ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟಾಚಲನಿಲಯಾ ಎನ್ನ ಒಡೆಯ ಪ ವೆಂಕಟಾಚಲನಿಲಯಾ ವಿಧಾತೃಸಂತರೊಡೆಯಾ | ಪಂಕಜಮುಖಿ ರಮಣ ಪಾವನಚರಣಾಅ.ಪ. ಉದಯವಾಗದ ಮುನ್ನ ಉದರ ಪೋಷಣೆ ಚಿಂತೆ | ಅದರ ಮೇಲೆ ಧಾನ್ಯ ಧನದ ಚಿಂತೆ || ಮದನ ಯೌವನದ ಚಿಂತೆ ಮತ್ತೆ ಸತ್ವದ ಚಿಂತೆ | ಹೃದಯದಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟೆ1 ಮೇದಿನಿ ಆಳುವ ಆಶೆ | ನಂದನರ ಆಶೆ ನಾನಾ ಆಶೆಯು || ಬಂಧುಬಳಗದ ಆಶೆ ಭಾಗ್ಯವುಳ್ಳವನಾಶೆ | ಒಂದು ದಿನ ನಿಮ್ಮಾಶೆಯನು ಮಾಡದಲೆ ಕೆಟ್ಟಿ 2 ಎದುರುಯಿಲ್ಲವೆಂಬೊ ಗರ್ವ ಎದೆಯ ಬಿಗುವಿನ ಗರ್ವ | ವದನನಿಷ್ಠುರ ಗರ್ವ ವಿದ್ಯ ಗರ್ವವು || ಉದಧಿಶಯನ ನಮ್ಮ ವಿಜಯವಿಠ್ಠಲರೇಯಾ | ಮದ ಗರ್ವದಿಂದ ನಿನ್ನ ನೆನಹು ಮಾಡದೆ ಕೆಟ್ಟೆ 3
--------------
ವಿಜಯದಾಸ