ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದು ನಂದೆಂದೇಕೆ ಬಂಧ ಪಡೆಯುವಿಯೋ ಮಂದಮನ ತಂದೆ ಗೋವಿಂದ ತೋರುವ ಜಗಕೆ ಪ ಚಳಿಗಾಳಿ ನಿನ್ನದೆ ಮಳೆಬೆಳೆ ನಿನ್ನದೆ ಎಲೆಮನಸೆ ನೋಡು ನೀನೊಳಿತಾಗಿ ತಿಳಿದು 1 ನಿಶೆದಿನ ನಿನ್ನದೆ ವಸುಧೆಸ್ಥಿತಿ ನಿನ್ನದೆ ಪಶುವಿನಂದದಿ ಮನಸೆ ವ್ಯಸನದಲಿ ಬಿದ್ದು 2 ಆರುಮಾಡಿದ ಸೃಷ್ಟಿಗ್ಹಾರೈಸಿ ಕೆಡುವಿಯೋ ಮಾರಪಿತ ಶ್ರೀರಾಮ ಪಾದವಾರಿಜನಂಬದೆ 3
--------------
ರಾಮದಾಸರು
ಸಾಸಿರ ಮಾತುಗಳ್ಯಾಕೊ ಎಲೆಮನ ಕೇವಲ ಹರಿನಾಮವೊಂದೆ ಸಾಕೊ ಪ ಸ್ನಾನವುಯಾಕೊ ಮೌನವುಯಾಕೊ ದಾನವಾರಿಯಧ್ಯಾನವೊಂದೆ ಸಾಕೊ 1 ಮಂತ್ರವುಯಾಕೊ ತಂತ್ರವುಯಾಕೊ ಮಂತ್ರಮೂರ್ತಿ ಚಿಂತೆಯೊಂದೆ ಸಾಕೊ 2 ಹೋಮವುಯಾಕೊ ನೇಮವುಯಾಕೊ ಸ್ವಾಮಿ ಶ್ರೀರಾಮನ ಭಕ್ತಿಯೊಂದೆ ಸಾಕೊ 3
--------------
ರಾಮದಾಸರು