ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ ಜಗದೊಳಗೆ ಧ್ರುವ ಶಿರದಲಭಯವ ನೀಡಿ ಕರುಣದಯದಲಿ ನೋಡಿ ಹರುಷ ಮನವನು ಮಾಡಿ ದುರಿತಭವ ಈಡ್ಯಾಡಿ ಗುರುತ ನಿಜ ಮಾಡರಹು ನೀಡಿ ಪರಮ ಗತಿ ಇದರಿಡಿ ವರಕೃಪೆಯ ಮಾಡಿ 1 ಒಂದು ಪಥವನು ತಿಳಿಸಿ ದ್ವಂದ್ವ ಭೇದವನಳಿಸಿ ಕುಂದ ದೋಷವ ತೊಳಿಸಿ ಒಂದರೊಳು ನಿಲಿಸಿ ನೆಲೆಗೊಳಿಸಿ ಸಂದು ಜನ್ಮಗಳಳಿಸ್ಯಾನಂದ ಸುಖ ಹೊಳಿಸಿ 2 ಕರುಣಿಸೊ ಗುರು ಎನಗೆ ಶರಣ ಹೊಕ್ಕಿದೆ ನಿಮಗೆ ದೋರುದನುಭವ ಈಗೆ ಕರಗಿ ಮನವೆರಗುವ್ಹಾಂಗೆ ಸ್ಮರಣ ಸುಖ ಎದುರಿಡು ಬ್ಯಾಗೆ ತರಣೋಪಾಯದಲೆನೆಗೆ ಪೊರೆಯೊ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳಿಕೊ ಗುರುಬುದ್ಧಿ ಮನವೆ ಕೇಳಿಕೊ ಗುರುಬುದ್ಧಿ ಕೇಳಿ ನಡೆಯದಿದ್ದರೆ ನೀನು ಜನ್ಮಕ ಜಾರಿಬಿದ್ದಿ ಮನವೆ ಧ್ರುವ ವೇದಕ ನಿಲುಕದ ಹಾದಿಯದೋರುವ ಸದ್ಗರುವಿನ ಸುಬುದ್ಧಿ ಸಾಧಿಸಿ ನೋಡಲು ತನ್ನೊಳಗ ತಾ ಎದುರಿಡುವುದು ಸುಶುದ್ಧಿ ಭೆದಿಸದಲ್ಲದೆ ತಿಳಿಯದು ಎಂದಿಗೆ ಆದಿ ತತ್ವದ ನಿಜ ಶುದ್ಧಿ ಸುಬೋಧದಲಿ ಗೆದ್ದಿ 1 ತರಣೋಪಾಯಕೆ ಸಾಧನವೇ ಮುಖ್ಯ ಗುರುಬುದ್ಧಿಯ ವಿಶೇಷ ಪರಗತಿ ಸಾಧನ ಪಡೆದೇನಂದರೆ ಗುರು ಮಾತ ಉಪದೇಶ ದೋರುದು ತಾ ಹರುಷ ಭವ ಬಂಧಪಾಶ 2 ಗುರು ಘನಸೌಖ್ಯ ಸುರಮುನಿ ಜನರಿಗೆ ಬಲು ಅಗಮ್ಯದೋರುವದೆ ಆಠಕ್ಯ ತರಳ ಮಹಿಪತಿ ಮನವೆÀ ಕೇಳು ಗುರುರಾಯನ ಸುವಾಕ್ಯ ಪರ ಗೆಲಿಸುವದು ನಿಜಮುಖ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾದದ ಮನಿಯು ತಿಳಿಯದೆ ಬಾರದು ಸಾಧಿಸಿ ಸದ್ಗತಿ ಸುಖ ಭೇದಿಸಿ ತಿಳಿದರೆ ಬೋಧದಿ ಮನವು ಎದುರಿಡುವದು ಧ್ರುವ ತನುವಿನೊಳಿಹ ಪ್ರಣಮವು ಮುನಿಜನಗಳಿಗಿದೆ ಸಾಧನ ಮುಖ್ಯವು ಸ್ವಾನಂದದ ಸುಖಧನವು ಏನ ಬಲ್ಲವು ಖೂನದ ಮಾತು ಹೀನ ಮರುಳ ಜನವು ತಾನೆ ತಾನಾಗಿಹುದು ಓಮಿತ್ಯೇಕಾಕ್ಷರದ ಘನವು 1 ಬಲು ತಾಳ ಭೇರಿ ಮೃದಂಗ ಬ್ರಹ್ಮಾನಂದದ ಸುಖದೋರುವದು ಮೇದಿನಿಯೊಳು ಸತ್ಸಂಗ ಒಮ್ಮನನಾದರೆ ಸಾಧಿಸಿಬಹುದು ಸುಮ್ಮನೆ ಪ್ರಾಣಲಿಂಗ ಕೇಳುವದಂತರಂಗ 2 ಅನುದಿನ ಧಿಮ ಧಿಮಾಟ ಹಾದಿ ತೋರಿಕೊಟ್ಟಿತು ಅಧ್ಯಾತ್ಮದ ಸದ್ಗುರುವಿನ ದಯನೋಟ ಸುಪಥ ನೀಟ ಮಣಿಮುಕುಟ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸದೆ ಹೊಳೆಯ ಹೃದಯದೊಳಿಹ್ಯ ಗೆಳಿಯ ಧ್ರುವ ಸಾಧಿಸಬೇಕೊಂದು ಪಾಲ ಭೇದಿಸಿ ನೋಡುವದ್ಹತ್ತುಪಾಲ ಎದುರಿಡುವಂತೆ ಗೋಪಾಲ ಬುಧಜನ ಪ್ರತಿಪಾಲ 1 ಸಾಧನವೆಂಬುದೆ ಸುಪಥ ಬೋಧವೆ ಸದ್ಗುರುಮಾರ್ಗ ಸ್ವಹಿತ ಸದಮಲಾನಂದಭರಿತ ಇದೇ ಶಾಶ್ವತ 2 ಸಾಧಿಸಿ ಸದ್ಗುರು ಕೃಪೆಯಿಂದ ಭೇದಿಸು ಮಹಿಪತಿ ನಿನಗಿಂದು ಚೆಂದ ಹೃದಯದೊಳ್ಹಾನ ಮುಕುಂದಬದಿಯಲಿ ಗೋವಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು