ಏನೂ ಸಾರ್ಥಕವಿಲ್ಲವೋ ಪ
ಏನೂ ಸಾರ್ಥಕವಿಲ್ಲ ಜ್ಞಾನಮಾರ್ಗಗಳಿಲ್ಲ
ಮಾನಸ ಸ್ಥಿರವಿಲ್ಲ ಶ್ರೀನಾಥನಿದಬಲ್ಲ ಅ.ಪ
ಎರಡುಕಂಬದ ಮೇಲೆ ಇರುವ ಪಂಜರವಿದು
ಬರಿಯಡಂಭದ ಜಗವು ಸ್ಥಿರವೆಂಬ ತನುವಿನೊಳು 1
ತೈಲವಿಲ್ಲದ ದೀಪ ಮಲಿನವಾಗುವ ತೆರದಿ
ಸುಲಭದೊಳಿಹ ಪ್ರಾಣ ತೊಲಗಿದ ಬಳಿಕಿನ್ನು 2
ಸಂತೆಗೈದಿದ ಜನದಂತೆ ಪಂಚೇಂದ್ರಿಯವ
ನಾಂತ ದೇಹವು ವ್ಯರ್ಥ ಅಂತರಾತ್ಮನು ಹೋಗೆ 3
ರಸನೆ ತೊದಲುವ ಮೊದಲು ಅಸುವು ಪೋಗುವ ಮೊದಲು
ಅಸುರಾರಿ ಎಂಬ ಮಧುವ ರಸನೆಯೊಳಿಡೋ ಮನುಜ4
ದಿನದಿನ ಹರಿಕೃಷ್ಣ ವನಮಾಲಿಯ ನುತಿಸೋ
ತನುವ ಪ್ರಾಣವ ಬಿಡುವ ದಿನವನರಿಯೆ ನೀನು 5
ದೇವದೇವನೆ ನಿನ್ನ ಸೇವಕನೆಂದೆನ್ನ
ಭಾವಿಸೋ ಮದನಾಂಗ ಮಾವಿನಕೆರೆರಂಗ6