ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೂಗಿರೆ ರಂಗನ್ನ ತೂಗಿರೆ ಕೃಷ್ಣನತೂಗಿರೆ ಅಚ್ಯುತಾನಂತನ ಪ.ತೂಗಿರೆ ವರಗಿರಿ ಅಪ್ಪ ತಿಮ್ಮಪ್ಪನತೂಗಿರೆ ಕಾವೇರಿ ರಂಗಯ್ಯನ ಅಪಇಂದ್ರಲೋಕದೊಳುಪೇಂದ್ರ ಮಲಗಿಹನೆಬಂದೊಮ್ಮೆ ತೊಟ್ಟಿಲ ತೂಗಿರೆಮಂದಗಮನೆಯರು ಚೆಂದದಿ ಪಾಡುತನಂದನ ಕಂದನ ತೂಗಿರೆ 1ನಾಗಲೋಕದಲ್ಲಿ ನಾರಾಯಣ ಮಲಗಿಹನೆಹೋಗಿ ನೀವ್ ತೊಟ್ಟಿಲ ತೂಗಿರೆನಾಗವೇಣಿಯರು ನಾಲ್ಕು ನೇಣನು ಪಿಡಿದುಭಾಗ್ಯವಂತನೆಂದು ತೂಗಿರೆ 2ಜಲಧಿಯೊಳಾಲದ ಎಲೆಯಲ್ಲಿ ಮಲಗಿದಚೆಲುವನ ತೊಟ್ಟಿಲ ತೊಗಿರೆಸುಲಭ ದೇವರ ದೇವ ಬಲಿಬಂಧಮೋಚಕಎಳೆಯನ ತೊಟ್ಟಿಲ ತೂಗಿರೆ 3ಸೂಸುವ ಮಡುವಿನೊಳ್ ಕಾಳಿಯನ ತುಳಿದಿಟ್ಟದೋಷವಿದೂರನ ತೂಗಿರೆಸಾಸಿರ ನಾಮದ ಸರ್ವೋತ್ತಮನೆಂದುಲೇಸಾಗಿ ತೊಟ್ಟಿಲ ತೂಗಿರೆ 4ಅರಳೆಲೆ ಮಾಗಾಯಿ ಕೊರಳ ಪದಕ ಸರತರಳನ ತೊಟ್ಟಿಲ ತೂಗಿರೆಉರಗಾದ್ರಿವಾಸ ಶ್ರೀ ಪುರಂದರವಿಠಲನಹರುಷದಿ ಪಾಡುತ ತೂಗಿರೆ 5
--------------
ಪುರಂದರದಾಸರು