ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ಪ ನೆಲೆಗೆಡಿಸಿ ಅದನಿಂದು ಕೆಡಹುತಿರುವೀ ಅ.ಪ ಪ್ರಾರಬ್ಧಕರ್ಮವೆಂತೆಂಬ ಹಳ್ಳವ ತೋಡಿ ಆರು ಜನ ಕೆಲಸಗಾರರನಲ್ಲಿ ಕೂಡಿ ಮೀರಿ ಮಾಯೆಯ ಭಾರಿ ಕಲ್ಕೆಸರುಗಳ ಹೂಡಿ ಭಾರಿನೆಲಗಟ್ಟು ರಚಿಸಿದರೊಂದುಗೂಡಿ 1 ಎಲುವಿನ್ಹಂದರ ಹರಹಿ ಬಲಿದ ಮಾಂಸದ ಗೋಡೆಗಳ ಮೇಲೆ ಚೆÀಲುವ ಚರ್ಮ ಹೊದ್ದಿಸಿ ಜಲರಕ್ತ ಕಾಲ್ವೆಗಳ ಹರಿಸಿ | ಸ್ವಚ್ಛತೆಯಿರಿಸಿ ಬಲುಉಸಿರುಬಲದಿಂದಲದ ಚಲನಗೊಳಿಸಿ 2 ಐದು ಇಂದ್ರಿಯಗಳೇ ದ್ವಾರ ಕಿಟಕಿಗಳಾಗೆ ಐದುಬಗೆ ವಿಷಯಗಳು ಆಹಾರವಾಗೆ ವೈದು ಯಮಪುರಿಗೆ ತಲ್ಪಿಸÀಲುಣಿಸನಿದನುಂಡು ಐದಿದುದು ನರಕಕೂಪಕೆ ಜೀವದಂಡು 3 ಕ್ಷೇತ್ರಜ್ಞ ನೀನು ನಿನ್ನಯ ಕಣ್ಣಮುಂದಿಂತು ಗಾತ್ರದಲಿ ವಾಸಿಪ ಜೀವನು ನಿನ್ನ ಮರೆತು ಕ್ಷೇತ್ರಘಾತಕಕಾರ್ಯವೆಸಗುತಿರಲಂದಂದೆ ನೇತ್ರ ಹಸ್ತಗಳ ಛೆÉೀದಿಸದೆ ಉಳುಹಿದೆಯೆಂತು 4 ಸರ್ವಸ್ವತಂತ್ರನೀ ಜೀವ ಪರತಂತ್ರನವ ಗರ್ವ ಅಜ್ಞಾನ ಅಂಧತೆಗಳಲಿ ಸಿಲುಕಿ ಸರ್ವ ದುಷ್ಕರ್ಮಗಳ ನಡೆಸಿ ಕೆಡಸಿಹನಿದನು ಸರ್ವದಾ ಕ್ಷಮಿಸಿ ಪೊರೆ ರಘುರಾಮವಿಠಲ 5
--------------
ರಘುರಾಮವಿಠಲದಾಸರು
ಕಂಸಾರಿನಿಜಪಾದ ಮರೆಯದಿರೆಲೆ ಮನವೆ ಸಂಸಾರಸುಖ ನೆಚ್ಚಿ ಭ್ರಮೆಯೊಳಗೆ ಬಿದ್ದು ಪ ಜನನಿಜನಕರುವನಿತೆತನುಜನುಜರಿವರೆಲ್ಲ ನಿನಗ್ಹಿತದಶತ್ರೆಂದು ನೆನೆಸಿಕೊಳ್ಳದಲೆ ಅನುದಿನವು ದುಡಿದುಡಿದು ತನುಮನಧನವನಿತು ಬಿನುಗರಿಗೆ ಸಲಿಸಿ ನರಕಕುಣಿಯೊಳಗೆ ಬಿದ್ದು 1 ಹೊಲಸುಕಿಲ್ಬಿಷಮಾಂಸ ಮೇಲೆ ಚರ್ಮದ ಹೊದಿಕೆ ಬಲವಾಗಿ ಬಿಗಿದ ನರ ಎಲುವಿನ್ಹಂದರವು ತೊಳೆಯದಿರ್ದರೆ ನಿಮಿಷ ಹೊಲಸುನಾರುವ ಮಹ ಮಲಭಾಂಡಕ್ಕೊಲಿದು ಬಲು ಸಿಲುಕಿ ಬಂಧದೊಳು 2 ಜಡದಮೇಲಣ ಲಿಪಿಯು ಒಡನೆ ಮಾಯಪ್ಪಂತೆ ಪೊಡವಿಯ ಸುಖ ನಿಮಿಷದಡಗಿ ಪೋಗುವುದು ಅಡಿಗಡಿಗೆ ಎಡೆಬಿಡದೆ ಒಡೆಯ ಶ್ರೀರಾಮನಲಿ ದೃಢವಾಗಿ ನೆರೆನಂಬಿ ಪಡಕೋ ನಿಜಸುಖವ 3
--------------
ರಾಮದಾಸರು
ಜನಿಸಿ ನಾ ಬುವಿಯೊಳು ನಿನಗೆ ದುಡಿಯುವುದಾಯ್ತು ಎನಗೇನುಫಲ ಪೇಳು ಮಾಯವೆ ಎಲೆ ಜೀವವೆ ಪ ನಿನಗೆ ನೀ ದುಡಿಯುವಿ ಎನಗೆ ದುಡಿಯುವುದೇನು ದಿನಸರಿಯದೆನುವುದು ನ್ಯಾಯವೆ ಎಲೆ ಕಾಯವೆ ಅ.ಪ ಘನರೋಗ ತಾಪತ್ರವನುಭವಿಸುವುದೆಲ್ಲ ನಿನಗಾಗಲ್ಲೇನು ಪೇಳು ಮಾಯವೆ ಎಲೆ ಜೀವವೆ ನಿನಗೆ ಬಂದ ಕರ್ಮವನುಭವಿಪೆಯಲ್ಲದೆ ಎನಗಾಗೆನುವುದು ನಿಜನ್ಯಾಯವೆ ಎಲೆ ಕಾಯವೆ 1 ಬನ್ನ ಬಡುವೆನಲ್ಲ ಕರ್ಮ ಮಾಯವೆ ಎಲೆ ಜೀವವೆ ಎನ್ನ ಜೋಪಾನವು ನಿನ್ನಿಂದಲೆಂಬುವುದು ಮಣ್ಣುಗೊಂಬೆ ನಿನಗೆ ನ್ಯಾಯವೆ ಎಲೆ ಕಾಯವೆ 2 ಚಳಿಮಳೆಬಿಸಿಲಿನ ಬಲುತಾಪದಲಿ ನಿನ್ನ ಸಲಹುವರಾರ್ಹೇಳು ಮಾಯವೆ ಎಲೆ ಜೀವವೆ ಚಳಿಮಳೆಬಿಸಿಲಿನ ಬಲುತಾಪ ಎನಗೆಲ್ಲಿ ಎಲುವಿನ್ಹಂದರ ನಿಂದೀನ್ಯಾಯವೆ ಎಲೆ ಕಾಯವೆ 3 ಭಿನ್ನ ಮಾತುಗಳೇನೋ ಮಾಯವೆ ಎಲೆ ಜೀವವೆ ನಿನ್ನದು ದಾವೂರು ನನ್ನದು ದಾವೂರು ಎನ್ನ ಸರಿಗಟ್ಟುವುದು ನ್ಯಾಯವೆ ಎಲೆ ಕಾಯವೆ 4 ನಾನಿಲ್ಲದಿರೆ ನಿನ್ನ ಖೂನವರಿವರಾರು ನೀನೆ ಪೇಳೆಲೋ ನಿಜ ಮಾಯವೆ ಎಲೆ ಜೀವವೆ ಹೀನನೆ ನೀನೆನ್ನ ಖೂನವರಿಯದೆ ಬಿನಗು ಶ್ವಾನನಂತೊದರುವುದು ನ್ಯಾಯವೆ ಎಲೆ ಕಾಯವೆ 5 ಹೊನ್ನೂ ಹೆಣ್ಣು ಮಣ್ಣು ಎನ್ನಿಂದ ಪಡೆದು ನೀ ಧನ್ಯನೆನಿಸುವೆಯಲ್ಲ ಮಾಯವೆ ಎಲೆ ಜೀವವೆ ನಿನ್ನಗದರ ಫಲ ಎನ್ನಗೇನೆಲೆ ಪಾಪಿ ನಿನ್ನ ಮೋಹಿಸಿ ನಾನು ಕೆಡುವೆ ಎಲೆ ಕಾಯವೆ 6 ಎನ್ನಿಂದ ಕೆಡುವೆನೆಂಬನ್ಯವಾದವು ಬೇಡ ನಿನ್ನದೆಲ್ಲವ ಬಲ್ಲೆ ಮಾಯವೆ ಎಲೆ ಜೀವವೆ ಬನ್ನ ಬಡುವೆ ಸತತ ಎನ್ನನರಿವುದು ನಿನ್ನಗಳವೇ ಎಲೆ ಕಾಯವೆ 7 ಹೇವನಿನಗ್ಯಾಕಿಷ್ಟು ಸಾವುತ್ಹುಟ್ಟುತ ನೀನು ನೋಯುವುದ ಬಲ್ಲೆ ನಾ ಮಾಯವೆ ಎಲೆ ಜೀವವೆ ಹೇವದಮಾತಲ್ಲ ಸಾವುಹುಟ್ಟೆನಗಿಲ್ಲ ಕೇವಲನಾದಿಕಾಲದಿರುವೆ ಎಲೆ ಕಾಯವೆ 8 ಕೇವಲನಾದಿಯು ಜೀವ ನೀನಾದರೆ ದೇವರೆ ನೀನಿದ್ದಿ ಮಾಯವೆ ಎಲೆ ಜೀವವೆ ದೇವರು ನಾನಲ್ಲ ದೇವ ಶ್ರೀರಾಮನ ಕೇವಲದಾಸ ನಾನಿರುವೆ ಎಲೆ ಕಾಯವೆ 9
--------------
ರಾಮದಾಸರು