ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲರುಣಿಯ ಶಯ್ಯ ಪವನಾ |ಕಾವೇರಿ ಕೂಲಗ ಚೆನ್ನಾ | ಬಾಬಾರನ್ನಾ ಪ ಕಾಳಿರಮಣನುತ | ಕಾಳಿಂದಿಯ ಮನಕೀಲಾಲಜ ರವಿ | ಬಾಲ ಗೋಪಾಲಾ ಅ.ಪ. ಜಾಣಾ | ನೀರದವರ್ಣಾ | ಜಟೆ ಹೇಮವರ್ಣಾ | ಭಕ್ತ ಪಾವನ್ನಾ |ಮೌನಿ ಕುಲಕೆ ಸನ್ಮಾನ್ಯ ಪರಾಶರಮುನಿ ಸಂಭವ ತವ ಚರಣಕೆ ಶರಣು 1 ಅಹಿ | ಪೇಂದ್ರ ವಂದ್ಯ ಮನಮಂದಿರ ಚಂದಿರ ನಂದವನೀಯೋ 2 ಹೃದ್ಯಾ | ಅಚ್ಛೇದ್ಯ ಭೇದ್ಯಾ | ಹೇ ಅನವದ್ಯಾ | ಇಂದಿರಾರಾಧ್ಯ ಭಾಧ್ಯ ಭಾದಕ ಸನ್ಮೋದ ಪ್ರಮೋದನೆವೇದ ವೇದ್ಯ ಗುರು | ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಜಯಮಂಗಳಂ ಪ ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ 1 ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ 2 ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ 3 ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ 4 ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ವೀರನಾರಾಯಣನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ 5
--------------
ವೀರನಾರಾಯಣ