ಏನು ಮರುಳಾಗುವೆಯೇ ಎಲೆಮಾನವ
ನಿನ್ನ ಮಾನಿನಿಯ ಗುಣಕೆ ನೀ ಹಿಗ್ಗಿ ಹಿಗ್ಗಿ ಪ
ದಾನ ಧರ್ಮಗಳ ಕೊಡಬೇಕೆಂದರೊಡ ಬಡಲು
ಹೀನ ಗುಣಗಳನೆ ತಾ ಸೇವಿಸುವಳು
ಜ್ಞಾನ ಮೋಕ್ಷಾದಿಗಳ ಹಾದಿಯನುಕಟ್ಟಿ ಭವ
ಕಾನನವನೆ ಹೊಗಿಸಿ ತೊಳಲಿಸುವಳು 1
ನರಕವನು ತನ್ನಲ್ಲಿ ನೆಲೆಮಾಡಿ ಕೊಂಡಿಹಳು
ಪರಿಪರಿಯ ಮೋಹಗಳ ಬೀಸುತಿಹಳು
ಸ್ಮರನ ಬಾಣವ ಮಾಡಿ ಸಾಲು ಗೊಲೆಕೊಲ್ಲುವಳು
ಅರಿಯದವರಂತೆ ಮಿಣ್ಣಗೆ ಇರುವಳು 2
ತನ್ನಮನ ಬಂದಂತೆ ಚರಿಸುವಳು ಪಗಲಿರುಳು
ಕನ್ನಗೊಯ್ಕರ ವೋಲು ಕೊರೆಯುತಿಹಳು
ಭಿನ್ನಭಾವದಿ ನಡೆದು ಮನೆಯ ಪಾಲ್ಮಾಡುವಳು
ಕಣ್ಣಿನೊಳು ಕಂಡೊಡವೆಗಳನಿರಿಸಳು 3
ಸುದತಿ ಯಾಕಾರೆ ಯಾಗಿಹಳು
ನೋಯೆ ನುಡಿವಳು ಕಂಡ ಕಂಡವರೊಳು
ಹೋಯೆಂದು ಕೂಗುವಳು ಶಿಕ್ಷಿಸಳು ನಿನ್ನನುರೆ
ಬಾಯೊಳಗೆ ಭಯಬಿಡಿಸಿ ಹಾಗಿಸುವಳು 4
ಕಾಮ ಕ್ರೋಧಾದಿಗಳ ಕೀಲ ಬಲಗೊಳಿಸುವಳು
ಪ್ರೇಮ ಗೆಡಿಸುವಳೆಲ್ಲ ಬಾಂಧವರನು
ಭೂಮಿಯೋಳಗಧಿಕ ಭೀಮನ ಕೋಣೆ
ಲಕ್ಷ್ಮೀಪತಿಯ ನೆನೆನೆನೆದು ಸಖಿಯಾಗು ಕಂಡ್ಯಾ 5