ಎಲ್ಲಡಗಿದನೊ ಹರಿ ಎನ್ನಯ ಧೊರಿ ಪ
ಎಲ್ಲೆಲ್ಲಿ ಪರಿಪೂರ್ಣನೆಂಬೊ ಸೊಲ್ಲನು ಮುನ್ನಾ
ಮಲ್ಲಮರ್ದನ ಪುಲ್ಲಲೋಚನ ಹರಿಅ ಪ
ಶರಣೆಂದವರ ಕಾಯ್ವ ಕರುಣಾ ಸಮುದ್ರನು
ಕರುಣನ ಅರಿಯದೆ ಹರಿಣಾಂಕ ನಿಭವಕ್ತ್ರ 1
ಕರಿರಾಜನ ಮೊರೆ ಕೇಳಿ ತ್ವರಿತದಿಂದ
ಗರುಡನೇರಿ ಬಂದ ಗರ್ವರಹಿತ ದೇವ 2
ವರ ಭುಜದಲಿ ಶಂಖ ಚಕ್ರವ ಧರಿಸಿದ
ಪರಮೇಷ್ಠಿ ಜನಕನು 3
ವನಜ ಮಲ್ಲಿಗೆ ಜಾಜಿ ವನದಲ್ಲಿ ಚಲಿಸುವ
ವನಿತೆಯರಾಟಕ್ಕೆ ಮನಮೆಚ್ಚಿ ನಡೆದಾನೊ 4
ಹಿಂಡು ಗೋಪಾಲರನು ಕಂಡು
ಕಾವ ವಿಷಯಕ್ಕಾಗಿ ಕಮಲಲೋಚನ ಹರಿ5
ಇನ ಚಂದ್ರ ನಿಭವಕ್ತ್ರ ಕನಕಾಂಬರಧರ
ವಿನಯದಿಂದಾಡುತ್ತ ಮುನಿಗಳಲ್ಲಿಗೆ ದೇವ 6
ಗಜ ಧ್ರುವ ಬಲಿ ಪಾಂಚಾಲಿ ವರದನೆಂಬ
ನಿಜವಾದ ಬಿರುದುಳ್ಳ ವಿಜಯವಿಠ್ಠಲರೇಯ7