ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲರುಣಿಯ ಶಯ್ಯ ಪವನಾ |ಕಾವೇರಿ ಕೂಲಗ ಚೆನ್ನಾ | ಬಾಬಾರನ್ನಾ ಪ ಕಾಳಿರಮಣನುತ | ಕಾಳಿಂದಿಯ ಮನಕೀಲಾಲಜ ರವಿ | ಬಾಲ ಗೋಪಾಲಾ ಅ.ಪ. ಜಾಣಾ | ನೀರದವರ್ಣಾ | ಜಟೆ ಹೇಮವರ್ಣಾ | ಭಕ್ತ ಪಾವನ್ನಾ |ಮೌನಿ ಕುಲಕೆ ಸನ್ಮಾನ್ಯ ಪರಾಶರಮುನಿ ಸಂಭವ ತವ ಚರಣಕೆ ಶರಣು 1 ಅಹಿ | ಪೇಂದ್ರ ವಂದ್ಯ ಮನಮಂದಿರ ಚಂದಿರ ನಂದವನೀಯೋ 2 ಹೃದ್ಯಾ | ಅಚ್ಛೇದ್ಯ ಭೇದ್ಯಾ | ಹೇ ಅನವದ್ಯಾ | ಇಂದಿರಾರಾಧ್ಯ ಭಾಧ್ಯ ಭಾದಕ ಸನ್ಮೋದ ಪ್ರಮೋದನೆವೇದ ವೇದ್ಯ ಗುರು | ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಕಂಬು ಕಂಧರ ಸತತ ಬಿಡದೆ ರಕ್ಷಿ ಸಂಬೋಜೋಧ್ಭವನ ತಾತ ಪ ಜಂಭಾರಿ ವೈರಿಕುಲಾಂಬುಧಿ ಕುಂಭಜ ಕುಂಭಿಣಿಸುರ ನಿಕÀರುಂಬ ಪೋಷಕದೇವ ಅ.ಪ ನಳಿನಾಕ್ಷ ನರಕೇಸರಿ ನಂಬಿದೆ ನಿನ್ನ | ಶೌರಿ || ಸಿರಿ | ನಿಲಯ ನಿತ್ಯಾನಂದ ಎಲರುಣಿ ವರಶಾಯಿ ಕಲುಷಸಂಹಾರಕ ಜಲದರಿಪುವಿನ ತನಯಾನನುಜನ ಕಲಹದೊಳು ಜೈನಿದನ ತಾತನ ಕುಲವಿರೋಧಿಯ ಧ್ವಜನ ಜನಕಗೆ ಒಲಿದು ಬೆಂಬಲನಾದ ಕೇಶವ 1 ನಿಗಮ ರಕ್ಷಕ ಕೂರ್ಮಕೀಟ ಮಾನವ ಮೃಗವಟು ಪರಶುರಾಮ ಅಗಜೇಶ ಶರಕಾಲ | ನಗಪತಿ ವರದನೆ ಅ(ಗ)ಗಜರಾಜನ ಮಗಳಿಗೋಸುಗ ನಗುತ ಮಡದಿಯನಗಲಿ ಬಂದು ಜಗದಿ ಪೊತ್ತನ ನಗದಿ ನೆಲಸಿದ ತ್ರಿಗುಣ ವರ್ಜಿತ ಖಗವರೂಧನೆ 2 ಮಂದರೋದ್ಧರ ವಿಶಾಲಮಹಿಮನಾದ ಸಿಂಧೂರ ಪರಿಪಾಲ | ಕಂದರ್ಪಪಿತ ಶಾಮಸುಂರವಿಠಲನೆ ವಂದಿಸುವೆನು ಎನ್ನ | ಬಂಧನ ಬಿಡಿಸಯ್ಯ ಫಣಿ ಪತಿ ಪತಿ ವಿರೋಧಿ | ಪು ರಂದರಾರ್ಯರ ವೃಂದ ವಂದಿತ ನಂದ ಸುತ ಗೋವಿಂದ ಗೋಪತಿ 3
--------------
ಶಾಮಸುಂದರ ವಿಠಲ
ಜಯಮಂಗಳಂ ಪ ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ 1 ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ 2 ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ 3 ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ 4 ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ವೀರನಾರಾಯಣನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ 5
--------------
ವೀರನಾರಾಯಣ
ಪಾದ ಪಂಕಜವನು ಪ ಮಂಕುಮತಿಯ ಬಿಡಿಸಿ ನಿನ್ನ ಕಿಂಕರನೆಂದೆನಿಸೊ ಅ.ಪ. ಕಲಿಯುಗದೊಳು ನೀನು ಸಕಲ ಸುಜನರ ಕಲುಷ ಕಳೆಯುವೆನೆಂದು ಬಹುಮೋದದಿಂದ ಎಲರುಣಿ ಪರುವತದೊಳಗೆ ವಾಸನಾಗಿ ಕರ ಪಿಡಿದಂಥ 1 ತೆತ್ತೀಸಕೋಟಿ ದೇವತೆಗಳು ತನ್ನ ಸುತ್ತಲು ನಿಂತು ಪರಿಚರಿಯವನು ಮಾಡೆ ಎತ್ತ ನೋಡಲು ಸಿರಿಯು ಓ ಎನುತಿರೆ ಚಿತ್ತಜನೈಯ್ಯನು ನಗುತ ನಿಂದಿರುವಂಥ 2 ಭುವನತ್ರಯಂಗಳನೆಲ್ಲ ಲೀಲೆಯಿಂ ಕಾವ ಪವನವಂದಿತನೆ ಮಹಾನುಭಾವ ನವ ಮೋಹನಾಂಗ ಶ್ರೀ ರಂಗೇಶವಿಠಲಜವನ ಬಾಧೆಯ ಬಿಡಿಸಯ್ಯಾ ಶ್ರೀಲೋಲ 3
--------------
ರಂಗೇಶವಿಠಲದಾಸರು
ಪ್ರಾಣ ಗುರು ರಾಮ ವಿಠಲ | ನೀನೆ ಪೊರೆ ಇವಳಾ ಪ ಮೌನಿ ಸದ್ವಂದ್ಯಗೆ | ಶ್ರೀನಿವಾಸದೇವ ಅ.ಪ. ಅರುಹಳೆನ್ನಳವಲ್ಲ | ಗುರುಕರುಣ ಸತ್ಪಾತ್ರೆವರಸುತ್ಯೆಜಸನಿತ್ತ | ಪಾನಕವ ಕೊಂಡುಸಿರಿ ರಮಣ ಮಂದಿರವ | ಸೇರಿ ನಾರಿಳ ಫಲವುಕರಗತವು ಆಗಲದು | ವರಮೂರ್ತಿಎನಿಸೆ 1 ಸುಪ್ತೀಶನಾಜ್ಞೆಯಲಿ | ಇತ್ತಿಹೆನೊ ಅಂಕಿತವಕತೃಸಿರಿ ರಾಮನೆ | ವ್ಯಕ್ತ ತೆರನಾದಾಮಕ್ತಗೊಡೆಯನೆ ದೇವ | ಭಕ್ತವತ್ಸಲಹರಿಯೆಆರ್ತರುದ್ಧರತಾ ಹರಿ | ಅರ್ಥಿಯಲಿಸಲಹೊ 2 ಹರಿದಾಸ್ಯದೊರಕಲ್ಕೆ | ಪೂರ್ವಸುಕೃತವೇ ಮಾರ್ಗತರಳೆ ಅದ ಪಡೆದಿಹಳು | ಕಾರುಣ್ಯ ಮಾರ್ತೆಮರುತಮತದಲ್ಲಿರುವ | ಕಾರುಣದಿ ಪೊರೆ ಇವಳಸರ್ವಜ್ಞಸರ್ವೇಶ | ಸುರ ಸಾರ್ವ ಭೌಮ3 ಭ್ರೂತ ಪಂಚಕದೇಹ | ಸುಸ್ಥಿರವು ಅಲ್ಲೆಂಬಖ್ಯಾತ ಮತಿಯನೆ ಕೊಟ್ಟು | ಸಲಹ ಬೇಕಿವಳಾಮಾತುಮೂತಿಗೆ ನಿನ್ನ | ನಾಮ ಸಂಸೃತಿಯಿತ್ತುಈ ತರಳೆನುದ್ದರಿಸು | ಮಾತಳಾಂತಕನೆ4 ಹಲವು ಮಾತೇಕೆ ಹರಿ | ಕಲಿಯುಗದಿ ತವನಾಮಬಲುಮಂದಿ ಜಪಿಸುತ್ತ | ಭವವ ದಾಂಟಿಹರೊಒಲಿಮೆಯಿಂದವಳನ್ನು | ಸಲಹಲ್ಕೆ ಪ್ರಾರ್ಥಿಸಿಹೆಎಲರುಣಿ ಶಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬಲು ರಮ್ಯವಾಗಿದೆ ಹರಿಯ ಮಂಚ ಪ ಎಲರುಣಿಕುಲ ರಾಜ ರಾಜೇಶ್ವರನ ಮಂಚಅ.ಪ. ಪವನತನಯನ ಮಂಚ ಪಾವನತರ ಮಂಚ ಭುವನತ್ರಯನ ಪೊತ್ತ ಭಾರಿಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ 1 ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಗೆ ಎರಡುಳ್ಳ ನೈಜಮಂಚ ನಾಲ್ವತ್ತು ಕಲ್ಪದಿ ತಪವ ಮಡಿದ ಮಂಚ ತಾಲ ಮುಸಲ ಹಲವ ಪಿಡಿದಿರುವ ಮಂಚ 2 ರಾಮನನುಜನಾಗಿ ರಣವ ಜಯಿಸಿದ ಮಂಚ ತಾಮಸ ರುದ್ರನನು ಪಡೆದ ಮಂಚ ಭಿಮಾವರಜನೊಳು ಆವೇಶಿಸಿದ ಮಂಚ ಜೀಮೂತ ಮಂಡಲವ ತಡೆಗಟ್ಟಿದ ಮಂಚ 3 ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ ಸಾವಿರ ಮುಖದಿಂದ ತುತ್ತಿಸಿ ಹಿಗ್ಗುವ ಮಂಚ ದೇವಕೀಜಠರದಿ ಜನಿಸಿದ ಮಂಚ4 ವಾರುಣೀ ದೇವಿ ವರನೆನಿಸಿದ ಮಂಚ ಸಾರುವ ಭಕುತರ ಸಲಹೊ ಮಂಚ ಕಾರುಣ್ಯನಿಧಿ ಜಗನ್ನಾಥ ವಿಠಲನ ವಿ ಹಾರಕ್ಕೆ ಯೋಗ್ಯವಾದ ವಿಮಲ ಶೇಷ ಮಂಚ5
--------------
ಜಗನ್ನಾಥದಾಸರು
ವಾದಿರಾಜ ಪ್ರತಿವಾದಿ ಗಜೇಂದ್ರ ಧ ರಾಧರಾಟ ವಿಬೋಧದಿ ಚಂದ್ರ ಪ ಸಮಯವಿದೆಂದು ಉತ್ಕøಮಣವ ತೊರೆದೆ 1 ಬಂದು ಕರೆಯಲು ಪುರಂದರನಾಳ್ಗಳ ಹಿಂದಟ್ಟಿದೆ ಕರ್ಮಂದಿಗಳರಸ 2 ಆರ್ಥಿಗಳಿಗೆ ಪರಮಾರ್ಥ ಕೊಡುವ ಸ ತ್ತೀರ್ಥ ಪ್ರಬಂಧವ ಕೀರ್ತನೆ ಗೈದೆ 3 ಅದ್ವೈತ ಸಮಿಧಿ ಮಧ್ವ ಸುಸಿದ್ಧಾಂ ತಿಧ್ಮಜಿಂಹದಿ ಪ್ರಧ್ವಂಶಿಸಿದೆ 4 ಪಾವನೀಯ ಸುಮತಾವಲಂಬಿಗಳ ತಾವಕರೆಂದೀವುದು ವರವ 5 ಎಲರುಣಿ ಭಯಕಂಜಿಲಿ ನಿಮ್ಮಾಸನ ಕೆಳಗಿರೆ ಕಂಡದನುಳುಹಿದೆ ಕರುಣಿ 6 ಹಯಮುಖ ಪಾದದ್ವಯ ಭಕ್ತಾಗ್ರನೀ ದಯದಿ ವಿಪ್ರನಿಗೆ ನಯನಗಳಿತ್ತೆ 7 ಭಾಗೀರಥಿಯಂತ್ಯೋಗಿ ವರಗುರು ವಾಗೀಶರ ಕರಾಬ್ಜ ಸಂಭವನೆ 8 ನಮಿಪೆ ತ್ವತ್ಪದಕಮಲಗಳಿಗೆಮ ಧ್ವಮತ ಸರೋರುಹ ದ್ಯುಮಣಿಯೆ ನಿರುತ 9 ಗರಮಿಶ್ರಿತ ನರಹರಿ ನೈವೇದ್ಯವ ನರಿತು ಪೇಳೆ ಉಂಡರಗಿಸಿಕೊಂಡೆ 10 ಪೂತಾತ್ಮ ಜಗನ್ನಾಥವಿಠಲನ ಖ್ಯಾತಿಯ ತುತಿಸುವನಾಥ ಜನಾಪ್ತ 11
--------------
ಜಗನ್ನಾಥದಾಸರು
ಶ್ರೀ ಮಹಾದೇವರು ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1 ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2 ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
--------------
ಶಾಮಸುಂದರ ವಿಠಲ