ಒಟ್ಟು 8 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿಮುಖದ ಗಣಪತಿಯ ಚರಣಕ್ವಂದನೆ ಮಾಡಿ ಶಾರದೆಗೆ ಶಿರಬಾಗಿ ಬೇಡಿಕೊಂಬುವೆ ನಾನು ಒಲಿದೆನಗೆ ವರವ ಕೊಡುಯೆಂದು 1 ಭವ ನಾರಂದ ಸುಜನರ್ವಂದಿತ ವಾಯು ಮುದದಿಂದ ಮುದ್ದು ಮಾಲಕ್ಷ್ಮಿ ನಾರಾಯಣರ ಅಂಬುಜ ಪಾದಕ್ಕೆರಗಿ ನಮೋಯೆಂಬೆ 2 ಪದುಮನಾಭ ಹರಿಗೆ ನಿಜ ಭಕ್ತರಾದಂಥ ಬುಧ ಬೃಹಸ್ಪತಿಗಳ ಕಥೆಯ ಪೇಳುವೆ ನಾನು ಮುದದಿಂದ ಕೇಳಿ ಜನರೆಲ್ಲ3 ಇರುತಿದ್ದ ಬಡವ ಬ್ರಾಹ್ಮಣ ಒಂದು ಪಟ್ಟಣದಿ ಮಡದಿ ಮಕ್ಕಳು ನಾಲ್ಕು ಮಂದಿ ಸುತರು ಸೊಸೆಯರೊಡಗೂಡಿಕೊಂಡು ಸುಖದಿಂದ 4 ಒಬ್ಬೊಬ್ಬ ಸುತಗಿಬ್ಬಿಬ್ಬರು ಗಂಡಸು ಮಕ್ಕಳು ವಿಧ್ಯುಕ್ತದಿಂದ ಜಾವಳ ಜುಟ್ಟು ಉಪನಯನ ಶುದ್ಧಾತ್ಮರಾಗಿ ಇರುತಿಹರು 5 ಪ್ರಾತಃಕಾಲದೊಳೆದ್ದು ನಾಲ್ಕು ಮಂದಿ ಸುತರು ಗೋಪಾಳ ಜೋಳ ನಾಲ್ಕು ಸೇರು ಕಾಳು ತಂದ್ಹಾಕೋರು ಅರ್ಧಗ್ರಾಸವನು 6 ಮೂರು ಪಾವು ಹಿಟ್ಟು ಮುಂಜಾನೆಗೆ ಇಟ್ಟು ಗ್ರಾಸ ಮುದ್ದೆ ಅಂಬಲಿ ಕಾಲ ಕಳೆವೋರು 7 ಒಂದಾನೊಂದಿನದಲ್ಲಿ ಬಂದರಿಬ್ಬರು ದ್ವಿಜರು ಮಂದಿರದ ದ್ವಾರದಲಿ ನಿಂತು ಕೂಗುತಿರೆ ಬಂದಳೊಬ್ಬಿ ್ಹರಿಯ ಸೊಸೆ ತಾನು 8 ದಾರು ಬಂದವರು ನಿಮ್ಮ ನಾಮವೇನೆಂದೆನುತ ಬಾಗಿ ಶಿರಗಳನೆ ಚರಣಕ್ವಂದನೆ ಮಾಡಿ ಭಾಳ ಭಕ್ತಿಂದ ಕರೆದಳು 9 ದಾರಾದರೇನಮ್ಮ ಬಾಯಾರಿ ಬಳಲುತಲಿ ಮೂರು ನಿರಾಹಾರ ಮಾಡಿ ಬಂದೆವು ನಾವು ಆಹಾರ ನೀಡಿ ಕಳಿಸೆಂದ್ರು 10 ಭಿಕ್ಷಕೆ ಹೋದವರು ಈ ಕ್ಷಣದಿ ಬರುವೋರು ಅರೆಕ್ಷಣ ನೀವು ತಡೆದರೆ ಜೋಳದ ಭಕ್ಷ್ಯವನೆ ಮಾಡಿ ಬಡಿಸುವೆನು 11 ಹೊತ್ತು ಭಾಳಾಯಿತು ಹಸ್ತವು ನಮ್ಮೊ ್ಹಟ್ಟೆ ತುತ್ತನ್ನ ಹಾಕಿದರೆ ಈಗ ನಾವದನುಂಡು ತೃಪ್ತರಾಗ್ಹರಸಿ ನಡೆದೇವು 12 ಮಡಿವುಟ್ಟು ಮಾಡಿದೆನು ಮುಂಜಿಮನೆಗಳಿಗಡಿಗೆ ತಡೆಯದೆ ಸ್ನಾನಮಾಡಿ ಬನ್ನಿರೆಂದು ನುಡಿದಳು ಬ್ಯಾಗ ಪತಿವ್ರತೆ 13 ನಾಲ್ಕು ಭಕ್ಕರಿಯೊಳಗೆ ಎಂಟರ್ಧವನು ಮಾಡಿ ಎಂಟುಮಕ್ಕಳಿಗೆ ಬಡಿಸೋ ಗ್ರಾಸವನು ಸಂತೋಷದಿಂದ ಬಡಿಸುವೆನು 14 ಸ್ನಾನ ಸಂಧ್ಯಾನವ ಮಾಡಿ ಬಂದೇವೆನಲು ತಾನು ಎಡೆಮಾಡಿ ಎರಡೆರಡು ಭಕ್ಕರಿಯ ನೀಡಿದಳು ಭಾಳ ಭಕ್ತಿಂದೆ 15 ಬೆಣ್ಣೆ ಬೆಲ್ಲ ತುಪ್ಪ ಕರಣೆ ಕರಣೆ ಕೆನೆಮೊಸರು ನುಣ್ಣನೆ ತವ್ವೆ ಅರೆದಕೊಬ್ಬರಿ ಖಾರ ಉಣ್ಣಿರೆಂದ್ಹಾಕುತಿರಲಾಗ 16 ಸಡಗರದಲದನುಂಡು ಕುಡಿದು ಮ್ಯಾಲ್ ಮಜ್ಜಿಗೆಯ ಒಡೆದಡಿಕೆಯೆಲೆ ಕೊಟ್ಟು ಕೇಳುತ ನಿಮ್ಮ ನಡೆವೊ ನಾಮೇನು ಹೇಳೆಂದ್ಲು 17 ಇಂದುಸುತ ಸುರರ ಗುರುವೆಂದು ಪೇಳುವರ್ ನಮಗೆ ಬಂದೆವು ನಾವು ಬುಧ ಬೃಹಸ್ಪತಿಗಳು ಆ- ನಂದವಾಯಿತು ನಮಗೆಂದ್ರು 18 ಅನ್ನ ಬೇಕಾದರೆ ಅಡಿಗೆ ಒಲೆಗೋಡೆಯಲಿ ನ- ಮ್ಮನ್ನ ಬರೆದು ಪೂಜೆ ಮಾಡಿದರೀಗ ಅನ್ನವನು ನಾವು ಕೊಡುವೆವು 19 ಭಾಗ್ಯ ಬೇಕಾದರೆ ಬರೆದು ಪೆಟ್ಟಿಗೆಮ್ಯಾಲೆ ಭಾಳ ಭಕ್ತಿಂದ ಪೂಜೆ ಮಾಡಿದರೆ ಭಾಗ್ಯ ಕೊಡುವೆವೆಂದ್ಹೇಳಿ ನಡೆದರು 20 ಸುಣ್ಣಸಾರಣೆಮಾಡಿ ಬಣ್ಣ ಚಿತ್ರವ ಬರೆದು ಚೆನ್ನಾಗಿ ಬರೆದು ಬುಧ ಬೃಹಸ್ಪತಿಗಳನೆ ಮನ್ನಿಸಿ ಪೂಜಿಸಿದಳಾಗ 21 ಹಚ್ಚಿಟ್ಟು ಗಂಧಾಕ್ಷತೆ ಪುಷ್ಪಗಳ ಉತ್ರಾಣಿ ಅಕ್ಕಿ ಮಂತ್ರಾಕ್ಷತೆ ಮಾಡಿ ಭಕ್ತಿಂದೆ ಪೂಜಿಸಿದಳಾಗ 22 ಗೋಪಾಳಕ್ಕ್ಹೋದಲ್ಲಿ ಗೋಧಿ ಅಕ್ಕಿ ಬ್ಯಾಳೆ ಹಾಕುವರು ನಾಲ್ಕು ಬೀದಿಯಲಿ ಅದು ಗಂಟು ತಾವ್‍ಕಟ್ಟಿ ಹೊತ್ತರ್ಹೆಗಲಲ್ಲಿ 23 ಹಿಡಿಜೋಳ ಬೇಡಿದರೆ ಪಡಿಜೋಳ ಹಾಕುವರು ಬಡವರು ನೀವು ಬನ್ನಿರೆಂದು ಕರೆದು ಹಿಡಿಹಿಡಿ ರೊಕ್ಕ ಕೊಡುವೋರು 24 ಭರದಿಂದ ಬಂದಾಗ ಸುರುವಿದರು ಧಾನ್ಯವನು ಬರೆದಂಥ ಗೊಂಬೆ ನೋಡಿ ಕೇಳುತ ಅದರ ವಿವರವನು ಹೇಳಬೇಕೆನುತ 25 ಇವರು ಬುಧ ಬೃಹಸ್ಪತಿಗಳೆಂಬೊ ದೇವತೆಗಳು ಇವರು ಬಂದೆನ್ನ ಮನೆಯಲ್ಲೂಟವನುಂಡು ಒಲಿದ್ವರವ ಕೊಟ್ಟು ನಡೆದರು26 ಇಂಥÀವರ ಪುಣ್ಯದಿಂದೀ ಧಾನ್ಯ ದೊರಕಿದವು ನಿ ರಂತರದಿ ನಮ್ಮ ಮನೆಯಲ್ಲಿಟ್ಟವರನು ಸಂತೋಷದಲಿ ಪೂಜಿಸುವಣೆಂದ್ರು 27 ಭಾಳ ಅನ್ನವ ಮಾಡು ಜೋಳ ಭಕ್ಕರಿ ಮಾಡು ಬ್ಯಾಳೆಯ ತವ್ವೆ ಬೆಲ್ಲ ಪಲ್ಯವು ಬೆಣ್ಣೆ ಮಾಡಿ ನೈವೇದ್ಯಕ್ಕಿಡುಯೆಂದ್ರು&ಟಿbs
--------------
ಹರಪನಹಳ್ಳಿಭೀಮವ್ವ
ಪಾಲಿಸಮ್ಮ ತುಳಸಿ ಹೂ ತಡವ ಮಾಡದೆ ನಿನ್ನ ವಾರಿ ತುರುಬಿನಲ್ಲಿ ಇರುವ ಪಾರಿಜಾತವಾ ಪ. ಒಂದೊಂದು ದಳದಲ್ಲಿ ಒಂದೊಂದು ಮೂರುತಿ ಒಂದನೇ ಕಾಲದಲ್ಲಿ ವರವ ಕೊಡುವಳು 1 ಎರಡೆರಡು ದಳದಲ್ಲಿ ಎರಡು ಮೂರುತಿ ಎರಡನೆ ಕಾಲದಲ್ಲಿ ವರವ ಕೊಡುವಳು 2 ಮೂರನೇ ಕಾಲದಲ್ಲಿ ಮೂರು ಮೂರುತಿ ಸಾರಿ ಶ್ರೀ ಶ್ರೀನಿವಾಸ ಸಲಹುವನೆ 3
--------------
ಸರಸ್ವತಿ ಬಾಯಿ
ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ ಪ ಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ ಅ.ಪ. ಚಾರು ಚರಣ ಸರೋರುಹ ಕೆರಗುವೆ | ಚಾರುಮತಿಯ ಕೊಡೆ 1 ಮೂರು ಗುಣಾಭಿಮಾನೀ | ಮಾಳ್ಪುದುಮೂರು ಗುಣಗಳ್ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ ನೆಂದು | ಬಾರಿ ಬಾರಿಗೆ ಪೇಳ್ವ 2 ಗುರು ಗೋವಿಂದ ವಿಠಲಾ | ನಿನ್ನೊಡವೆರಸಿ ಸೃಜಿಪ ಜಗಂಗಳಾ ||ಎರಡೆರಡು ವ್ಯೂಹಕಾಗಿ | ಎರಡೆರಡು ರೂಪ ತಾಳೆಎರಡೆರಡು ನೀನು ಆಗಿ | ಹರಿ ಕಾರ್ಯಕನುವಾದೆ 3
--------------
ಗುರುಗೋವಿಂದವಿಠಲರು
ಪುರಂದರ ಗುರುವೆ ಪ ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ಅ.ಪ ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ | ಗುರು ವ್ಯಾಸರಾಯರಿಂದುಪದೇಶಗೊಂಡೆ || ಎರಡೆರಡು ಲಕ್ಷದಿಪ್ಪತೈದು ಸಾವಿರ | ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ 1 ಗಂಗಾದಿ ಸಕಲ ತೀರ್ಥಂಗಳ ಚರಿಸಿತು | ರಂಗವದನ ವೇದವಾಸ್ಯನ || ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ | ಮಂಗಳ ಮಹಿಮೆಯ ನುತಿಸಿ ನುತಿಸಿ ನಾ 2 ನಿನ್ನತಿಶಯಗುಣ ವರ್ಣಿಸಲಳವಲ್ಲ | ನಿನ್ನ ಸೇವಕನ ಸೇವಕನೆಂತೆಂದು || ಪನ್ನಗಶಯನ ಮುಕುಂದ ಕರುಣ ಪ್ರ | ಸನ್ನ ವಿಜಯವಿಠ್ಠಲ ಸಂಪನ್ನ 3
--------------
ವಿಜಯದಾಸ
ಮಾನವ ಪ ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ ಶರಧಿ ಚಂದಿರನಾದ ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ ಪರಮ ಸಾಧು ಸಹ್ಲಾದ ಅ.ಪ ತರಣಿ ತನಯನ ಸೂತ ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ ಮರುತ ದೇವನ ಪದಕೆ ಬರುವ ಯತಿಗಳ ದೂತ ವರದೇಂದ್ರ ತೀರ್ಥರಿಗೆ ಪ್ರೀತ || ಗುರುಧೇನು ಪಾಲ ವಿಜಯ ದಾಸವರ್ಯರ ಮಮತ ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ ನಮಗೀತ ಗತಿ ಪ್ರದಾತ 1 ದುರಿತ ವಿದೂರ ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ ಸಾರಿದಂಥ ಸುಧೀರ || ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ ಸುಜನ ಕೋರಿಕೆಯ ಮಂದಾರ ಭೂರುಹದ ತೆರದಿ ಘುನ ಸೂರೆ ಕೊಡುವನುದಾರ ದುರಿತವಿಪಿನ ಕುಠಾರ 2 ಇವರ ಕವನ ಪಠಣ ಶ್ರವಣ ಮನನಗಳಿಂದ ಲವಕೇಶವಾಗದು ಜವನ ಭವನದ ಬಂಧ ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ ಗೈದ ಮನಜ ದಿವಾಂಧ | ಭುವನದೊಳು ಬೆಳಗುತಿಹ ಇವರ ಮಹಿಮಾನಂದ ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ ನೆಲಸಿಹವು ನಲವಿಂದ 3 ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ ಹರಿಗೆ ಪಂಚಪ್ರಾಣ || ಅರುಹಲೇನಿವರ ಚರಣನಂಬಿದ ಸುಜನ ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ ಸೇರಿದರು ನಿಜ ಸ್ಥಾನ 4 ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ ತಿಮಿರ ದಿನೇಶ ಭೂಮಿ ವಿಬುಧರ ಪೋಷ || ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ ಸುಜನ ಕುಮುದ ವಿಕಾಸ ಗೊಳಿಸಿಗರೆದುದುಲ್ಹಾಸ 5
--------------
ಶಾಮಸುಂದರ ವಿಠಲ
ಶ್ರೀಸತ್ಯವ್ರತರು ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ. ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1 ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2 ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3 ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4 ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5
--------------
ಗುರುಗೋವಿಂದವಿಠಲರು