಂಡು ಸಲಹದಿರುವಿ 1 ತಂದೆ ತಾಯಿ ನೀನು ಎಂದು ನಂಬಿ ಬಂದು ಬಿದ್ದೆನು ನಿನ್ನ ಪಾದಕೆ ಮಂದಭಾಗ್ಯನು ನೊಂದು ಬೆಂದು ಸಂಸಾರವೆಂಬ ಸಿಂಧುವಿನೊಳು ತಾಪಬಡುತ ಬಂದು ಮೊರೆಯಬಿದ್ದ ಕಂದನ ಮಂದರಮಂದಿರ ಸಲಹದಿರುವಿ 2 ನಿನ್ನನರಿಯದ ಅಜಮಿಳನು ಬಿನುಗನೆನಿಸಿದ ಪಾಪಗೈದವ ಗಣನೆಯಿಲ್ಲದ ಕನಿಕರದಿಂದ ವನಿಗೊಲಿದು ಘನಪದವನಿತ್ತು ಪೊರೆದೆ ಚಿನುಮಯಾತ್ಮ ಸಿರಿಯರಾಮ 3
--------------
ರಾಮದಾಸರು
ಎಲ್ಲನು ನಿನಗೆ ಕೂಡಿತಯ್ಯ ಹರಿ ಪುಲ್ಲನಾಭ ದಯ ಮಾಡಯ್ಯ ಪ ಖುಲ್ಲನು ನಾಬಲು ಎಲ್ಲಿಯುಸಲ್ಲದೆ ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ ಧೃಢಗುಣ ಎನ್ನೊಳಿಲ್ಲಯ್ಯ ಬಲು ನುಡಿ ಹೀನ ನಾಕಡು ಪಾಪ್ಯಯ್ಯ ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ 1 ಪರರದ್ರವ್ಯವಪಹರಿಸಿದೆನೊ ನಾ ಪರಮನೀಚನಾಗಿ ಚರಿಸಿದೆನೊ ಅಗಣಿತ ದುರಿತವನುನಾ ಜರೆಯದೆ ಪರಿಪರಿ ಮಾಡಿದೆನೊ ಮರೆವೆಲಿ ಮಾಡಿದ ಪರಮ ಎನ್ನತಪ್ಪು ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ 2 ಶರಣಾಗತ ವತ್ಸಲನೆಂದು ನಿನ್ನ ಮರೆಯಹೊಕ್ಕೆನೆಯ್ಯ ದಯಾಸಿಂಧು ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ ದುರಿತದಿ ಕಡೆ ಹಾಯ್ಸಯ್ ಇಂದು ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ 3
--------------
ರಾಮದಾಸರು
ಬೇಡುವುದೂ ಬಲು ಕಷ್ಟ ಪ ನೀಡದಿದ್ದವನೇ ನಷ್ಟ ಅ.ಪ. ನಾಚಿಕೆ ಎಲ್ಲನು ತೊರೆದು ಮಹಾ ನೀಚರಿಗೆ ಬಾಯ್ತೆರದು 1 ಕೊಟ್ಟಾರೆಂಬ ದುರಾಶಾ ಕ್ರಿಯಾ ಭ್ರಷ್ಟರರಿಯರೂ ಕ್ಲೇಶಾ 2 ಚಿತ್ತವೃತ್ತಿಯನು ಕಂಡೂ ಅಧಮರ ಹೊತ್ತುಹೊತ್ತಿಗೆ ಕಾಣಿಸಿಕೊಂಡು 3 ಗುಣಹೀನರ ಕೊಂಡಾಡೀ ಬಂದು ಕ್ಷಣಕ್ಷಣಕವರನು ನೋಡೀ 4 ಶ್ರೀದವಿಠಲನ ಬಿಟ್ಟೂ ಅಧಮಾಧಮರಿಗೆ ದೈನಬಟ್ಟು 5
--------------
ಶ್ರೀದವಿಠಲರು