ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಯಾಡಿ ನೀ ಬಂದ್ಯೋ ಹರಿ ಫುಲ್ಲಲೋಚನ ಕೃಷ್ಣ ಧ್ರುವ ಬಲಿ ಮಹಿಮರನೆಲ್ಲ ಸಂರಕ್ಷಿಸಿ ಮಲ್ಲದೈತ್ಯರ ಹಲ್ಲು ಮುರಿದು ನೀ ಬಂದ್ಯೊ 1 ಸುಗಮ ಸುಪಥದೋರಿ ನಿನ್ನ ಉಗಮ ಸಾರಿ ನೀ ಬಂದ್ಯೊ ನಗ ನೆಗಹಿ ನಿಂದು ಜಗದೋದ್ಧಾರವ ಮಾಡಿ ನೀ ಬಂದ್ಯೋ 2 ಶರಣ ರಕ್ಷಕನಾಗಿ ನಿನ್ನ ಕರುಣ ನೀ ಬೀರಿ ಬಂದ್ಯೋ ತರಳಗೊಲಿದು ಧÀರಿ ಮೂರಡಿಯೆನೆ ಮಾಡಿ ಪರಶುಧರನಾಗಿ ಆಡಿ ನೀ ಬಂದ್ಯೊ 3 ಮೊರೆಯ ಹೊಕ್ಕವರಿಗೆ ಪದ ಸ್ಥಿತವನಿತ್ತುನೀ ಬಂದ್ಯೊ ಸುರರ ಸ್ಥಾಪನೆ ಮಾಡಿ ತುರುಗಳ ಕಾಯಿದು ಪರ ನಾರೇರ ವ್ರತವಳಿದು ನೀ ಬಂದ್ಯೋ 4 ನೀನೆ ರಾವುತನಾಗಿ ನಿನ್ನ ಖೂನ ನೀ ದೋರಿ ಬಂದ್ಯೊ ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜ ನೀನೆ ನೀನಾಗೆನ್ನ ಹೊರಿಯಲು ಬಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲ್ಯಾಡಿ ಬಂದ್ಯೋ ಮುದ್ದು ರಂಗಯ್ಯಾ ನೀ - * ನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಪ ಆಲಯದೊಳಗೆ ನೀನಾಡದೆ ಬೆಣ್ಣೆ ಪಾಲು ಸಕ್ಕರೆಯನೊಲ್ಲದೆ ಚಿಕ್ಕ ಬಾಲೇಯರೊಳು ನೀನಾಡದೆ ಬಾಲಯ್ಯ ನೀಯೆನ್ನ ಕಣ್ಣ ಮುಂದಾಡದೆ 1 ಬಿಟ್ಟ ಮುತ್ತಿನ ಬೊಗಸೆ ಕಂಗಳು ಫಣಿಯೊಳಿಟ್ಟ ಕಸ್ತೂರಿ ತಿಲಕ ಗಂಧವು ದಿಟ್ಟತನದಿ ಬರುವ ಅಂದವು ಮುದ್ದು ಕೃಷ್ಣ ನೀಯೆನ್ನ ಕಣ್ಣ ಮುಂದಾಡದೆ 2 ಅಷ್ಟದಿಕ್ಕಲಿ ಅರಸಿ ಕಾಣದೆ ಬಾಳ ದೃಷ್ಟಿಗೆಟ್ಟೆನೊ ನಿನ್ನ ನೋಡದೆ - ನ್ನೆಷ್ಟು ಪೇಳಲಿ ಹೇಳಬಾರದೆ ಶ್ರೀದ - ವಿಠಲ ನೀಯೆನ್ನ ಕಣ್ಣ ಮುಂದಾಡದೆ 3
--------------
ಶ್ರೀದವಿಠಲರು